ಹೊನ್ನಾಳಿ: ದೇಶದ ಜೈಪುರ ಮತ್ತು ಚಂಡೀಘಡದಲ್ಲಿ ವಕೀಲರ ಮೇಲೆ ಅಲ್ಲಿನ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ಶುಕ್ರವಾರ ತಾಲೂಕು ವಕೀಲರ ಸಂಘದಿಂದ ಸ್ಥಳೀಯ ನ್ಯಾಯಾಲಯದ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಕಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ಗೆ ಮನವಿ ಅರ್ಪಿಸಿದರು.
ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಶುಕ್ರವಾರ ತಾಲೂಕಿನ ವಕೀಲರು ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸುವ ಮೂಲಕ ಹಲ್ಲೆ ಘಟನೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಯತಿರಾಜ್, ಉಮಾಕಾಂತ್ ಜೋಯ್ಸ್, ಪ್ರಕಾಶ್, ಉಮೇಶ್, ನುಚ್ಚಿನ ವೀರಪ್ಪ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.