ಧಾರವಾಡ

ಖರ್ಗೆ, ಅಂಬಿಗೆ 'ಗೌಡಾ' ಪ್ರದಾನ

ಧಾರವಾಡ: ಕೇಂದ್ರದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಚಿತ್ರನಟ ಎಂ.ಎಚ್. ಅಂಬರೀಷ್ ಹಾಗೂ ಗ್ರಂಥಾಲಯ ತಜ್ಞ ಪ್ರೊ. ಕೆ.ಎಸ್. ದೇಶಪಾಂಡೆ ಅವರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಶುಕ್ರವಾರ ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಗೌರವ ಡಾಕ್ಟರೇಟ್ ಪುರಸ್ಕೃತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೈರು ಹಾಜರಾಗಿದ್ದರು. ಶುಕ್ರವಾರ ಕರ್ನಾಟಕ ವಿವಿ ಗಾಂಧಿಭವನದಲ್ಲಿ ನಡೆದ 63ನೇ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಡಾ.ಹಮೀದ್ ಅನ್ಸಾರಿ 20 ನಿಮಿಷ ಘಟಿಕೋತ್ಸವ ಭಾಷಣ ಮಾಡಿ, 'ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಲಭ್ಯವಿರುವ ಅವಕಾಶಗಳನ್ನು ವಿಸ್ತರಿಸಬೇಕು. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆಯಬೇಕು. ಉನ್ನತ ಶಿಕ್ಷಣ ಸಂಸ್ಥೆಗಳು ಸಂಶೋಧನೆ, ಉತ್ತಮ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟ ಅಳವಡಿಸಿಕೊಳ್ಳಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಿ ಅವು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಅವು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಯಬೇಕು' ಎಂದು ಉನ್ನತ ಶಿಕ್ಷಣ ಮತ್ತು ಸಂಶೋಧನೆಗಳ ಉನತೀಕರಣಕ್ಕೆ ಐದಂಶಗಳ ಸೂತ್ರವನ್ನು ಮುಂದಿಟ್ಟರು.
ಸಾಂಕೇತಿಕ ಪದಕ ವಿತರಣೆ: ಸಮಾರಂಭ 90 ನಿಮಿಷಗಳಿಗೆ ಸೀಮಿತವಾಗಿದ್ದರಿಂದ ಐದು ಹಾಗೂ ಅದಕ್ಕಿಂತ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಉಪರಾಷ್ಟ್ರಪತಿಗಳು ಪದಕ ಪ್ರದಾನ ಮಾಡಿದರು.


ಟಿಪ್ಪಣಿ ಸಿಗದೆ ಸಿಟ್ಟು
ಘಟಿಕೋತ್ಸವ ಉದ್ಘಾಟನೆ ಘೋಷಿಸಬೇಕಾದ ರಾಜ್ಯಪಾಲರ ಟಿಪ್ಪಣಿ ಸಿಗದೆ ಕರ್ನಾಟಕ ವಿವಿ 63ನೇ ಘಟಿಕೋತ್ಸವದಲ್ಲಿ ತುಸು ಗೊಂದಲ ಉಂಟಾಯಿತು.
ಐದು ನಿಮಿಷವಾದರೂ ರಾಜ್ಯಪಾಲರು ಘೋಷಿಸಬೇಕಾದ ಟಿಪ್ಪಣಿ ಸಿಗಲೇ ಇಲ್ಲ. ನಿರೂಪಕರು ರಾಜ್ಯಪಾಲರು ಘಟಿಕೋತ್ಸವದ ಉದ್ಘಾಟನೆ ಘೋಷಿಸಲಿ ಎಂಬ ಮನವಿ ಮಾಡುತ್ತಲೇ ಇದ್ದರು. ಅತ್ತ ಕುಲಪತಿ ಡಾ೤ ವಾಲೀಕಾರ ಟಿಪ್ಪಣಿ ಹುಡುಕುತ್ತಿದ್ದರು. ರಾಜ್ಯಪಾಲರೂ ಸಿಟ್ಟಾದರು. ಕೊನೆಗೆ ಟಿಪ್ಪಣಿ ಸಿಕ್ಕು ಉದ್ಘಾಟನೆ ಘೋಷಿಸಿದರು.



ರೀಮಾ ಚಿನ್ನದ ಹುಡುಗಿ!
ಕರ್ನಾಟಕ ವಿಶ್ವವಿದ್ಯಾಲಯದ  ಜೈವಿಕರಸಾಯನಶಾಸ್ತ್ರ ವಿಭಾಗದ ರೀಮಾ ನಾಯಕ ಎಂಟು ಚಿನ್ನದ ಪದಕಗಳೊಂದಿಗೆ ಚಿನ್ನದ ಹುಡುಗಿಯಾದರು.
ರಾಜ್ಯಶಾಸ್ತ್ರ ವಿಭಾಗದ ರವಿಚಂದ್ರ ವಾಲೀಕಾರ್ (7), ಮಾಹಿತಿ ಮತ್ತು ಗ್ರಂಥಾಲಯದ ವಿಜ್ಞಾನದ ಗೌರಿ ಗೌರಿಕೇರಮಠ (6), ಪ್ರಾಣಿಶಾಸ್ತ್ರ ವಿಭಾಗದಿಂದ ಪುಷ್ಪಾ ಹೆಗಡೆ (6), ಪತ್ರಿಕೋದ್ಯಮ ವಿಭಾಗದ ಕಾವ್ಯಾ ಕಡಮೆ (6) ಹಾಗೂ ಇಂಗ್ಲಿಷ್ ವಿಭಾಗದ ಸಾಗರ ಕರಬಸಣ್ಣವರ (5) ಚಿನ್ನದ ಪದಕಗಳನ್ನು ಪಡೆದರು.



ನನ್ನನ್ನು ಡಾಕ್ಟರ್ (ವೈದ್ಯ) ಮಾಡಬೇಕೆಂಬುದು ನನ್ನ ತಂದೆಯ ಕನಸಾಗಿತ್ತು. ಆದರೆ, ಚಿತ್ರರಂಗಕ್ಕೆ ಬಂದ ಕಾರಣ ಕನಸು ಕನಸಾಗಿಯೇ ಉಳಿದಿತ್ತು. ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುವ ಮೂಲಕ ತಂದೆಯ ಕನಸನ್ನು ಒಂದು ರೀತಿಯಲ್ಲಿ ನನಸು ಮಾಡಿದೆ.
ಟಿ ಅಂಬರೀಷ್, ಹಿರಿಯ ಚಿತ್ರನಟ

ಇದು 2ನೇ ಗೌರವ ಡಾಕ್ಟರೇಟ್. ಆದರೂ ಕವಿವಿ ಹಳೆ ವಿದ್ಯಾರ್ಥಿಯಾಗಿರುವ ನನಗೆ ಮಾತೃ ವಿವಿಯಿಂದ ದೊರೆತ ಗೌರವ ಹೆಮ್ಮೆ ತಂದಿದೆ. ಇಲ್ಲೇ ಬಿಎ, ಎಲ್‌ಎಲ್‌ಬಿ ಪೂರ್ಣಗೊಳಿಸಿದ್ದೇನೆ. ನಾನು ಇಲ್ಲಿಂದಲೇ ಕಬಡ್ಡಿ ಆಟದಲ್ಲಿ ಚಾಂಪಿಯನ್ ಆಗಿದ್ದೆ.
ಟಿ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್