ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸದೃಢ ದೇಹ ಹೊಂದಲು ಕ್ರೀಡೆ ಅವಶ್ಯ: ಬಡ್ನಿ

Lingaraj Badiger
Updated On : 26 Oct 2013, 10:58 am

ಮುಳಗುಂದ: ಯುವಕರು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ದೇಹವನ್ನು ಸದೃಢವಾಗಿಟ್ಟುಕೊಳ್ಳುವಂತೆ ಯುವ ಮುಖಂಡ ಬಸವರಾಜ ಬಡ್ನಿ ಸಲಹೆ ನೀಡಿದರು.  ಅವರು ಪಟ್ಟಣದ ಕ್ರೀಡಾಪಟು ದಿ. ಫಕ್ಕಿರೇಶ ನೀಲಗುಂದ ಸ್ಮರಣಾರ್ಥ ಹಾಗೂ ಅಮರ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಎಸ್‌ಜೆಜೆಎಂ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಸಿಕ್ಸ್ ಏ ಸೈಡ್ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿ.ವಿ. ಚಿಂತಾ ವಿಜೇತ ಕೆಜಿಎನ್ ತಂಡಕ್ಕೆ ಬಹುಮಾನ ವಿತರಿಸಿದರು. ದ್ವಿತೀಯ ಸ್ಥಾನವನ್ನು ಎಸಿಸಿ ತಂಡವು ಪಡೆದುಕೊಂಡಿತು. ಉತ್ತಮ ಬಾಲರ್ ರಶೀದ್, ಉತ್ತಮ ಬ್ಯಾಟ್ಸ್‌ಮನ್ ನಜೀರ, ಉತ್ತಮ ಕಿಪರ್ ಮಹ್ಮದಲಿ, ಉತ್ತಮ ಆಲ್ ರೌಂಡರ್ ವಿಲಾಸ ನೀಲಗುಂದ ಇವರಿಗೆ ವಯಕ್ತಿಕ ಬಹುಮಾನ ನೀಡಲಾಯಿತು. ಪಪಂ ಸದಸ್ಯ ಎಂ.ಎಸ್. ಕಣವಿ, ಬಿ.ವಿ. ಸುಂಕಾಪುರ, ವಿಜಯಕುಮಾರ ನೀಲಗುಂದ, ಯಲ್ಲಪ್ಪ ಅದರಗುಂಚಿ, ಶಿಕ್ಷಕ ವಿ.ವಿ. ವಾಲಿ, ಪ್ರಭು ಬಳಗೇರ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಬಿ.ವಿ. ಚಕ್ರಸಾಲಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement