ಧಾರವಾಡ

ಕಾರ್ಗಿಲ್ ಯೋಧರಿಗೆ ಗೌರವ

ನವಲಗುಂದ: ಕಾರ್ಗಿಲ್ ಕಣಿವೆಯಲ್ಲಿ ಸೆಣಿಸಿದ ಭಾರತ ಭೂ ಸೇನೆ ಮತ್ತು ವಾಯುದಳದ ವೀರ ಯೋಧರ ಕಾರ್ಯ ಶ್ಲಾಘನೀಯ. ನಮ್ಮ ವೀರ ಸೈನಿಕರು ಸತತ 76 ದಿನಗಳ ವರೆಗೆ ಹೋರಾಡಿ ನುಸುಳುಕೋರರನ್ನು ಹಿಮ್ಮೆಟ್ಟಿಸಿದರು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಎ.ಬಿ. ಕೊಪ್ಪದ ಹೇಳಿದರು.
ನವಲಗುಂದ ಹುರಕಡ್ಲಿ ಅಜ್ಜ ಕಲ್ಯಾಣ ಕೇಂದ್ರದಲ್ಲಿ ಎಂ.ಎಸ್. ಶಿರಿಯಣ್ಣವರ ನೇತೃತ್ವದಲ್ಲಿ ನಡೆದ 15ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 1999ರಲ್ಲಿ ಕಾರ್ಗಿಲ್ ಸಮರದ ವಿಜಯ ಐತಿಹಾಸಿಕ ವಿಜಯೋತ್ಸವ. ಅಧಿಕೃತ ದಾಖಲೆಗಳ ಪ್ರಕಾರ 523 ಸೈನಿಕರು ವೀರ ಮರಣ ಹೊಂದಿ 1083 ಯೋಧರು ಗಾಯಾಳುಗಳಾಗಿ, ಒಬ್ಬ ಯೋಧ ಯುದ್ಧ ಕೈದಿಗಳಾದರು. ತಾಯಿ ನೆಲದ ಸಾರ್ವಭೌಮತ್ವಕ್ಕಾಗಿ ಜೀವ ತೆತ್ತ ಸೈನಿಕರಿಗೆ ನಮ್ಮೆಲ್ಲರ ಗೌರವಪೂರ್ವಕ ಸಲಾಂ ಎಂದರು.
ಸೀತಾ ಶಿರಿಯಣ್ಣವರ ಮಾತನಾಡಿದರು. ಅಧ್ಯಕ್ಷತೆಯನ್ನು ನಿಂಗಪ್ಪ ಚವಡಿ ವಹಿಸಿದ್ದರು. ನಿವೃತ್ತ ಶಿಕ್ಷಕ ಡಿ.ವಿ. ಕುರಹಟ್ಟಿ ಮಾತನಾಡಿ, ದೇಶದ ಪ್ರತಿ ಪ್ರಜೆಯೂ ತನ್ನ ಸಾಮಾಜಿಕ ಜವಾಬ್ದಾರಿಗಳನ್ನು ಸ್ವಾರ್ಥರಹಿತವಾಗಿ ನಿರ್ವಹಿಸಿದಾಗ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು. ಎಪಿಎಂಸಿ ಅಧ್ಯಕ್ಷ ಅಣ್ಣಪ್ಪ ಬಾಗಿ, ಟಿ.ವಿ. ಮಹಾಂತೇಶ, ನಿವೃತ್ತ ಸೈನಿಕ ರಾಮಣ್ಣ ಕುಲಕರ್ಣಿ, ಎಂ.ವಿ. ಗಂಗಣ್ಣವರ, ಪಿಎಎಸ್‌ಐ ಆನಂದ ಡೋಣಿ, ಸುರೇಶ ಹಡಪದ, ಈರಣ್ಣ ಬೂದಿಹಾಳ, ಎಲ್.ಬಿ. ಪಾಟೀಲ, ಆರ್.ಬಿ. ಕಮತರ, ಎ.ಎಂ. ನದಾಫ್, ಮಹಾಂತೇಶ ಗಲಗಲಿ ಇದ್ದರು. ಸಂಜೀವಗೌಡ ಬಿ.ಎಚ್., ನಿರೂಪಿಸಿದರು. ಸರೋಜಾ ಹೊಳೆಯಣ್ಣವರ ಪ್ರಾರ್ಥಿಸಿದರು. ಡಿ.ಎಚ್. ಮಳಲಿ ವಂದಿಸಿದರು. 1 ನಿಮಿಷ ಮೌನದ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!