ಹಂದಿ, ಬೀದಿ ನಾಯಿ, ಬಿಡಾಡಿ ದನ ಕಾರ್ಯಾಚರಣೆ ನಿರಂತರವಾಗಿ ನಡೆಸುವಂತೆ ಆಯುಕ್ತರಿಗೆ ಸೂಚನೆ ನೀಡಿದ ಮೇಯರ್ ಶಿವು ಹಿರೇಮಠ, ಕಾರ್ಯಾಚರಣೆಗೆ ಸಹಕಾರ ನೀಡುವಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗೆ ಮತ್ತೊಮ್ಮೆ ಮನವಿ ಮಾಡುವುದಾಗಿ ತಿಳಿಸಿದರು.
ಹುಬ್ಬಳ್ಳಿ ಇಂದಿರಾ ನಗರದಲ್ಲಿ ಹಂದಿ ಹಿಡಿಯಲು ತೆರಳಿದ್ದ ತುಮಕೂರಿನ ಗುತ್ತಿಗೆ ಆಧಾರದ 3, ಪಾಲಿಕೆಯ ಐವರು ಸೇರಿದಂತೆ ಒಟ್ಟು 8 ಕಾರ್ಮಿಕರಿಗೆ ತಲಾ ರು. 50 ಸಾವಿರ ಪರಿಹಾರ ನೀಡುವುದಾಗಿ ಮೇಯರ್ ಪ್ರಕಟಿಸಿದರು.
ಧಾರವಾಡದಲ್ಲಿ ಗುರುವಾರ ಬೆಳಗ್ಗೆ ಹಂದಿಯಿಂದ ಕಚ್ಚಿಸಿಕೊಂಡ ಐದು ವರ್ಷದ ಬಾಲಕ ಸಾಯಿರಾಮ್ ಮಲ್ಲಿಗವಾಡನ ಪಾಲಕರಿಗೆ ರು. 25 ಸಾವಿರ ಪರಿಹಾರಧನ, ಬಾಲಕನನ್ನು ಹಂದಿಯಿಂದ ರಕ್ಷಿಸಿದ ಪೌರಕಾರ್ಮಿಕೆ ಲಕ್ಷ್ಮವ್ವಗೆ ರು. 20 ಸಾವಿರ ಪ್ರೋತ್ಸಾಹಧನ ಮತ್ತು ಪಾಲಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದರು.