ಹುಬ್ಬಳ್ಳಿ: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹುಬ್ಬಳ್ಳಿ ಮತ್ತು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ ನಿಗಮದ ಆಶ್ರಯದಲ್ಲಿ ಮೇ 29ರಂದು ಬೆಳಗ್ಗೆ 9.30ಕ್ಕೆ ಹುಬ್ಬಳ್ಳಿಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಬೆಂಗಳೂರಿನ ಟೊಯೋಟಾ ಕಿರ್ಲೋಸ್ಕರ್, ಕೋಲಾರಿನ ಲುಮ್ಯಾಕ್ಸ್ ಅಟೊ ಟೆಕ್ನಾಲಜಿಸ್ ಲಿ, ಹುಬ್ಬಳ್ಳಿಯ ತಾಜ್ ದಿ ಗೆಟವೇ ಹೋಟೆಲ್, ಏರೋಕ್ಲಬ್ ವುಡ್ಲ್ಯಾಂಡ್, ಬೆಲ್ಲದ ಅಟೊಮೊಬೈಲ್ಸ್, ಎಲಿಗಂಟ್ ಡ್ರಗ್ಸ್, ಫ್ರಂಟಲೈನ್ ಎಂಜಿನಿಯರ್ಸ್, ಸುವಿಜನ್ ಹೋಲ್ಡಿಂಗ್ಸ್ ಪ್ರೈ. ಲಿ., ಎಸ್ಬಿಐ ಲೈಫ್ ಇನ್ಸೂರನ್ಸ್, ಎನ್ಎಸ್ ಇನ್ಫೋಟೆಕ್, ನವಭಾರತ ಫರ್ಟಿಲೈಸರ್ಸ್, ಫರ್ಸ್ಟಸೋರ್ಸ್ ಸಲ್ಯೂಶನ್ಸ್, ಬಜಾಜ್ ಲೈಫ್ ಇನ್ಸೂರನ್ಸ್, ಜಿ4ಎಸ್ ಸೆಕ್ಯೂರಿಟಿ, ಗಾರ್ಡವೆಲ್ ಡಿಟೆಕ್ಟಿವ್ ಸರ್ವಿಸಸ್ ಪ್ರೈ. ಲಿ. ಮತ್ತು ಬೆಳಗಾವಿಯ ಕೆಎಂಪಿಸಿ, ಖಾಸಗಿ ರಂಗದ ಉದ್ಯೋಗದಾತರು ತಮ್ಮ ಸಂಸ್ಥ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಐಟಿಐ-ಫಿಟ್ಟರ್, ಇಲೆಕ್ಟ್ರಿಶಿಯನ್, ಮಶಿನಿಸ್ಟ್, ಟರ್ನರ್, ಡ್ರಾಫ್ಟ್ಮನ್ ಹುದ್ದೆಗಳಿಗೆ ಅಭ್ಯರ್ಥಿಗಳು ಬಯೋಡಾಟಾದೊಂದಿಗೆ 29ರ ಬೆಳಗ್ಗೆ ಹಾಜರಿರಬೇಕೆಂದು ಶ್ರೀಕಾಂತ ಮಾಲಗತ್ತಿ ತಿಳಿಸಿದ್ದಾರೆ.