ದಾವಣಗೆರೆ

ಭದ್ರಾ ನಾಲೆಗೆ ನೀರು ಹರಿಸಿ

ಕನ್ನಡಪ್ರಭ ವಾರ್ತೆ, ದಾವಣಗೆರೆ, ಜು.25
ಭದ್ರಾ ನಾಲೆಗೆ ಡ್ಯಾಂನಿಂದ ತಕ್ಷಣ ನೀರು ಪೂರೈಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಲಾಯಿತು.
ನಗರದ ಎಸಿ ಕಚೇರಿ ಎದುರು ಧರಣಿನಿರತ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ರೈತರು, ಭದ್ರಾ ನಾಲೆ ನೀರು ಹರಿಸಲು ವಿಫಲವಾದ ಸರ್ಕಾರ, ಸಚಿವರು, ಶಾಸಕರ ನಿರ್ಲಕ್ಷ್ಯ ಧೋರಣೆ ವಿರುದ್ಧ ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಾಬನೂರು ಎಚ್.ಆರ್. ಲಿಂಗರಾಜ, ಭದ್ರಾ ಡ್ಯಾಂನಲ್ಲಿ ಹಿಂದೆ 145 ಅಡಿ ನೀರಿದ್ದಾಗಲೇ ಭದ್ರಾ ನಾಲೆಗೆ ನೀರು ಬಿಟ್ಟ ನಿದರ್ಶನವಿದೆ. ಆದರೆ, ಇಂದು ಭದ್ರಾ ನಾಲೆಯಲ್ಲಿ ಸಾಕಷ್ಟು ನೀರಿದ್ದರೂ ನೀರು ಬಿಡದೆ ತಾತ್ಸಾರ ಮಾಡಲಾಗುತ್ತಿದೆ. ಡ್ಯಾಂನಲ್ಲಿ 168 ಅಡಿ ನೀರಿದ್ದರೂ ನೀರು ಬಿಡುತ್ತಿಲ್ಲ ಎಂದರು.
ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿದರು.
ಬಿಜೆಪಿ ಮುಖಂಡರಾದ ಎಂ.ಪಿ. ಕೃಷ್ಣಮೂರ್ತಿ ಪವಾರ್, ಸುರೇಶ ಸಿಂಧೆ, ಕೊಂಡಜ್ಜಿ ಜಯಪ್ರಕಾಶ, ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಪಿ.ಸಿ. ಶ್ರೀನಿವಾಸ, ಎನ್. ರಾಜಶೇಖರ, ಪ್ರಭು ಕಲ್ಬುರ್ಗಿ, ಎಲ್.ಡಿ. ಗೋಣೆಪ್ಪ, ಬಿ.ಟಿ. ಸಿದ್ದಪ್ಪ, ರಮೇಶ ನಾಯ್ಕ, ಕಾಂತರಾಜ, ಕಲಾಲ್, ಎಚ್.ಓ. ದುಗ್ಗಪ್ಪ, ಶ್ರೀನಿವಾಸ, ಏಕನಾಥ ಡಿ. ರಾಯ್ಕರ್, ರುದ್ರಪ್ಪ, ಡಿ.ಎಲ್. ರಾಮಚಂದ್ರಪ್ಪ, ನಾಗರತ್ನ, ಪಿಸಾಳೆ ಕೃಷ್ಣ, ಕೆ.ಜಿ. ಕಲ್ಲಪ್ಪ, ಮಟ್ಟಿಕಲ್ಲು ಪ್ರದೀಪ, ಎಂ. ಮನು, ಟಿಪ್ಪು ಸುಲ್ತಾನ್, ಸೋಗಿ ಶಾಂತ, ನಾಗರತ್ನ ನಾಯ್ಕ, ಜಯಮ್ಮ, ಎಚ್.ಓ. ದುಗ್ಗಪ್ಪ ಸೇರಿದಂತೆ ಅನೇಕರು ಧರಣಿಯಲ್ಲಿದ್ದರು.

ಅಧಿಕಾರಿಗಳೊಡನೆ ವಾಗ್ವಾದ
ದಾವಣಗೆರೆ ಎಸಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದ ಬಿಜೆಪಿ ರೈತ ಮೋರ್ಚಾದೊಂದಿಗೆ ಯುವ ಮೋರ್ಚಾದ ಪದಾಧಿಕಾರಿಗಳೂ ಧರಣಿಗೆ ಕುಳಿತರು. ನೀರಿನ ವಿಚಾರ ಮುಂದಿಟ್ಟುಕೊಂಡು ಏಕಾಏಕಿ ರಸ್ತೆ ತಡೆ ನಡೆಸಲು ಮುಂದಾಗಿದ್ದರಿಂದ ಹಳೆ ಪಿ.ಬಿ. ರಸ್ತೆ ಯ ಎಸಿ ಕಚೇರಿ ವೃತ್ತದಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!