ದಾವಣಗೆರೆ

ಬೀಳುವ ಸರ್ಕಾರಕ್ಕೆ ಊರುಗೋಲಾಗೆವು

ಜಗಳೂರು: ಜನರ ಬಳಿ ಹೋಗಿ ಮತ ಕೇಳುವುದಕ್ಕೂ ಮುಖವಿಲ್ಲದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮ್ಮ ಮೊದಲ ಮತ್ತು ಸರ್ಕಾರದ ಕಡೆಯ ಬಜೆಟ್‌ನಲ್ಲಿ ಮತ ಸೆಳೆಯುವ ಹುನ್ನಾರಕ್ಕೆ ಮುಂದಾಗಿದ್ದು, ಇಂತಹ ಬಿದ್ದು ಹೋಗುವ ಸರ್ಕಾರಕ್ಕೆ ಊರುಗೋಲಾಗಿ ನಾವು ನಿಲ್ಲಲಾರೆವು ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಜಗದೀಶ ಶೆಟ್ಟರ್‌ಗೆ ಜನರ ಬಳಿ ಹೋಗಿ ಮತ ಕೇಳಲು ಮುಖವಿಲ್ಲ. ಈ ಕಾರಣಕ್ಕಾಗಿ ತಮ್ಮ ಚೊಚ್ಚಲ ಹಾಗೂ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಮಕ್ಮಲ್ ಟೋಪಿ: ಬೀಳುತ್ತಿರುವ ಸರ್ಕಾರಕ್ಕೆ ಊರುಗೋಲಾಗಿ ನಿಲ್ಲುವ ಕೆಲಸ ಜೆಡಿಎಸ್ ಮಾಡುವುದಿಲ್ಲ. ಮೇ ಅಂತ್ಯಕ್ಕೆ ವಿದಾಯ ಹೇಳುವ ಬಿಜೆಪಿ ಸರ್ಕಾರಕ್ಕೆ ಜನರ ಬಳಿ ಹೋಗುವ ನೈತಿಕತೆಯೂ ಉಳಿದಿಲ್ಲ. ಕೋಟಿಗಟ್ಟಲೆ ಹಣ ಸುರಿದು, ಅಧಿವೇಶನ ನಡೆಸುತ್ತಿದ್ದಾರೆ. ರೈತರು, ದೀನ, ದಲಿತರಿಗೆ ವಿಶೇಷ ಆದ್ಯತೆ ನೀಡಿರುವುದಾಗಿ ಇಂದ್ರ, ಚಂದ್ರಲೋಕದ ವೈಭವವನ್ನೇ ಧರೆಗಿಳಿಸಿದ್ದೇವೆಂಬ ಮಾತುಗಳನ್ನಾಡಿ ಅಮಾಯಕ ಜನರಿಗೆ ಮಕ್ಮಲ್ ಟೋಪಿ ಹಾಕಲು ಶೆಟ್ಟರ್ ಮುಂದಾಗಿದ್ದಾರೆ ಎಂದರು.
53 ಲಕ್ಷ ಪರಿಹಾರ ನೀಡಿದ್ದೆ: ಬರ ಪೀಡಿತ ಜಗಳೂರು ತಾ. ಸಿದ್ದಯ್ಯನಕೋಟೆ ಗ್ರಾಮದ ರೈತರು ಬೆಳೆದ ಮೆಕ್ಕೆಜೋಳ ಹಾಗೂ ರಾಗಿ ಬಣವೆಗಳು ಸುಟ್ಟು, ಸುಮಾರು 12 ಲಕ್ಷ ನಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ಥ ರೈತರಿಗೆ ಭೇಟಿ ಮಾಡಿ, ಸಾಂತ್ವನ ಹೇಳುವ, ಪರಿಹಾರ ಕೊಡಿಸುವ ಬದಲು, ಕಾನೂನು ರೀತಿಯಲ್ಲಿ ಪರಿಹಾರ ನೀಡುವುದು ಯಾವ ನ್ಯಾಯ. ನಾನು ಸಿಎಂ ಆಗಿದ್ದಾಗ ಸವದತ್ತಿ ತಾ. ಗ್ರಾಮದವೊಂದರಲ್ಲಿ ಇದೇ ರೀತಿ ದುರಂತ ಸಂಭವಿಸಿದ್ದಾಗ, 53 ಲಕ್ಷ ಪರಿಹಾರ ನೀಡಿದ್ದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಟಿ. ದಾಸಕರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ, ಕಾರ್ಯಾಧ್ಯಕ್ಷ ಬಿ.ಎಂ. ಸತೀಶ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್