ದಾವಣಗೆರೆ

ಪಾಲಿಕೆಯಲ್ಲಿ ಲಕ್ಷಾಂತರ ರು.ಅವ್ಯವಹಾರ: ಆರೋಪ

ದಾವಣಗೆರೆ: ದಾವಣಗೆರೆ ಪಾಲಿಕೆಯ 22 ಹಾಗೂ 25ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮಾಡದ ಕೆಲಸಗಳನ್ನು ದಾಖಲೆಗಳಲ್ಲಿ ತೋರಿಸಿ, ಲಕ್ಷಾಂತರ ರು. ದುರ್ಬಳಕೆ ಮಾಡಿಕೊಂಡ ಬಗ್ಗೆ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿಗಳ ಮೊರೆ ಹೋಗುವುದಾಗಿ ನಗರಸಭೆ ಮಾಜಿ ಅಧ್ಯಕ್ಷ ಎಂ.ಜಿ. ತಿಪ್ಪೇಸ್ವಾಮಿ ತಿಳಿಸಿದರು.
 ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ 22 ಹಾಗೂ 25ನೇ ವಾರ್ಡ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದಿದ್ದರೂ ಲಕ್ಷಾಂತರ ರು. ಬಿಲ್ ಮಾಡಿಕೊಂಡ ಹಲವಾರು ನಿದರ್ಶನಗಳಿದ್ದು, ಈ ಎಲ್ಲಾ ವಿವರವನ್ನೂ ಲೋಕಾಯುಕ್ತಕ್ಕೆ ಸಲ್ಲಿಸಲಿದ್ದೇನೆ ಎಂದರು.
ಹಣ ಗುಂಡಿಗೆ: ಪ ಮೇಯರ್ ಮಹೇಶ ರಾಯಚೂರು ಪ್ರತಿನಿಧಿಸುವ 22ನೇ ವಾರ್ಡ್‌ನ ಜಯದೇವ ವೃತ್ತ- ಗಾಂಧಿ ವೃತ್ತದ ಮೂಲಕ ಎಸ್‌ಬಿಎಂ ರಸ್ತೆವರೆಗೆ ಗುಂಡಿ ಮುಚ್ಚಲು 2 ಲಕ್ಷ ಅಂದಾಜು ವೆಚ್ಚದಲ್ಲಿ 1.98 ಲಕ್ಷ ವೆಚ್ಚ ಮಾಡಿದೆ. ಆದರೆ, ಯಾವುದೇ ಗುಂಡಿ ಮುಚ್ಚಿಲ್ಲ. ಅಂಬೇಡ್ಕರ್ ವೃತ್ತದಿಂದ ಜನತಾ ಬಜಾರ್‌ವರೆಗೆ ಹಳೆ ಕೋರ್ಟ್ ರಸ್ತೆಯ ಗುಂಡಿ ಮುಚ್ಚಲು 49 ಸಾವಿರ ಪಾವತಿಸಿದೆ. ಯಾವುದೇ ಗುಂಡಿ ಮುಚ್ಚಿಲ್ಲ ಎಂದು ಅವರು ದೂರಿದರು.
 ಪಿ.ಬಿ. ರಸ್ತೆಯಿಂದ ಅಶೋಕ ರಸ್ತೆ, ಜಯದೇವ ವೃತ್ತದವರೆಗೆ ಗುಂಡಿ ಮುಚ್ಚಲು 1.50 ಲಕ್ಷ ಮೀಸಲಿಟ್ಟಿದೆ. ಕಾಮಗಾರಿ ಪ್ರಗತಿಯಲ್ಲಿರುವುದಾಗಿ ದಾಖಲೆಯಲ್ಲಿ ತೋರಿಸಿದ್ದರೂ, ಯಾವುದೇ ಗುಂಡಿ ಮುಚ್ಚುವ ಕೆಲಸವಾಗಿಲ್ಲ. ಸೀತಮ್ಮ ಕಾಲೇಜು ಸಭಾಂಗಣ ನಿರ್ಮಿಸಲು 5 ಲಕ್ಷ ಇಟ್ಟಿದ್ದು, 3.30 ಲಕ್ಷ ವೆಚ್ಚದಲ್ಲಿ 4.10.2010ರಂದು ಸಭಾಂಗಣ ಕಾಮಗಾರಿ ಮುಗಿಸಿದ್ದಾಗಿ ದಾಖಲೆಯೂ ಇದೆ. ಆದರೆ, ಕಾಲೇಜಿನಲ್ಲಿ ಸಭಾಂಗಣದ ಕಾಮಗಾರಿಯೇ ಅಲ್ಲಿಲ್ಲ ಎಂದು ಅವರು ತಿಳಿಸಿದರು.
ಖಾಸಗಿ ಸ್ವತ್ತಲ್ಲಿ ಕಾಮಗಾರಿ: ಶಿವಯೋಗಿ ಆಶ್ರಮದ ಒಳ ರಸ್ತೆಗಳಿಗೆ ಮೆಟಲಿಂಗ್ ಹಾಗೂ ಡಾಂಬರೀಕರಣಕ್ಕೆ 15 ಲಕ್ಷ ಅಂದಾಜು ವೆಚ್ಚ ತಯಾರಿಸಿ, 14.76 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ದಾಖಲೆ ಇವೆ. ಅಲ್ಲಿನ ಉಳಿದ ರಸ್ತೆಗೆ 5 ಲಕ್ಷ ಅಂದಾಜು ಮಾಡಿ, 3.66 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಅದು ಖಾಸಗಿ ಸ್ವತ್ತಾಗಿದ್ದು, ಕಾನೂನು ಪ್ರಕಾರ ಆಶ್ರಮದಲ್ಲಿ ಪಾಲಿಕೆ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
 ಲೇಬರ್ ಕಾಲನಿಯಲ್ಲಿ ಯಾವುದೇ ಸಮುದಾಯ ಭವನ ನಿರ್ಮಾಣ ಮಾಡಿಲ್ಲ. ಆದರೆ, 2008- 09ನೇ ಸಾಲಿನಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಕಾಯ್ದಿಟ್ಟ 2.86 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿದ್ದಾಗಿ ದಾಖಲೆ ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದರು.
ಕಾಮಗಾರಿ ಮುಗಿದಿಲ್ಲ: ಹೊಸ ಬಸ್ಸು ನಿಲ್ದಾಣ ಹಿಂಭಾಗದ ಚೌಡೇಶ್ವರಿ ಸಮುದಾಯ ಭವನದ ಬಾಕಿ ಕಾಮಗಾರಿ 3.93 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡ ಬಗ್ಗೆ ದಾಖಲೆ ನೀಡಲಾಗಿದೆ. ಆದರೆ, ಕಾಮಗಾರಿ ಮುಗಿದಿಲ್ಲ್ಲ. ಇಂತಹ ಇನ್ನೂ ಹಲವಾರು ಪ್ರಕರಣಗಳು ಪತ್ತೆಯಾಗಿರುವುದಾಗಿ ಅಳರು ವಿವರಿಸಿದರು.
 ಲೋಕಾಯುಕ್ತ ನ್ಯಾಯಮೂರ್ತಿಗಳು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾನು ನೀಡುವ ಮಾಹಿತಿ, ಆರೋಪ ಸುಳ್ಳಾದರೆ, ನನ್ನ ವಿರುದ್ಧವೇ ಕ್ರಮ ಜರುಗಿಸುವಂತೆ ಒತ್ತಾಯಿಸುವೆ ಎಂದು ತಿಪ್ಪೇಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

67 ಎಕರೆ ಡಿನೋಟಿಫೈ
ದಾವಣಗೆರೆ: ದಾವಣಗೆರೆ ಪಾಲಿಕೆ ವ್ಯಾಪ್ತಿಯ ಶಾಬನೂರು ಗ್ರಾಮದ ಸುಮಾರು 67 ಎಕರೆ ಜಮೀನನ್ನು ಸರ್ಕಾರದ  ಉನ್ನತ ಅಧಿಕಾರಿಯೂ ಸೇರಿದಂತೆ ಅನೇಕರು ಸೇರಿ ಡಿನೋಟಿಫೈ ಮಾಡಿದ್ದಾರೆ. ನೂರಾರು ಕೋಟಿ ಬೆಲೆ ಮೌಲ್ಯ ಭೂಮಿ ಕುರಿತು ಸಾಕ್ಷ್ಯಧಾರ ಸಮೇತ ಶೀಘ್ರ ಹಗರಣ ಬಹಿರಂಗಪಡಿಸುವುದಾಗಿ ಎಂ.ಜಿ. ತಿಪ್ಪೇಸ್ವಾಮಿ ತಿಳಿಸಿದರು.
 ಶಾಬನೂರು ಗ್ರಾಮದ ಬಳಿ ನಗರ ಮಟ್ಟದ ಉದ್ಯಾನವನ ನಿರ್ಮಾಣಕ್ಕೆ ಮೀಸಲಿಟ್ಟ ಜಾಗವನ್ನು ಅಧಿಕಾರಿಗಳು, ಲ್ಯಾಂಡ್ ಡೆವಲಪ್ಪರ್ಸ್ ಸೇರಿದಂತೆ ಅನೇಕರು ಡಿನೋಟಿಫೈ ಮಾಡಿದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ತಾವು ಪಡೆದ ದಾಖಲೆಗಳೇ ಎಲ್ಲದನ್ನೂ  ಪುಷ್ಟೀಕರಿಸುತ್ತಿವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ