ನ್ಯಾಮತಿ: ಭೂವೈಕುಂಠ ತಿರುಪತಿ- ತಿರುಮಲ ದೇವಸ್ಥಾನಕ್ಕೆ ಲೋಕಕಲ್ಯಾಣಕ್ಕಾಗಿ ಪಾದಯಾತ್ರೆಯ ಮೂಲಕ ಹೋಗಿ ಸ್ವಾಮಿಯ ದರ್ಶನ ಪಡೆದು ಬಂದಿರುವ ಗೋವಿಂದಸ್ವಾಮಿಗಳು ಫೆ.16ರಂದು ತಿಮ್ಮಪ್ಪದೇವರು ಮತ್ತು ಸುರಹೊನ್ನೆ ಗ್ರಾಮ ದೇವತೆಗಳು ಹಾಗೂ ಸುತ್ತಮುತ್ತಲಿನ ಗ್ರಾಮದ ದೇವರ ರಾಜಬೀದಿ ಉತ್ಸವ ನಡೆಯುವುದು. ಹರಿಸೇವೆ ಮತ್ತು ಅನ್ನಸಂತರ್ಪಣೆ ನಡೆಯುವುದೆಂದು ಸುರಹೊನ್ನೆ ಭೂವೈಕುಂಠ ತಿರುಮಲ- ತಿರುಪತಿ ಪಾದಯಾತ್ರಾ ಸಮಿತಿ ತಿಳಿಸಿದೆ.
ಸುರಹೊನ್ನೆ ಗ್ರಾಮದ ಸರ್ವ ಭಕ್ತಾದಿಗಳು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ.