ಮುಂಡರಗಿ: ಮೃಡಗಿರಿ ಸ್ಪೋರ್ಟ್ಸ್ ಕ್ಲಬ್ ಮುಂಡರಗಿ ಇವರ ಆಶ್ರಯದಲ್ಲಿ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 16 ಹಾಗೂ 17ರಂದು ಮುಂಡರಗಿ ಪಟ್ಟಣದ ಪುರಸಭೆ ಪಕ್ಕದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾವಳಿ ಜರುಗಲಿದೆ. ಫೆ. 16ರ ಬೆಳಗ್ಗೆ 10.30ಕ್ಕೆ ಪಂದ್ಯಾವಳಿ ಉದ್ಘಾಟನೆಯಾಗಲಿದ್ದು, ಜ.ಡಾ. ಅನ್ನದಾನೀಶ್ವರ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ. ಬಿಎಸ್ಆರ್ ಪಕ್ಷದ ಯುವ ಮುಖಂಡ ಮಹಾಂತೇಶ ಹಳ್ಳೆಪ್ಪನವರ ಹಾಗೂ ಕುಮಾರಸ್ವಾಮಿ ಹಿರೇಮಠ ಉದ್ಘಾಟಿಸುವರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಕೃಷ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸಿವರು. ಹೇಮಂತಗೌಡ ಪಾಟೀಲ, ಆನಂದಗೌಡ ಪಾಟೀಲ, ಡಿ.ಡಿ. ಮೋರನಾಳ, ಎಸ್.ಡಿ. ಮಕಾಂದಾರ, ದುದ್ದುಸಾಬ್ ಕಾತರಕಿ, ಅನ್ವರಬಾಷಾ ಹಣಗಿ, ಮೋದಿನಸಾಬ್ ಡಂಬಳ, ಕರೀಂಸಾಬ್ ಮುಲ್ಲಾ, ವಿ.ಎಸ್. ಘಟ್ಟಿ, ಜಿ.ಬಿ. ಅಮಾತಿ, ಆಗಮಿಸಲಿದ್ದಾರೆ. ಫೆ 17ರ ಸಂಜೆ 4 ಗಂಟೆಗೆ ಬಹುಮಾನ ವಿತರಣಾ ಸಮಾರಂಭ ಜರುಗಲಿದೆ. ಜ.ಡಾ. ಅನ್ನದಾನೀಶ್ವರ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ. ಹೇಮಂತಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕರಬಸಪ್ಪ ಹಂಚಿನಾಳ, ಎ.ಟಿ. ನರೇಗಲ್. ಸುನೀಲ್ ಸವದಿ, ವೈ.ಎನ್. ಗೌಡರ, ಧೃವಕುಮಾರ ಹೊಸಮನಿ, ವಿ.ಎಸ್. ಪಾಟೀಲ, ಆರ್.ಎಂ. ಪಾಟೀಲ, ನಾರಾಯಣಪ್ಪ ಇಲ್ಲೂರ, ಶೇಖವ್ವ ಸಂಗಟಿ, ಶಿವನಗೌಡ ಗೌಡ್ರ, ಎಸ್.ಎಸ್. ಪದಕಿ, ಡಾ. ನಿಂಗು ಸೊಲಗಿ, ಪ್ರೊ. ಎ.ವೈ. ನವಲಗುಂದ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.