ಧಾರವಾಡ

ಸಹಿ ಹಾಕಿ, ಸ್ವಚ್ಛತೆ ಕಾಪಾಡಿ

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 11
ಕಸ ಸಮಸ್ಯೆಗೆ ಪರಿಹಾರ ಸೂಚಿಸುವ ಉದ್ದೇಶದಿಂದ 60 ಸಂಘಟನೆಗಳು ಸೇರಿ ಭಾನುವಾರದಿಂದ ಧಾರವಾಡದಲ್ಲಿ ಪರಿಸರ ರಕ್ಷಣಾ ಆಂದೋಲನ ನಡೆಸುತ್ತಿವೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘಟಕ ವಿಜಯಾನಂದ ದೊಡವಾಡ, ಮಹಾನಗರ ಸಮಗ್ರ ನಾಗರಿಕ ಸಕಾಲ ಪರಿಸರ ರಕ್ಷಣಾ ಆಂದೋಲನದ ಹೆಸರಿನಲ್ಲಿ ಧಾರವಾಡದ 60 ಸಂಘಟನೆಗಳು ಒಗ್ಗಟ್ಟಾಗಿವೆ. ಧಾರವಾಡದಲ್ಲಿ ಘನತ್ಯಾಜ್ಯ ಸಮರ್ಪಕ ವಿಲೇವಾರಿ, ಪಾಲಿಕೆ ವ್ಯಾಪ್ತಿಯಲ್ಲಿ ಹಂದಿಗಳ ನಿರ್ಮೂಲನೆ ಹಾಗೂ 20 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಳಕೆ ನಿರ್ಬಂಧಿಸುವುದರ ಕುರಿತು ಭಾನುವಾರದಿಂದ ಸಹಿ ಸಂಗ್ರಹ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು. ಧಾರವಾಡ ನಗರ ವೇಗವಾಗಿ ಬೆಳೆಯುತ್ತಿದ್ದು, ಕಸ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿದೆ. ಪಾಲಿಕೆ ಸಾರ್ವಜನಿಕರಿಂದ ಕರ ವಸೂಲಿ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ನಗರದ ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಕಸ ವಿಲೇವಾರಿಯ ಈಗಿನ ಪದ್ಧತಿ ಕೈ ಬಿಟ್ಟು ವಾಹನಗಳ ಮೂಲಕ ಮನೆ-ಮನೆಗೆ ಹೋಗಿ ಕಸ ವಿಲೇವಾರಿ ಮಾಡುವುದರಿಂದ ಕಸದ ಸಮಸ್ಯೆ ಉಂಟಾಗದು. 20 ಮೈಕ್ರಾನ್‌ಗಿಂತ ಕಡಿಮೆ ಸಾಮರ್ಥ್ಯದ ಪ್ಲಾಸ್ಟಿಕ್ ಬಳಸುವಂತಿಲ್ಲ ಎಂಬ ಕಾನೂನಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಸಾಕಾರವಾಗುತ್ತಿಲ್ಲ. ನಗರದಲ್ಲಿ ಹಂದಿಗಳ ಕಾಟವೂ ಜಾಸ್ತಿಯಾಗಿದೆ. ಈ ಎಲ್ಲ ಅಂಶಗಳಿನ್ನಿಟ್ಟುಕೊಂಡು ಭಾನುವಾರ ಕರ್ನಾಟಕ ಕಾಲೇಜು ವೃತ್ತದಿಂದ ಸಹಿ ಆಂದೋಲನ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರು ಸಹಕಾರ ನೀಡಿ ಧಾರವಾಡ ನಗರವನ್ನು ಸ್ವಚ್ಛವಾಗಿಡುವಲ್ಲಿ ಕೈಜೋಡಿಸಬೇಕು ಎಂದು ವಿಜಯಾನಂದ ದೊಡವಾಡ ಹೇಳಿದರು. ಸ್ಕೋಪ್ ಸಂಸ್ಧೆಯ ಡಾ೤ ಪ್ರಕಾಶ ಭಟ್, ಗ್ರೀನ್ ಆರ್ಮಿ ಸಂಸ್ಥೆಯ ಪ್ರಕಾಶ ಗೌಡರ, ಕಲಾದರ್ಶಿ ಸಂಘದ ಕೆ.ಎಚ್. ನಾಯಕ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ