ದಾವಣಗೆರೆ

ಮೀಸಲಾತಿ ಕಬಳಿಕೆ ಹುನ್ನಾರ: ಪ್ರತಿಭಟನೆ

ಜಗಳೂರು: ರಾಜ್ಯದ ವೀರಶೈವ ಬೇಡ ಜಂಗಮರು ಸರ್ಕಾರಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಡಾ.ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿ ಹಿತಾರಕ್ಷಣಾ ಸಮಿತಿಯ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಸಮಾಜ ಬಾಂಧವರು ಪಟ್ಟಣದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಆದಿ ಜಾಂಬವ ಹರಿಜನ ಹಾಸ್ಟೆಲ್ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಶತಮಾನಗಳಿಂದ ಶೋಷಣೆಗೊಳಗಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿಯಲ್ಲಿ 106 ಜಾತಿ ಗುರುತಿಸಿ, ಸಂವಿಧಾನ ರಚಿಸಿದ ಡಾ. ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಬೇಡ ಜಂಗಮರನ್ನು ಎಸ್ಸಿ ಜನಾಂಗಕ್ಕೆ ಸೇರಿಸುವಂತೆ, ಜಾತಿ ಪ್ರಮಾಣ ಪತ್ರಕ್ಕೆ ಸುಳ್ಳು ಮಾಹಿತಿ ನೀಡಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿ ಡಾ. ದಾರುಕೇಶ್ವರಯ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರಮಾಣಪತ್ರಕ್ಕೆ ಹುನ್ನಾರ: ಬೇಡ ಜಂಗಮರೆಂದರೆ ರಾಜ್ಯದ ಯಾವುದೋ ಒಂದು ಮೂಲೆಯಲ್ಲಿ ಭಿಕ್ಷಾಟನೆ ಮಾಡುತ್ತಾ ಮಾಂಸಹಾರಿಗಳು. ಸುಮಾರು 20 ಸಾವಿರ ಜನಸಂಖ್ಯೆ ಅದು ಹೊಂದಿದ್ದು, ಅಂತಹವರ ಹೆಸರಿನಲ್ಲಿ ರಾಜ್ಯದ ವೀರಶೈವ ಬೇಡ ಜಂಗಮರು ಸರ್ಕಾರಿ ಸವಲತ್ತು ಪಡೆಯಲು ಎಸ್ಸಿ ಜಾತಿ ಪ್ರಮಾಣಪತ್ರ ಪಡೆಯಲು ಹುನ್ನಾರ ನಡೆಸಿದ್ದಾರೆ. 15 ಮಂದಿ ತಾಲೂಕಿನಲ್ಲಿ ಬೇಡ ಜಂಗಮ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ತಾಲೂಕು ಆಡಳಿತ ಸ್ಪಂದಿಸಬಾರದು ಎಂದು ಆಗ್ರಹಿಸಿದರು.
ಎಚ್ಚೆತ್ತುಕೊಳ್ಳಲಿ: ಬುಡುಗ ಜನಾಂಗದ ರಾಜ್ಯಾಧ್ಯಕ್ಷ ಶ್ರಿನಿವಾಸ ಮಾತನಾಡಿ, ಬೇಡ ಬುಡುಗ ಜಂಗಮರೆಂದರೆ ಬೇಟೆಯಾಡಿ, ಮಾಂಸ ತಿಂದು ಬದುಕುವ ಜನ. ಈ ಜನಾಂಗದಲ್ಲಿ ಹೆಚ್ಚು ವಿದ್ಯಾವಂತರು. ಅಧಿಕಾರಿ, ರಾಜಕಾರಣಿಗಳಿಲ್ಲ. ಬೇಡ ಜಂಗಮರ ಹೆಸರಿನಲ್ಲಿ ವೀರಶೈವ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣ ಪಡೆಯಲು ಮುಂದಾಗಿರುವುದು ಸಂವಿಧಾನಕ್ಕೆ ಎಸಗಿದ ದ್ರೋಹವಾಗಿದೆ. ಈ ಬಗ್ಗೆ ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕು ಎಂದರು.
ಜಿಲ್ಲಾ ಉಪಾಧ್ಯಕ್ಷ ಜಿ.ಎಚ್. ಶಂಭುಲಿಂಗಪ್ಪ, ಭೋವಿ ಸಮಾಜದ ಜಿಲ್ಲಾ ಮುಖಂಡ ಡಿ. ಶ್ರಿನಿವಾಸ, ತಾಪಂ ಮಾಜಿ ಅಧ್ಯಕ್ಷ ಬಿ.ಆರ್. ಅಂಜಿನಪ್ಪ, ಪಲ್ಲಾಗಟ್ಟೆ ಶೇಖರಪ್ಪ,  ಜಿಪಂ ಮಾಜಿ ಸದಸ್ಯ ಲಕ್ಷ್ಮಣ, ಶಿಳ್ಯೆಕ್ಯಾತ ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಪಾಪತಿ, ಗ್ಯಾಸ್ ಓಬಣ್ಣ, ಹಟ್ಟಿ ತಿಪ್ಪಣ್ಣ, ದಸಂಸ ಹನುಮಂತಪ್ಪ, ಮಾಳಮ್ಮನಹಳ್ಳಿ ವೆಂಕಟೇಶ, ಲಂಬಾಣಿ ಮುಖಂಡ ಸುಭಾಷ, ಆರ್. ಓಬಳೇಶ, ರಾಮಚಂದ್ರಪ್ಪ, ನಿಜಲಿಂಗಪ್ಪ, ಹಾಲೇಕಲ್ಲು ಬಸವರಾಜ, ಶಿಕ್ಷಕರ ಸಂಘದ ಶಿವಣ್ಣ, ಯಲ್ಲಪ್ಪ, ರಾಮಣ್ಣ, ಮುಖಡರಾದ ಹನುಮಂತಾಪುರ ಶಿವಕುಮಾರ, ಪಿ. ಮಂಜುನಾಥ, ರಾಜು, ಪರಿಶಿಷ್ಟ ಜಾತಿಗಳ ನೌಕರರು, ಮುಖಂಡರು, ಸಂಘಟನೆಗಳು ಪ್ರತಿಭಟನೆಯಲ್ಲಿದ್ದರು.
ನಂತರ ತಹಸೀಲ್ದಾರ್ ವೆಂಕನಗೌಡ ಆರ್. ಪಾಟೀಲ್ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
ಪ.ಜಾತಿಯ ಎಲ್ಲಾ ವರ್ಗದ ಮುಖಂಡರು, ನೌಕರರ ವರ್ಗದವರು, ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್