ಧಾರವಾಡ

ಗವಿಮಠ ಜಾತ್ರೆಗೆ ವಿಧ್ಯುಕ್ತ ಚಾಲನೆ

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜ. 25
ಉತ್ತರದ ಸಿದ್ಧಗಂಗಾ ಮಠ ಎಂದೇ ಖ್ಯಾತಿಯಾಗಿರುವ ಕೊಪ್ಪಳದ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಮಠದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಮೂಲಕ ಜಾತ್ರಾ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಇದಕ್ಕೂ ಮೊದಲು ಭಕ್ತರು ಬಸವಪಟವನ್ನು ಆರೋಹಣ ಮಾಡಿ ಜಾತ್ರೆಗೆ ಜೈಕಾರ ಹಾಕಿದರು. ಹಾಗೆ ಮಾಡಿದಾಗಲೇ ಗವಿಸಿದ್ಧೇಶ್ವರ ಜಾತ್ರೆಗೆ ಅಧಿಕೃತ ಚಾಲನೆ ಸಿಕ್ಕಂತಾಗುತ್ತದೆ. ಅನಂತರ ನಿರಂತರವಾಗಿ ಮಠದಲ್ಲಿ ಒಂದಿಲ್ಲೊಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಜ. 29ರಂದು ಲಕ್ಷಾಂತರ ಭಕ್ತರ ಸಮ್ಮುಖ ಗವಿಸಿದ್ಧೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ನೆರೆಯ ಇರಕಲ್‌ಗಡಾ ಗ್ರಾಮದ ಜೈ ಸಂತೋಷಿ ಮಾತಾ ಮಂದಿರದ ಶ್ರೀ ರತ್ನಮ್ಮ ತಾಯಿ 25 ವರ್ಷಗಳಿಂದ ತಮ್ಮ ಸಹಸ್ರಾರು ಭಕ್ತರು, ಅನುಯಾಯಿಗಳೊಂದಿಗೆ ಗವಿಸಿದ್ಧೇಶ್ವರ ಜಾತ್ರೆಗೆ ಬರುತ್ತಾರೆ.
ಪ್ರತಿವರ್ಷದಂತೆ ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡರು. ಎಲ್ಲ ಮುತ್ತೈದೆಯರಿಗೂ ಬಾಗಿನ ಕೊಡುವ ಮೂಲಕ ಉಡಿತುಂಬುವ ಕೈಂಕರ್ಯ ನಡೆಸಿಕೊಟ್ಟರು. ಈ ಕಾರ್ಯದಲ್ಲಿ ಕೊಪ್ಪಳದ ಸಹಸ್ರಾರು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕಾಗಿ ಜೈ ಸಂತೋಷಿ ಮಾತೆ ಪರಮಭಕ್ತೆ ರತ್ನಮ್ಮ ತಾಯಿ ಪ್ರತಿವರ್ಷ ಕೊಪ್ಪಳದಿಂದ 15 ಕಿಮೀ ಅಂತರದ ಇರಕಲ್‌ಗಡಾದ ಬೆಳಗ್ಗೆ 6 ಗಂಟೆಯಿಂದ ಮಡಿ ಉಡಿಯಿಂದ ಜಯಘೋಷ ಮಾಡುತ್ತಾ ಗವಿಮಠಕ್ಕೆ ಆಗಮಿಸಿ ಈ ಸೇವೆ ಮಾಡುತ್ತಾರೆ.
ಸಹಸ್ರಾರು ಮಹಿಳೆಯರೊ
ಶುಕ್ರವಾರ ಗವಿಮಠದಲ್ಲಿ ನಡೆದ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಹಸ್ರಾರು ಮಹಿಳೆಯರು ಪಾಲ್ಗೊಂಡಿದ್ದರು. ಎಲ್ಲಿ ನೋಡಿದಲ್ಲಿ ಉಡಿಯನ್ನು ಹಿಡಿದ ಮಹಿಳೆಯರೇ ಗೋಚರಿಸುತ್ತಿದ್ದರು. ಕೈಲಾಸ ಮಂಟಪದಲ್ಲಿನ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆಯುವ ಮೂಲಕ ಮಹಿಳೆಯರು ಉಡಿ ತುಂಬುವ ಕಾರ್ಯದಲ್ಲಿ ನಿರತರಾಗಿದ್ದರು.
ಮಠದ ಆಡಳಿತ ಮಂಡಳಿ ಜಾತ್ರೆಗೆ ಸಕಲ ಸಿದ್ಧತೆಯಲ್ಲಿ ತೊಡಗಿದ್ದು, ಪ್ರತಿ ಕಾರ್ಯಕ್ಕೂ ಒಂದೊಂದು ತಂಡ ರಚಿಸಿ ಮೇಲುಸ್ತುವಾರಿ ನೋಡಿಕೊಳ್ಳಲು ಪ್ರತಿನಿಮಿಷವೂ ಸೂಚನೆ ನೀಡುತ್ತಲಿದೆ.
ಜಾತ್ರೆ ನಿಮಿತ್ತ ಮಠದ ಆವರಣದಲ್ಲಿ ಶಾಲೆ-ಕಾಲೇಜುಗಳ ಎನ್‌ಸಿಸಿ ವಿದ್ಯಾರ್ಥಿಗಳು, ಹೋಂಗಾರ್ಡ್ಸ್‌ಗಳು ಕಾರ್ಯನಿರ್ವಸುತ್ತಿದ್ದಾರೆ.
ಗವಿಮಠದ ಜಾತ್ರೆ ಕುರಿತು ಪ್ರಚಾರ ನೀಡಲು ನಗರದ ಕಿಯೋನಿಕ್ಸ್ ಎಸ್‌ಎಸ್‌ಐ ಟೆಕ್ನಾಲಿಜಿಸ್ ಮುಖ್ಯಸ್ಥ ಮಂಜುನಾಥ ಉಲ್ಲತ್ತಿ ಅವರು, ಇಂಟರ್‌ನೆಟ್, ಫೇಸ್‌ಬುಕ್‌ನಂತ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಜಾತ್ರೆ, ಮಹಾದಾಸೋಹ, ವಾರ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಿದ್ದಾರೆ.
ಈಗಾಗಲೇ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌದಿ ಅರೇಬಿಯಾ, ಲುಬಿಯಾ ಮುಂತಾದ ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಗವಿಮಠದ ಜಾತ್ರೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಸ್‌ಎಂಎಸ್ ಮೂಲಕ  ಭಕ್ತರನ್ನು ಜಾತ್ರೆಗೆ ಆಹ್ವಾನಿಸುತ್ತಿದೆ.
ಜಾತ್ರೆ ಪೂರ್ವಸಿದ್ಧತೆ, ಇನ್ನಿತರ ಮಾಹಿತಿ ಬೇಕಾದರೆ ನಿಮ್ಮ ಮೊಬೈಲ್‌ನಲ್ಲಿ ಗವಿಮಠ ಎಂದು ಟೈಪ್ ಮಾಡಿ ಮೊ. 9986062129ಗೆ ಸಂದೇಶ ಹಾಕಿದರೆ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಕುಳಿತಲ್ಲೇ ಗವಿಸಿದ್ಧೇಶ್ವರ ಜಾತ್ರೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ