ದಾವಣಗೆರೆ

ಮಾರ್ಗದರ್ಶಿ ಚಿಟ್ ಫಂಡ್‌ನಲ್ಲಿ 11.5 ಲಕ್ಷ ಕಳವು

ಶಿವಮೊಗ್ಗ: ಇಲ್ಲಿನ ಚಿಟ್ ಫಂಡ್ ಕಚೇರಿಗೆ ನುಗ್ಗಿದ ಕಳ್ಳರು ಸುಮಾರು ರು. 11.5 ಲಕ್ಷ ನಗದು ಕಳವು ಮಾಡಿದ ಘಟನೆ ನಗರದ ನೆಹರೂ ರಸ್ತೆಯಲ್ಲಿ ನಡೆದಿದೆ. ಮಾರ್ಗದರ್ಶಿ ಚಿಟ್ ಫಂಡ್ ಕಚೇರಿ ಹಿಂಭಾಗದ ಕಿಟಕಿಯ ಗ್ರಿಲ್‌ಗಳನ್ನು ಗ್ಯಾಸ್ ಕಟರ್ ಬಳಸಿ ಮುರಿದು ಒಳನುಗ್ಗಿರುವ ಕಳ್ಳರು ಹಣ ಕಳವು ಮಾಡಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾ ನೆಹರೂ ಕಾಲೇಜಿನ ಹಿಂಭಾಗದ ಮೂಲಕ ಕಟ್ಟಡದ ಕಿಟಕಿ ಬಾಗಿಲು ತೆರೆದು ಒಳಪ್ರವೇಶಿಸಿರುವ ದುಷ್ಕರ್ಮಿಗಳು ಗ್ಯಾಸ್ ಕಟರ್ ಯಂತ್ರದ ನೆರವಿನಿಂದ ಸ್ಟ್ರಾಂಗ್ ರೂಂ ಬಾಗಿಲು ಮುರಿದು ಹಣ ದೋಚಿದ್ದಾರೆ. ಗ್ಯಾಸ್ ಕಟರ್ ಬಳಸಿದ್ದರಿಂದ ಬೆಂಕಿಯ ಕಿಡಿಗಳು ತಾಗಿ ಚೆಕ್ ಹಾಗೂ ನೋಟುಗಳು ಸಹ ಸುಟ್ಟುಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಕಚೇರಿಯಲ್ಲಿ ಚೀಟಿ ವ್ಯವಹಾರ ನಡೆದಿದ್ದು, ವಾಡಿಕೆಯಂತೆ ಸೋಮವಾರ ರಜೆ ನೀಡಲಾಗಿತ್ತು. ಸ್ಥಳಕ್ಕೆ ಎಸ್ಪಿ ಕೌಶಲೇಂದ್ರ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ