ದಾವಣಗೆರೆ: ಜಿಲ್ಲೆಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನೋಂದಾವಣಿ ಮಾಡಲು ಈಗಾಗಲೇ ಸೂಚಿಸಿದ್ದರೂ ಇನ್ನೂ ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳು ಈವರೆಗೆ ನೋಂದಾವಣಿಯನ್ನೇ ಮಾಡಿಸಿಕೊಂಡಿಲ್ಲ. ಅಂತಹ ಸಂಸ್ಥೆಗಳು ತಕ್ಷಣ ನೋಂದಣಿ ಯನ್ನು ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್. ಸುಮಿತ್ರಾದೇವಿ ಸೂಚಿಸಿದ್ದಾರೆ. ನೋಂದಾವಣಿಯಾಗದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ 2.3.2013ರ ಒಳಗಾಗಿ ನೋಂದಾವ ಣಿಯನ್ನು ಮಾಡಿಸಬೇಕು. ನಂತರ ಯಾವುದೇ ಸಂಸ್ಥೆ ನೋಂದಾವಣಿ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.