ದಾವಣಗೆರೆ

ಯಾರನ್ನೋ ನಂಬಿ ಯಡಿಯೂರಪ್ಪ ಪಕ್ಷ ಕಟ್ಟಿಲ್ಲ

ದಾವಣಗೆರೆ: ಬಿಜೆಪಿ ಸಚಿವರು, ಶಾಸಕರು ಬರುತ್ತಾರೆಂಬ ನಂಬಿಕೆಯಿಂದ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿಲ್ಲ. ನಾಡಿನ ಆರೂವರೆ ಕೋಟಿ ಜನರನ್ನು ನಂಬಿ, ರಾಜ್ಯದಲ್ಲಿ ಬದಲಾವಣೆ ತರುವ ಸಂಕಲ್ಪದಿಂದ ಪಕ್ಷ ಸ್ಥಾಪಿಸಿದ್ದಾರೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ ಹೇಳಿದರು.
 ಗುರುವಾರ ಕೆಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯವನ್ನಾಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸಹವಾಸವೇ ನಮಗೆ ಬೇಡವೆನ್ನುವ ತೀರ್ಮಾನಕ್ಕೆ ನಾಡಿನ ಜನತೆ ಬಂದಿದ್ದು, ಕೆಜೆಪಿಯನ್ನು ಪರ್ಯಾಯ ಶಕ್ತಿಯಾಗಿ ಬೆಳೆಸಲು ಚಿಂತನೆ ನಡೆಸಿದ್ದಾರೆ ಎಂದರು.
ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ: ಯಡಿಯೂರಪ್ಪ ಸಿಎಂ ಆಗಿದ್ದಾಗ ದಾವಣಗೆರೆ ಪಾಲಿಕೆಗೆ ಪ್ರತಿವರ್ಷ ಅಭಿವೃದ್ಧಿಗೆ 100 ಕೋಟಿ ವಿಶೇಷಾನುದಾನ ನೀಡಿದ್ದರು. ಆದರೆ, ಸಚಿವ ರವೀಂದ್ರನಾಥ ತಮ್ಮ ಜವಾಬ್ಧಾರಿ ಸಮರ್ಪಕವಾಗಿ ನಿರ್ವಹಿಸದ ಕಾರಣ, ನಗರದಲ್ಲಿ ಅಭಿವೃದ್ಧಿ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲವೆಂಬ ಮಾತು ಜನರಿಂದ ಕೇಳಿ ಬರುತ್ತಿವೆ ಎಂದರು.
ರವೀಂದ್ರನಾಥ್ ಬಗ್ಗೆ ಶೋಭಾ ಕಿಡಿ: ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಂಪುಟದಲ್ಲಿ ಅತ್ಯುತ್ತಮವಾದ ಕೃಷಿ ಖಾತೆ ಹೊಂದಿದ್ದ ರವೀಂದ್ರನಾಥ ಅದಕ್ಕೆ ನ್ಯಾಯ ಒದಗಿಸಲಿಲ್ಲ. ಖಾತೆ ಜವಾಬ್ದಾರಿ ಹೊತ್ತಿದ್ದಕ್ಕಾದರೂ ರಾಜ್ಯ ಸುತ್ತಾಡಿ, ರೈತರಿಗೆ ಸ್ಪಂದಿಸಬೇಕಿತ್ತು. ಆದರೆ, ಎಲ್ಲೂ ಪ್ರವಾಸ ಕೈಗೊಳ್ಳದ ಸಚಿವರು ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಮಾತ್ರ ಸಚಿವರಾಗಿ, ಸಂಚರಿಸಿದರು. ಖಾತೆಗೆ ತಕ್ಕಂತೆ ಕೆಲಸವನ್ನಂತೂ ಮಾಡಲಿಲ್ಲ. ತೋಟಗಾರಿಕೆ ಇಲಾಖೆಯಡಿ ಜಿಲ್ಲೆಗೆ ಬಂದ ಅನುದಾನ ಬಳಕೆಯಲ್ಲೂ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಅಡಿಪಾಯವಾಗಲಿ: ಈಗಲೂ ಕಾಲ ಮಿಂಚಿಲ್ಲ ಎಂಬುದನ್ನು ಕೆಜೆಪಿ ಕಾರ್ಯಕರ್ತರು, ನಾಡಿನ ಜನತೆ ಮರೆಯಬಾರದು. ಯಡಿಯೂರಪ್ಪಗೆ ಮೋಸ ಮಾಡಿದ ಬಿಜೆಪಿಗೆ ಮತ್ತು ತಮ್ಮವರೆಂದು ನಂಬಿದರೂ ಮೋಸ ಮಾಡಿದ ಜನಕ್ಕೆ ತಪ್ಪ ಪಾಠ ಕಲಿಸಬೇಕು. ಯಡಿಯೂರಪ್ಪಗೆ ಆದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. ಇದನ್ನೊಂದು ಸವಾಲಾಗಿ ಮತದಾರರೂ ಸ್ವೀಕರಿಸಿ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಗೆ ಅಡಿಪಾಯವಾಗಲಿದ್ದು, ಕಾರ್ಯಕರ್ತರು ಆಂತರಿಕ ಭಿನ್ನಾಭಿಪ್ರಾಯಕ್ಕೆ ತಿಲಾಂಜಲಿ, ಇಟ್ಟು ಪಕ್ಷದ ಏಳಿಗೆಗೆ ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ