ಕಲಘಟಗಿ: ಜನರಲ್ಲಿ ಕಾನೂನು ಅರಿವು ಮೂಡಿಸಿದರೆ ಸಾಲದು, ಅದನ್ನು ಪರಿಪಾಲನೆ ಮಾಡುವುದು ಮುಖ್ಯ. ಅದಕ್ಕಾಗಿ ಲೋಕ್ ಅದಾಲತ್ ಕಾನೂನು ಸಾಕ್ಷರತಾ ಸಂಚಾರಿ ರಥ ಯಾತ್ರೆ ಆರಂಭಿಸಿದ್ದು, ಜನತೆ ಅದರ ಪ್ರಯೋಜನ ಪಡೆಯುವಂತೆ ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎನ್. ಸುಣಗಾರ ಹೇಳಿದರು.
ಶುಕ್ರವಾರ ಮಧ್ಯಾಹ್ನ ಇಲ್ಲಿನ ಸಿವಿಲ್ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ ಕಾನೂನು ಸಾಕ್ಷರತಾ ರಥಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಚೌಧರಿ ವಹಿಸಿದ್ದರು. ನ್ಯಾಯವಾದಿಗಳಾದ ಜಿ.ಬಿ. ಕರ್ಲಟ್ಟಿ, ಬಿ.ವಿ. ಪಾಟೀಲ ಉಪನ್ಯಾಸ ನೀಡಿದರು. ಸಿಡಿಪಿಓ ಎಂ. ನಾಗೇಶ, ಸರ್ಕಾರಿ ಅಭಿಯೋಜಕ ಆರ್.ಎಂ. ಮಳಗಿಕರ, ನ್ಯಾಯವಾದಿಗಳಾದ ಮಂಜುನಾಥ ಧನಿಗೊಂಡ, ವಿ.ಬಿ. ಶಿವನಗೌಡ್ರ, ಎಸ್.ಟಿ. ತೆಗ್ಗಿಹಳ್ಳಿ, ರಾಘು ಉಡುಪಿ, ಕೆ.ಬಿ. ಗುಡಿಹಾಳ, ರಾಕೇಶ ಅಳಗವಾಡಿ, ಅಣ್ಣಪ್ಪ ಓಲೇಕಾರ, ರೇಣುಕಾ ಪಾಟೀಲ, ಎಂ.ಎಂ. ಚಲವಾದಿ, ಎಸ್.ಜಿ. ಕುಲಕರ್ಣಿ, ಎಂ.ಎಸ್. ಮಲ್ಲಾಡದ, ಎಸ್.ಬಿ. ನೇಸರ್ಗಿ ಪಾಲ್ಗೊಂಡಿದ್ದರು.