ದಾವಣಗೆರೆ

2013-14 ಬಜೆಟ್ ಮಾತು

ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಹೆಚ್ಚಳ ಮಾಡದಿರುವುದು ದುರಾದೃಷ್ಟಕರ. ನೌಕರರ ತುಟ್ಟಿಭತ್ಯೆ ಹೆಚ್ಚಳದ ಮೇಲೆ ತೆರಿಗೆ ಸಂಗ್ರಹಿಸುವುದು ಕಾರ್ಮಿಕ  ವಿರೋಧಿ ನೀತಿ
ಟಿ ಕೆ. ರಾಘವೇಂದ್ರ ನಾಯರಿ ಬ್ಯಾಂಕ್ ನೌಕರರ ಸಂಘಟನೆ ಮುಖಂಡ.


ರೈತರಿಗೆ ರಸಗೊಬ್ಬರದ ಸಬ್ಸಿಡಿ ಕಡಿತಗೊಳಿಸಿರುವುದು ಖಂಡನೀಯ. ರಸಗೊಬ್ಬರ, ಬೀಜದ ಬೆಲೆ, ಡೀಸೆಲ್ ಬೆಲೆ ಹೆಚ್ಚಳದಿಂದ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ.
ಟಿ ಹುಚ್ಚನಹಳ್ಳಿ ಮಂಜುನಾಥ, ರಾಜ್ಯ ರೈತ ಸಂಘದ ಮುಖಂಡ.


ನಿರುದ್ಯೋಗಿಗಳ ಬಗ್ಗೆ ಅದಿಕ ಚಿಂತನೆ ನಡೆಸದಿರುವುದು ಆತಂಕದ ಸಂಗತಿ. ಉದ್ಯೋಗ ಸೃಷ್ಟಿಸುವ ಪ್ರಯತ್ನ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೊನೆಗೂ ಮಾಡಲಿಲ್ಲ. ಕೇವಲ 1.52 ಲಕ್ಷ ಹುದ್ದೆ ಭರವಸೆ ಸಾಲದು.
ಟಿ  ನಾಗರಾಜ ಅಣಜಿ, ನಿರುದ್ಯೋಗಿ.


ಜನಪ್ರಿಯ ಬಜೆಟ್ ಘೋಷಣೆ, ಕಾರ್ಯಗತ ಅತ್ಯಂತ ಕಷ್ಟ. ಚುನಾವಣೆ ಬಜೆಟ್. ಅಸಂಘಟಿತ ಕಾರ್ಮಿಕರು, ಮಹಿಳೆಯರಿಗೆ 78 ಸಾವಿರ ಕೋಟಿ ಇಟ್ಟಿದ್ದು, ಸ್ಪಷ್ಟ ಮಾಹಿತಿ ಇಲ್ಲ.
ಟಿ ಎಚ್.ಕೆ. ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ, ಎಐಟಿಯುಸಿ.


ದೇಶದ ಭವಿಷ್ಯವಾದ ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿಸಲು ಸ್ಪಷ್ಟ ಯೋಜನೆ ಇಲ್ಲ. ಬಹುಸಂಖ್ಯಾತ ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿಸುವ ಮಾತಿಲ್ಲ.
ಟಿ ಉಮಾ ಪ್ರಕಾಶ, ಮಾಜಿ ಮೇಯರ್.


ದೇಶ ರಕ್ಷಣೆ, ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಹೊಂದಿರುವ ಅಭಿವೃದ್ಧಿಗೆ ಪೂರಕವಾದ ಬಜೆಟ್ನ್ನು ಕೇಂದ್ರ ಅರ್ಥ ಸಚಿವ ಪಿ. ಚಿದಂಬರಂ ಮಂಡಿಸಿದ್ದಾರೆ.
ಟಿ ಶ್ರೀಕಾಂತ ಬಗಾರೆ, ಪದವೀಧರ.


ದೊಡ್ಡ ಪ್ರಮಾಣ ಬಜೆಟ್ ಕೇಂದ್ರ ಮಂಡಿಸಿದ್ದು, ರಾಷ್ಟ್ರೀಯ ಆಹಾರ ಭದ್ರತೆ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ ಬಜೆಟ್
ಟಿ ಡಿ. ಬಸವರಾಜ, ಸದಸ್ಯರು, ಕೆಪಿಸಿಸಿ.


ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮಂಡನೆಯಾದ ಬಜೆಟ್ ಇದು. ಜನರಿಗೆ ಯಾವುದೇ ಅನುಕೂಲವೂ ಆಗುವುದಿಲ್ಲ. ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ.
ಟಿ ಡಿ.ಎಲ್. ಜಯರಾಜನಾಯ್ಕ, ವಕೀಲ.


ಪ್ರತಿ ಸಲ ಬಜೆಟ್ ಮಂಡಿಸುವಾಗಲೂ ಕೃಷಿಕರ ಮೂಗಿಗೆ ತುಪ್ಪ ಸವರುವ ಕೆಲಸ ನಡೆಯುತ್ತಲೇ ಇರುತ್ತದೆ. ಅದರಂತೆ ಈ ಬಾರಿಯೂ ಅದೇ ಮರುಕಳಿಸಿದೆ.
ಟಿ ಮಲ್ಲೇಶಕುಮಾರ, ಪದವೀಧರ.


ವಿದೇಶೀ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಿ, ದೇಶೀ ವ್ಯಾಪಾರಸ್ಥರು, ಚಿಲ್ಲರೆ ವ್ಯಾಪಾರಸ್ಥರ ಬದುಕನ್ನು ನರಕಮಯವಾಗಿಸಲಾಗುತ್ತಿದೆ. ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.
ಟಿ ಯೋಗೀಶ್ವರ ಭಟ್, ಸ್ವಯಂ ಉದ್ಯೋಗಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!