ಹೊನ್ನಾಳಿ: ಕರ್ನಾಟಕ ಐತಿಹಾಸಿಕ ಪುರಾಣಗಳಲ್ಲಿಯೇ ಪ್ರಮುಖ ಸ್ಥಾನ ಪಡೆದಿರುವ ತಾಲೂಕಿನ ಕಮ್ಮಾರಗಟ್ಟೆ ಕಾರ್ಣಿಕ ಉತ್ಸವ ಶುಕ್ರವಾರ ಸಾವಿರಾರು ಭಕ್ತರ ನಡುವೆ ನಡೆಯಿತು.
ಹೆಳವನಕಟ್ಟೆ ಗಿರಿಯಮ್ಮನ ಪುಣ್ಯ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರದಲ್ಲಿ ಪ್ರತಿ ವರ್ಷದ ಶ್ರಾವಣ ಆರಂಭದಲ್ಲಿ ಇಲ್ಲಿನ ಕ್ಷೇತ್ರ ದೇವರಾದ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ಈ ಬಾರಿಯ ಕಾರ್ಣಿಕದಲ್ಲಿ ಶಿಖರಕ್ಕೆ ಸಿಡಿಲು ಬಡಿದೀತಲೇ, ಶಿವನ ಕೊರಳಿಗೆ ಮುತ್ತು ಬಿಗಿದೀತಲೇ ಇದಕ್ಕೆ ನಾನಿದ್ದೇನೆ ಪರಾಕ್ ಎಂದು ಕಾರ್ಣಿಕ ನುಡಿಯಾಗಿದೆ.
ನೂರಾರು ನವ ಜೋಡಿಗಳು ಇಲ್ಲಿಗೆ ಆಗಮಿಸಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ.