ಗದಗ

ಅಟಲ್‌ಜೀ: ಅವ್ಯವಸ್ಥೆ ಸರಿಪಡಿಸುವಂತೆ ಮನವಿ


ಗದಗ: ಅಟಲ್‌ಜೀ ಜನಸ್ನೇಹಿ ಸೇವಾ ಕೇಂದ್ರಗಳು ಅವ್ಯವಸ್ಥೆಯಿಂದ ಕೂಡಿದ್ದು, ಇವುಗಳ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕೆಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೇಂದ್ರದಲ್ಲಿ ಅರ್ಜಿ ಕೊಡುವುದು, ಮರಳಿ ಪಡೆಯುವುದು, ಅರ್ಜಿ ಕುರಿತು ವಿಚಾರಿಸುವುಲ್ಲಿ ಹೀಗೆ ಇನ್ನು ಹಲವು ರೀತಿಯಲ್ಲಿ ಸಮಸ್ಯೆಯಾಗುತ್ತಿದೆ. ಒಂದೇ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಣೆ, ಅಲ್ಲದೇ ದಿನಕ್ಕೆ 3 ಜನ ಗುಮಾಸ್ತರು ಬದಲಾವಣೆಯಾಗುತ್ತಾರೆ ಎಂದು ದೂರಿದ್ದಾರೆ.
ಕೇಂದ್ರಗಳಲ್ಲಿ ಜನರಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು. ಅರ್ಜಿ ಪಡೆಯಲು ಒಂದು ಕಿಡಕಿ, ಮರಳಿ ಪಡೆಯಲು ಮತ್ತೊಂದು ಕಿಡಕಿ, 2 ಕಂಪ್ಯೂಟರ್ ಒದಗಿಸಬೇಕು. ಹಾಗೂ ಖಾಯಂ ಆಗಿ ಜವಾಬ್ದಾರಿಯುತ ಅಧಿಕಾರಿಗಳನ್ನು ನಿಯೋಜಿಸಿ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಜಂಟಿ ಕಾರ್ಯದರ್ಶಿ ಉಮರ್‌ಫಾರೂಕ್ ಹುಬ್ಬಳ್ಳಿ, ಅಶೋಕ ಮಂದಾಲಿ, ಸಂತೋಷ ರಾಮನಹಳ್ಳಿ, ಶಿವಾನಂದ ಮಾದಣ್ಣನವರ, ಅಜಯ ಪಾಟೀಲ, ಸುಧೀರ ಶಿವಪುರ, ವೀರನಗೌಡ ದೊಡ್ಡಗೌಡ್ರ, ಜಹೀರ ಅಬ್ಬಾಸ ಲಾಲಕೋಟಿ, ಸದ್ದಾಂ ಬಬರ್ಚಿ, ಗೋಪಾಲ ಲಮಾಣಿ, ಚಾಂದಸಾಬ ಕೊಟ್ಟೂರ, ಷಣ್ಮುಖ ಹರಿಜನ, ಮಹ್ಮದ ಬಿಲಾಲ ಹುಬ್ಬಳ್ಳಿ, ಸಲೀಂ ಬಳ್ಳಾರಿ, ಇಬ್ರಾಹಿಂ ಹುಬ್ಬಳ್ಳಿ, ಸಲೀಂ ಹುಬ್ಬಳ್ಳಿ, ಅನ್ವರ ಶಿರಹಟ್ಟಿ, ಆಜಮತ ಅಡರಕಟ್ಟಿ, ಮಲ್ಲನಗೌಡ ಹನುಮಂತಗೌಡ್ರ, ಮಾರುತಿ ಬೋರಲೆ, ರಾಜು ಉಮಚಗಿ ಮುಂತಾದವರು ಪಾಲ್ಗೊಂಡಿದ್ದರು.
ಲಕ್ಕುಂಡಿ ಗ್ರಾಪಂ ಸದಸ್ಯರಿಂದ ಡಿಸಿಗೆ ಮನವಿ
ಗದಗ: ತಾಲೂಕಿನ ಇತಿಹಾಸ ಪ್ರಸಿದ್ಧ ಲಕ್ಕುಂಡಿ ಉತ್ಸವದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭವನ್ನು ಲಕ್ಕುಂಡಿಯಲ್ಲೇ ನಡೆಸುವಂತೆ ಒತ್ತಾಯಿಸಿ ಶುಕ್ರವಾರ ಗ್ರಾಪಂ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈಚೆಗೆ ಲಕ್ಕುಂಡಿ ಉತ್ಸವದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಉತ್ಸವದ ಉದ್ಘಾಟನಾ ಸಮಾರಂಭ ಲಕ್ಕುಂಡಿಯಲ್ಲಿ, ಸಮಾರೋಪವನ್ನು ಗಜೇಂದ್ರಗಡದಲ್ಲಿ ನಡೆಸುವ ಕುರಿತು ನಿರ್ಧರಿಸಿದ್ದಕ್ಕೆ ಗ್ರಾಮಸ್ಥರು ಹಾಗೂ ಜಿಲ್ಲೆಯ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಉತ್ಸವ ಉದ್ಘಾಟನೆಯಾದ ಸ್ಥಳದಲ್ಲೇ ಸಮಾರೋಪವೂ ಆಗಬೇಕೆಂಬುದು ಜನತೆ ಆಶಯ. ಜಿಲ್ಲಾಧಿಕಾರಿಗಳು ಕಾಳಜಿ ವಹಿಸಿ, ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಲಕ್ಕುಂಡಿಯಲ್ಲೇ ನಡೆಯುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಗ್ರಾಪಂ ಸದಸ್ಯರಾದ ರವಿರಾಜ ಕಟ್ಟಿಗ್ಗಾರ, ಅಂದಪ್ಪ ತಿಮ್ಮಾಪುರ, ದೇವಪ್ಪ ಖಂಡು, ಪ್ರಕಾಶ ಅರಹುಣಸಿ, ಬಸವರಾಜ ಮೂಲಿಮನಿ, ಮಹಾಂತೇಶ ಮೆಣಸಿನಕಾಯಿ, ಡಿ.ಎಚ್. ಮುಲ್ಲಾ, ಕುಬೇರಪ್ಪ ಕಮ್ಮಾರ, ಈರಪ್ಪ ಬಂಡಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್