ದಾವಣಗೆರೆ: ಚನ್ನಗಿರಿ ತಾ. ಸೋಮ್ಲಾಪುರ ಗ್ರಾಪಂ, ಸ್ಫೂರ್ತಿ ಸಂಸ್ಥೆ ನಲ್ಲೂರು ಹಾಗೂ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಆಶ್ರಯದಲ್ಲಿ ಸೋಮಲಾಪುರ ಗ್ರಾಮದ ಪಶು ಆಸ್ಪತ್ರೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಪಂ ಅಧ್ಯಕ್ಷ ರಂಗಪ್ಪ ಅಧ್ಯಕ್ಷತೆಯ ಸಮಾರಂಭದಲ್ಲಿ ಚನ್ನಗಿರಿ ಅರಣ್ಯಾಧಿಕಾರಿ ಚೇತನ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಎಚ್.ಎಂ. ಮಂಜುನಾಥ, ಸಂತೇಬೆನ್ನೂರಿನ ನಾಗರಾಜ, ಗ್ರಾಮದ ಸಪ್ರೌ ಶಾಲೆಯ ಪದವಿಧರೇತರ ಮುಖ್ಯ ಶಿಕ್ಷಕ ಎಂ.ಎಸ್. ಸಿದ್ದಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಕೆ. ಸಿದ್ದಪ್ಪ, ಎಂಜಿನಿಯರ್ ಭಾನುಪ್ರಕಾಶ, ಟಿ. ಹನುಮಂತಪ್ಪ ಸ್ಮಾರ ಕ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ.ಕೆ. ಪರಶುರಾಮಪ್ಪ, ಕೂಲಿ ಕಾರ್ಮಿಕರ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷೆ ರೇಣುಕಮ್ಮ, ಸ್ಫೂರ್ತಿ ಸೇವಾ ಸಂಸ್ಥೆ ಸಂಯೋಜಕಿ ರೇಷ್ಮಾ, ಶಾಲೆಯ ಆರ್. ಪೂಜಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲೆಯ ಮಕ್ಕಳು, ಸ್ಫೂರ್ತಿ ಸಂಸ್ಥೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.