ಹೊನ್ನಾಳಿ: ಜನರ ಬಹುದಿನದ ಬೇಡಿಕೆಯಾದ ಬಸ್ಸು ತಂಗುದಾಣವನ್ನು ಜಿಪಂನಿಂದ 13ನೇ ಹಣಕಾಸು ಯೆ ೂಜನೆಯಡಿ ಸುಮಾರು ರು. 2ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದೆ ಎಂದು ಜಿಪಂ ಸದಸ್ಯೆ ಲಕ್ಷ್ಮಿ ಮಂಜಪ್ಪ ಹೇಳಿದರು.
ತಾಲೂಕಿನ ಹಳೆದೇವರಹೊನ್ನಾಳಿಯ ಜನರ ಅನುಕೂಲಕ್ಕಾಗಿ ನೂತನವಾಗಿ ನಿರ್ಮಿಸಲಾದ ಬಸ್ಸು ತಂಗುದಾಣ ಉದ್ಘಾಟಿಸಿ ಮಾತನಾಡಿದ ಅವರು, ಬಸ್ಸು ತಂಗುದಾಣಗಳಲ್ಲಿ ಗ್ರಾಮಸ್ಥರು ಸ್ಚಚ್ಛತೆ ಕಾಪಾಡಿಕೊಂಡು ಬರಬೇಕು, ಇದು ಸೋಮಾರಿಗಳ ಕಟ್ಟೆಯಾಗಬಾರದು ಎಂದು ಹೇಳಿದರು.
ಉತ್ತಮ ನಿರ್ವಹಣೆ: ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಸರ್ಕಾರದ ಅನುದಾನ ಸೇರಿದಂತೆ ಕಟ್ಟಡ ಮುಂತಾದ ಅಸ್ತಿಪಾಸ್ತಿಗಳು ಸಾರ್ವಜನಿಕರ ಸದುಪಯೋಗಕ್ಕಾಗಿ ಮಾಡಲಾಗಿರುತ್ತದೆ.
ಇದನ್ನು ಅರಿತು ಸಾರ್ವಜನಿಕರು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಕಾಂಗ್ರೆಸ್ ರಾಜ್ಯ ಹಿಂದಳಿದ ವರ್ಗಗಳ ಕಾರ್ಯದರ್ಶಿ ಎಚ್.ಎ. ಉಮಾಪತಿ, ತಾಪಂ ಸದಸ್ಯ ರಮೇಶ ದಾಸರಹಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರಪ್ಪ, ಗ್ರಾಮದ ಮುಖಂಡ ಮಾಯಪ್ಪ, ಉಪನ್ಯಾಸಕ ಹಾಲಪ್ಪ, ಪರಸಪ್ಪ, ಸವಿತಾ ಸಮಾಜದ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಮೂರ್ತಿ, ಶೇಖರಪ್ಪ ಕಮ್ಮಾರಗಟ್ಟೆ ಮೊದಲಾದವರು ಉಪಸ್ಥಿತರಿದ್ದರು.