ಗದಗ

ಇಂದು ಶಿವಾನುಭವ

ಮುಂಡರಗಿ:  ಮುಂಡರಗಿ ಜಗದ್ಗುರು ತೋಂಟದಾರ್ಯ ಮಠದಲ್ಲಿ ಫೆಬ್ರವರಿ 6ರಂದು ಸಂಜೆ 7.30ಕ್ಕೆ 64ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮ ಜರುಗಲಿದೆ. ಜ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಗದಗ ತೋಂಟದಾರ್ಯ ಮಠದ ಬಸವರಾಜ ವೆಂಕಟಾಪುರ ಶರಣರು ಅತಿಥಿ ಉಪನ್ಯಾಸ ಮಾಡುವರು. ಈ ಸಂದರ್ಭದಲ್ಲಿ 2012-13ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದಿರುವ ತಾಲೂಕು ತೋಟಗಾರಿಕಾ ಇಲಾಖೆ ನಿರ್ದೇಶಕ ಸುರೇಶ ಕುಂಬಾರ ಹಾಗೂ 80 ವಸಂತಗಳನ್ನು ಪೂರೈಸಿದ ಈಶ್ವರಪ್ಪ ಉಪ್ಪಿನಬೆಟಗೇರಿಯವರನ್ನು ಸನ್ಮಾನಿಸಲಾಗುವುದು ಎಂದು ತೋಂಟದಾರ್ಯ ಮಠದ ಪ್ರಕಟಣೆ ತಿಳಿಸಿದೆ.
ಇಂದು ಚಿಕಿತ್ಸಾ ಶಿಬಿರ
ಮುಂಡರಗಿ: ನಿಯೋಸಾಫ್ಟ್ ಪಬ್ಲಿಕೇಶನ್ ಮಾರ್ಕೇಟಿಂಗ್ ಮತ್ತು ಇನ್‌ಫಾರ್ಮೇಶನ್ ಸೆಂಟರ್ ಮಣಿಪಾಲ್ ಅವರಿಂದ ಫೆ. 6ರಂದು ಬೆಳಗ್ಗೆ 10.30ಕ್ಕೆ ಸ್ಥಳೀಯ ಅಂಬಾಭವಾನಿ ಕಲ್ಯಾಣ ಕೇಂದ್ರದಲ್ಲಿ ಮುಂಡರಗಿ ತಾಲೂಕು ಮಟ್ಟದಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭ ಜರುಗಲಿದೆ. ಕಲಕೇರಿ-ವಿರುಪಾಪುರದ ಷ.ಬ್ರ. ಮಧುಕೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವಿ. ತಿಗರಿಮಠ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್ ಎ.ಟಿ. ನರೇಗಲ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಮಖ್ಯ ಅತಿಥಿಗಳಾಗಿ ಡಾ. ಎಂ.ಎಂ.ಸೊಲ್ಲಾಪುರ, ಎಂ.ಎನ್. ನಾಯಕ, ಈಶ್ವರಪ್ಪ ಹಂಚಿನಾಳ, ಸುರೇಶ ಹೊಸಮನಿ, ಎಂ.ಬಿ. ಪಾಟೀಲ, ಎಂ.ಸಿ. ಅಯ್ಯನಗೌಡ್ರ, ಹನಮಪ್ಪ ಸಣಕಲ್, ಗದಿಗೆಪ್ಪ ಕಂಬಳಿ, ಕುಬೇರಪ್ಪ ನಾಯಕ, ನಾಗರಾಜ ಮಂಜುನಾಥ ನಾಯಕ, ಅಶೋಕ ಕುಮಾರ, ಉಮೇಶ ಬಿ. ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಾಲೂಕು ಅಭಿವೃದ್ಧಿ ಅಧಿಕಾರಿ ಮಾರುತಿ ಕೊಡ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಹುಡ್ಕೋ ಕೆಲವು ಭಾಗ, ಮುಳಗುಂದ ರೋಡ್, ಕಲಾಲ ಲೈನ್, ಜಾಕೀರಹುಸೇನ್ ಕಾಲನಿ, ರಾಧಾಕೃಷ್ಣ ನಗರ ಈ ಭಾಗಗಳಲ್ಲಿ ಬುಧವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!