ಗದಗ

ಸಂಭ್ರಮದ ಪೈಗಂಬರ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 25
ಇಸ್ಲಾಂ ಧರ್ಮ ಸಂಸ್ಥಾಪಕ ಹಜರತ್ ಮಹಮ್ಮದ ಪೈಗಂಬರರ ಜಯಂತಿ (ಈದ್ ಮಿಲಾದುನ್ನಬಿ) ಪ್ರಯುಕ್ತ ಶುಕ್ರವಾರ ಮುಸಲ್ಮಾನ ಬಾಂಧವರು ಪಟ್ಟಣದ ಜುಮ್ಮಾ ಮಸೀದಿಯಿಂದ ದುರ್ಗಾ ವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ ಹಾಗೂ ಈದ್ಗಾ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಜುಮ್ಮಾ ಮಸೀದಿಯಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಜೆಡಿಎಸ್‌ನ ಹೇಮಗಿರೀಶ ಹಾವಿನಾಳ, ಕೆಜಿಪಿಯ ಮುತ್ತಣ್ಣ ಗುಗ್ಗರಿ, ಮಲ್ಲಿಕಾರ್ಜು ಬೂದಿಹಾಳ, ಸಾಹಿತಿ ಎಫ್.ಎಸ್. ಕರಿದುರಗನವರ ಮೆರವಣೆಗೆಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಶಯ ಕೋರಿದರು. ಅಂಜುಮನ್ ಇಸ್ಲಾಂ ಕಮಿಟಿ ಚೇರ್‌ಮನ್ ಎಂ.ಎಚ್. ಕೋಲಕಾರ, ಎಂ.ಕೆ. ಹಿರೇಹಾಳ, ಎ.ಆರ್. ಗೋಡೆಕಾರ, ಸುಭಾನಸಾಬ ಆರಗಿದ್ದಿ, ಹಸನ ತಟಗಾರ, ಇಸ್ಮಾಯಿಲ್‌ಸಾಬ ನಾಲಬಂದ, ಮಕ್ತುಂಸಾಬ ಮುಧೋಳ ಇದ್ದರು.
ಬಂಟಿಂಗ್ಸ್ ವಿವಾದ: ಸ್ಥಳೀಯ ಜೋಡು ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದ ಬಳಿಯ ರಾಷ್ಟ್ರಧ್ವಜ ಹಾರಿಸುವ ಕಂಬಕ್ಕೆ ಈದ್ ಮಿಲಾದ್ ಆಚರಣೆ ಪ್ರಯುಕ್ತ ಕಟ್ಟಲಾದ ಬಂಟಿಂಗ್ಸ್ ತೆಗೆದು ಹಾಕಿದ್ದರಿಂದ ಕುಪಿತಗೊಂಡ ಮುಸ್ಲಿಂ ಯುವಕರು ದಲಿತರನ್ನು ನಿಂದಿಸಿದ್ದಾರೆಂದು ಆರೋಪಿಸಿ, ದಲಿತರ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದು, ಅಂಬೇಡ್ಕರ್ ವೃತ್ತದ ಬಳಿ ಕೆಲವರು ಧರಣಿಗೆ ಮುಂದಾದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಡಿಎಸ್ಪಿ ವಿ.ವಿ. ಕುಂಬಾರ, ರೋಣ ಸಿಪಿಐ ಎನ್.ಎಸ್. ನಾಯ್ಕರ, ಸ್ಥಳೀಯ ಪಿಎಸ್‌ಐ ವೀರಾರೆಡ್ಡಿ ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ