ಗದಗ: ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ಅನುಷ್ಠಾನಗೊಳಿಸಿದ ಉದ್ಯೋಗಿನಿ ಯೋಜನೆ ಮಹಿಳೆಯರ ಸ್ವಾವಲಂಬನೆಗೆ ಸಹಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಎನ್. ಪರಮೇಶ್ವರಪ್ಪ ಕರೆ ನೀಡಿದರು.
ಹುಲಕೋಟಿಯ ಗಿಟ್ಸರ್ಡ್ ಸಂಸ್ಥೆಯಲ್ಲಿ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯೋಗಿನಿ ಯೋಜನೆ ಫಲಾನುಭವಿಗಳಿಗಾಗಿ ಏರ್ಪಡಿಸಿದ್ದ 3 ದಿನಗಳ ಉದ್ಯಮಶೀಲತಾ ತರಬೇತಿ ಉದ್ಘಾಟಿಸಿಗ ಅವರು, ಮಹಿಳೆ ಮನೆಗೆಲಸಕ್ಕೆ ಸೀಮಿತಗೊಳ್ಳದೆ ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು ಎಂದರು. ಕೆವಿಕೆ ಯೋಜನಾ ನಿರ್ದೇಶಕ ಎಚ್.ಆರ್. ಜಗದೀಶ ತರಬೇತಿ ಉದ್ದೇಶ ವಿವರಿಸಿದರು. ಅತಿಥಿಗಳಾಗಿ ಜಿಲ್ಲಾ ಸಂಯೋಜಕ ಡಿ.ವಿ. ಬಡಿಗೇರ ಪಾಲ್ಗೊಂಡಿದ್ದರು. ಗಿಟ್ಸರ್ಡ್ ಉಪನಿರ್ದೇಶಕ ಸುರೇಶ ಸ್ವಾಗತಿಸಿದರು.