ನ್ಯಾಮತಿ: ಇಲ್ಲಿನ ಶಾಸಕರ ಅನುದಾನಿತ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಗೆ ಸಿದ್ಧತೆ ನಡೆಸಲು ಗಾಂಧಿ ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ಮತ್ತು ಸರ್ವ ಸದಸ್ಯರ ಸಭೆ ಆ.3 ರಂದು ಮಧ್ಯಾಹ್ನ ಕರೆಯಲಾಗಿದೆಯೆಂದು ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎ.ಹಂಪಣ್ಣ ತಿಳಿಸಿದ್ದಾರೆ.
ಈ ಸಂಬಂಧ ವೈಭವದ ಶತಮಾನೋತ್ಸವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಸಲು ಈಗಾಗಲೇ ಹಳೆಯ ವಿದ್ಯಾರ್ಥಿ ಸಂಘವನ್ನು ರಚಿಸಲಾಗಿದೆ. 2014ನೇ ಸಾಲಿನ ಒಳಗಾಗಿ ಶತಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ.ಈ ಶಾಲೆಯ ಹಳೇ ವಿದ್ಯಾರ್ಥಿಗಳು ಸದಸ್ಯತ್ವ ಪಡೆಯಲೋಸುಗ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಶತಮಾನೋತ್ಸವ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಹೊರತರುವ ಉದ್ದೇಶವಿದೆ. ಈ ಶಾಲೆಯ ಹಳೇ ವಿದ್ಯಾರ್ಥಿಗಳು ಮತ್ತು ಸೇವೆ ಸಲ್ಲಿಸಿರುವ ಶಿಕ್ಷಕರು ಕವನ, ಲೇಖನ,ಕನಿತೆಗಳನ್ನು ಸೆ.15-2014ರೊಳಗಾಗಿ ಸಂಘಕ್ಕೆ ಸಲ್ಲಿಸಲು ಕೋರಲಾಗಿದೆ.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಹಂಪಣ್ಣ ಮೊ ನಂ.9686052399, ಜಿ.ಬಿ.ವಿಜಯಕುಮಾರ 9448105198, ಬಿ.ಜಯರಾಮ 9538261726 ಗೆ ಸಂಪರ್ಕಿಸಲು ವಿನಂತಿಸಲಾಗಿದೆ.