ದಾವಣಗೆರೆ

ನಗರೋತ್ಥಾನ ರಸ್ತೆ ಕಾಮಗಾರಿ ಕಳಪೆ

ಕ.ಪ್ರ.ವಾರ್ತೆ, ಜಗಳೂರು, ಜು.5
ಕಳೆದ ಸಾಲಿನಲ್ಲಿ ಹಲವು ಕಾಮಗಾರಿ ಕಳಪೆಯಾಗಿದ್ದು, ನಕಲಿ ಬಿಲ್ ಸೃಷ್ಟಿಸುವ ಮೂಲಕ ಹಣ ದುರ್ಬಳಕೆ, 11.60 ಲಕ್ಷ ವೆಚ್ಚದಲ್ಲಿ ವಿದ್ಯುತ್ ಉಪಕರಣ, ಸೋಲಾರ್‌ಲೈಟ್‌ಗಳನ್ನು ಕಾನೂನುಬಾಹಿರವಾಗಿ ಖರೀದಿ, ನಗರೋತ್ಥಾನ ಯೋಜನೆಯ 4 ಕೋಟಿ ವೆಚ್ಚದ ರಸ್ತೆ ಕಳಪೆ ಕಾಮಗಾರಿ...
ಹೀಗೆ ಹಲವು ಪ್ರಮುಖ ಹಗರಣ, ಕಳಪೆ ಕಾಮಗಾರಿ ಬಗ್ಗೆ ಜಗಳೂರು ಪಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದವು. ಕಾಮಗಾರಿ ಕಳಪೆಯಾಗಿರುವ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆಯೂ ನಡೆಯಿತು.
ಪಪಂ ಸದಸ್ಯ ಎಂ.ಎಲ್.ಎ. ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಸಾಲಿನಲ್ಲಿ ನಡೆದ ಅನೇಕ ಕಾಮಗಾರಿ ಮುಗಿದಿವೆ. ಪ್ರಗತಿಯಲ್ಲಿರುವ ಬಗ್ಗೆ ವರದಿ ಕೊಟ್ಟಿದ್ದೀರಿ. ಕೆಲವು ಕಾಮಗಾರಿ ಕಳಪೆಯಾಗಿದ್ದರೂ ಹಣ ನೀಡಲಾಗಿದೆ. ನಕಲಿ ಬಿಲ್ ಸೃಷ್ಟಿಸಿ, ಹಣ ಬಿಡುಗಡೆ ಮಾಡಲಾಗಿದೆ. 9ನೇ ವಾರ್ಡ್‌ನ ಮಾರುಕಟ್ಟೆ ಸುತ್ತ ಸಿಮೆಂಟ್ ರಸ್ತೆ ಕಾಮಗಾರಿ, ಘನ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ, ಹಿಂದು ಸ್ಮಶಾನದ ಕಾಮಗಾರಿಗಳೇ ಇದಕ್ಕೆ ಸಾಕ್ಷಿ ಎಂದರು.
ಸಮಗ್ರ ವರದಿ: ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷ ಹಾಲಸ್ವಾಮಿ ಮಾತನಾಡಿ, ಹಿಂದಿನ ಕಾಮಗಾರಿಗಳು ಕಳಪೆಯಾದ ಬಗ್ಗೆ ಸದಸ್ಯರ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ, ಆಯಾ ಸದಸ್ಯರ ವಾರ್ಡ್‌ಗಳ ಕಾಮಗಾರಿ ಬಗ್ಗೆ ವರದಿ ನೀಡಿ ಸಮಗ್ರ ವರದಿಯನ್ನು ಪಪಂಗೆ ನೀಡಿ, ಆಯಾ ವಾರ್ಡ್ ವರದಿಯನ್ನು ಸಂಬಂಧಿಸಿದ ವಾರ್ಡ್ ಸದಸ್ಯರಿಗೆ ನೀಡುವಂತೆ ಆದೇಶಿಸಿದರು.
ನೀರಿನ ಸಮಸ್ಯೆ: ಸದಸ್ಯ ಜಯಣ್ಣ ಮಾತನಾಡಿ, ಕಳೆದೊಂದು ತಿಂಗಳಿನಿಂದಲೂ ಪಟ್ಟಣಕ್ಕೆ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಕೆಲವು ಕಡೆ ಗುತ್ತಿಗೆದಾರರು ಸರಿಯಾದ ಚರಂಡಿ ವ್ಯವಸ್ಥೆಯನ್ನೆ ಮಾಡಿಲ್ಲ. ಚರಂಡಿಯಲ್ಲಿ ನೀರು ಸರಿಯಾಗಿ ಹರಿಯುತ್ತಿಲ್ಲ. ಬಿಲ್ ಮಂಜೂರು ಮಾಡುವ ಅಧಿಕಾರಿಗಳಿಗೆ ಕಾಮಗಾರಿ ಯಾವ ಮಟ್ಟದ್ದಿದೆ ಎಂಬುದನ್ನು ಪರಿಶೀಲಿಸುವಷ್ಟೂ ಕಾಳಜಿಯೂ ಇಲ್ಲವೆ, ದಾಖಲೆಯಲ್ಲಿ ತೋರಿಸಿದ ಭಾಗದಲ್ಲಿ ಡೆಕ್‌ಗಳೇ ಇಲ್ಲ. ಹಣವನ್ನು ಮಂಜೂರು ಮಾಡಿದ್ದೀರಿ. ಏನು ಇದರ ಹಿಂದಿನ ಮರ್ಮ ಎಂದು ಪ್ರಶ್ನಿಸಿದರು.
ಪಪಂ ಉಪಾಧ್ಯಕ್ಷ ಬ್ರೆಷ್ ಮಂಜು, ಸದಸ್ಯರಾದ ಇಕ್ಬಾಲ್ ಅಹಮ್ಮದ್‌ಖಾನ್, ಎ. ಬಂಗಾರಪ್ಪ, ಅಂಬಿಕಾ ಗುರುಸಿದ್ದಪ್ಪ, ನೂರ್‌ಜಾನ್, ಗಂಗಮ್ಮ, ವಿಶಾಲಾಕ್ಷಮ್ಮ ಸೇರಿದಂತೆ ಇತರೆ ಸದಸ್ಯರು, ಪಪಂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!