ಧಾರವಾಡ

ಬೆಲೆ ಏರಿಕೆ: ಪ್ರಧಾನಿ ಪ್ರತಿಕೃತಿ ದಹನ

ಹುಬ್ಬಳ್ಳಿ: ಇಂಧನ ಬೆಲೆ ಏರಿಕೆ ಖಂಡಿಸಿ ಶನಿವಾರ ಹುಬ್ಬಳ್ಳಿ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಪ್ರಧಾನಿ ಮನಮೋಹನ್ಸಿಂಗ್ ಅವರ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದರು.
ಯುಪಿಎ ಸರ್ಕಾರ ತೈಲ ಕಂಪನಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಬೆಲೆ ಏರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಏನೂ ಮಾಡುತ್ತಿಲ್ಲ. ಭವಿಷ್ಯದ ದಿನಗಳಲ್ಲಿ ಜನರ ನೋವಿಗೆ ಸ್ಪಂದಿಸದ ಇಂತಹ ಸರ್ಕಾರಗಳಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಅಟೋ ರಿಕ್ಷಾ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು.
ಈ ಸಂದರ್ಭ ಬಸವರಾಜ ಹುಡೇದ, ಅಂಬರೀಷ್ ಆಣಿ, ಹಸನ್ಸಾಬ್ ಬಡೇಖಾನ್, ಪ್ರಕಾಶ ಕಡೆಮನಿ ಮತ್ತಿತರರು ಇದ್ದರು.

ಇಂದು ಆಲ್ ದಿ ಬೆಸ್ಟ್ ನಾಟಕ
ಧಾರವಾಡ: ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗುರು ಸಂಸ್ಥೆ ಜಂಟಿಯಾಗಿ ಉತ್ತರ ಕರ್ನಾಟಕ ನಗೆ ನಾಟಕಗಳ ಕೊನೆ ನಾಟಕ ಯಶವಂತ ಸರದೇಶಪಾಂಡೆ ನಿರ್ದೇಶನದ ಆಲ್ ದಿ ಬೆಸ್ಟ್ ನಾಟಕ ಪಂ. ಬಸವರಾಜ ರಾಜಗುರು ಬಯಲು ರಂಗ ಮಂದಿರದಲ್ಲಿ ಫೆ. 17ರ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇಂದು ಸಂಗೀತ ಕಛೇರಿ
ಧಾರವಾಡ: ಅವನಿ ರಸಿಕರ ರಂಗ ವೇದಿಕೆ ವತಿಯಿಂದ ಫೆ. 17ರಂದು ಸಂಜೆ 5.30ಕ್ಕೆ ಇಲ್ಲಿನ ನಾರಾಯಣಪುರದ ಅವನಿ ಸಭಾಗೃಹದಲ್ಲಿ ಅಪರೂಪದ ಹಿಂದೂಸ್ತಾನಿ ಸಂಗೀತ ಕಚೇರಿ ಹಮ್ಮಿಕೊಂಡಿದೆ. ಗ್ವಾಲಿಯರ್ ಘರಾಣಾದ ಗಾಯಕ ಪಂ. ಹನುಮಂತ ಬುರ್ಲಿ ಸಂಗೀತ ಕಚೇರಿ ನಡೆಸಿಕೊಡಲಿದ್ದಾರೆ. ಅಲ್ಲದೇ, ಪಂ ವೆಂಕಟೇಶ ಅವರ ಸಹ ಕಚೇರಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನಾಳೆ ಸಮುದಾಯ ಆಧಾರಿತ ತರಬೇತಿ
ಕಲಘಟಗಿ: ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಸಹಯೋಗದಲ್ಲಿ ಸ್ಯಾಟ್ಕಾಮ್ ಸಮುದಾಯ ಆಧಾರಿತ ಡಿಸೆಸ್ಟರ್ ಮ್ಯಾನೇಜಮೆಂಟ್ ತರಬೇತಿ ಫೆ. 18ರಿಂದ 22ರವರೆಗೆ ಇಲ್ಲಿನ ತಾಪಂ ಸಭಾ ಭವನದಲ್ಲಿ ಜರುಗಲಿದೆ. ತಮಗೆ ತಲುಪಿಸಿರುವ ವೇಳಾಪಟ್ಟಿಯಂತೆ ಪಾಲ್ಗೊಳ್ಳಬೇಕೆಂದು ತಾಪಂ ಇಓ ಎಸ್.ಆರ್. ವೀರಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಎನ್ಸಿಪಿ ಪೂರ್ವಭಾವಿ ಸಭೆ
ಹುಬ್ಬಳ್ಳಿ:  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಂಬಂಧಿಸಿದಂತೆ ನಗರದ ಕೃಷ್ಣಭವನ್ ಹೋಟೆಲ್ನಲ್ಲಿ ಫೆ. 18ರ ಮಧ್ಯಾಹ್ನ 2ಕ್ಕೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆ ಕರೆಯಲಾಗಿದೆ. ಎನ್ಸಿಪಿ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ್ ಗೌಡ ವಹಿಸುವರು. ಉಪಾಧ್ಯಕ್ಷ ಜೇಮ್ಸ್ ಕುಮಾರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಫ್.ಎ. ಶೇಖ್, ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಬಷೀರ್ ಶೇಖ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇಂದು ಉಚಿತ ಶಿಬಿರ
ಧಾರವಾಡ: ನಗರದ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ವತಿಯಿಂದ ಇಲ್ಲಿನ ಕಿತ್ತೂರ ಬಿಲ್ಡಿಂಗ್ನಲ್ಲಿ ಫೆ. 17ರಂದು ಬೆಳಿಗ್ಗೆಯಿಂದ ಸಂಜೆ 5ರವರೆಗೆ ಉಚಿತ ಮಾರ್ಗದರ್ಶನ ಶಿಬಿರ ಹಮ್ಮಿಕೊಂಡಿದೆ. ಕೆಎಎಸ್ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಂದರ್ಶನ ಎದುರಿಸಲು ಪರಿಣಿತರಿಂದ ಅಣಕು ಪ್ರದರ್ಶನ ಸಂದರ್ಶನ ಹಾಗೂ ಮಾರ್ಗದರ್ಶನ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಲಕ್ಷಣ ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್