ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಜಾತ್ಯತೀತ ಜನತಾದಳ ವತಿಯಿಂದ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಕುರಿತಂತೆ ಚರ್ಚಿಸಲು ಪೂರ್ವಭಾವಿ ಸಭೆ ಮೇ 7ರಂದು ಬೆಳಗ್ಗೆ 10.30ಕ್ಕೆ ಜೆ.ಜೆ. ಕಾಮರ್ಸ್ ಕಾಲೇಜ್ ಎದುರಿನ ವಾಲಿ ಆರ್ಕೆಡ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪಕ್ಷದ ಮುಖಂಡರು, ಅಧ್ಯಕ್ಷರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗ್ಗೊಳ್ಳಬೇಕೆಂದು ಹುಬ್ಬಳ್ಳಿ ಗ್ರಾಮೀಣ ಅಧ್ಯಕ್ಷ ಕಿರಣಕುಮಾರ ಸಿ. ಹಿರೇಮಠ ಪ್ರಕಟಣೆಯಲ್ಲಿ ಕೋರಿದ್ದಾರೆ.
ಅಕ್ರಮ ಪಡಿತರ ಅಕ್ಕಿ, ಗೋದಿ ವಶ
ಹುಬ್ಬಳ್ಳಿ: ಪಡಿತರ ಅಕ್ಕಿ ಹಾಗೂ ಗೋದಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾಫರ್ ಅಮ್ಮಿನಬಾವಿ ಎಂಬುವ 160 ಕೆಜಿ ಅಕ್ಕಿ ಹಾಗೂ 520 ಕೆಜಿ ಗೋದಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ತಮ್ಮಣ್ಣರಾವ್ ಶ್ರೀಪಾದರಾವ್ ದುಶಿ
ಹುಬ್ಬಳ್ಳಿ: ಹೆಗ್ಗೇರಿ ಬಸವನಗರವಾಸಿ ನಿವೃತ್ತ ರೇಲ್ವೇ ಉದ್ಯೋಗಿ ತಮ್ಮಣ್ಣರಾವ್ ಶ್ರೀಪಾದರಾವ್ ದುಶಿ (69) ಸೋಮವಾರ ನಿಧನರಾದರು. ಮೃತರು ಅಪಾರ ಬಂಧು ಬಳವನ್ನಗಲಿದ್ದಾರೆ.