ಗದಗ

ವಸತಿ ಶಾಲೆ ಕಾಮಗಾರಿ ಕುಂಠಿತ

-ಡಿ.ಜಿ. ಮೋಮಿನ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 15
ಸಮೀಪದ ದಕ್ಷಿಣ ಕಾಶಿ ಪ್ರಸಿದ್ಧ ಕಾಲಕಾಲೇಶ್ವರ ಗುಡ್ಡದ ಎದುರಿನ ವಿಶಾಲವಾದ ಬೆಟ್ಟಗಳ ಮಧ್ಯೆ ಸಮಾಜ ಕಲ್ಯಾಣ ಇಲಾಖೆಯಿಂದ ರು. 5.15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆ ಕಟ್ಟಡ ಕಾಮಗಾರಿ ಆಮೆಗತಿಯಿಂದ ಸಾಗಿರುವುದು ಶಿಕ್ಷಣ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
13 ಎಕರೆ ಜಮೀನಿನಲ್ಲಿ ಕಟ್ಟಡದ ಕಾಮಗಾರಿ 2012 ನವೆಂಬರ್ 4ರಂದು ಆರಂಭಗೊಂಡಿದೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅನುದಾನ ಕೊರತೆಯಿಂದಾಗಿ ವಿಳಂಬಗೊಂಡಿದೆ ಎನ್ನುವುದು ಗುತ್ತಿಗೆದಾರರ ಹೇಳಿಕೆ. ಅದೇನೆ ಆಗಲಿ ಸರ್ಕಾರದ ಯೋಜನೆಗಳೆ ಹೀಗೇನಾ ಎನ್ನುವ ಪ್ರಶ್ನೆ ಜನರಲ್ಲಿ ಮೂಡಲಾರಂಭಿಸಿದೆ.
ವಸತಿ ಕಟ್ಟಡದಲ್ಲಿ ಒಟ್ಟು 16 ಕೊಠಡಿಗಳಿದ್ದು, 2 ವಸತಿಗೃಹಗಳು, 6 ತರಗತಿ ಕೊಠಡಿ ನಿರ್ಮಾಣಗೊಳ್ಳುತ್ತಿವೆ. ನೆಲ ಮಹಡಿಯಲ್ಲಿ 80 ವಿದ್ಯಾರ್ಥಿಗಳ 3 ತರಗತಿ ಕೊಠಡಿ, ಬೃಹತ್ ಪ್ರಯೋಗಾಲಯ, ಪ್ರಾಂಶುಪಾಲರು, ಶಿಕ್ಷಕರು, ದಾಖಲೆ ಕೊಠಡಿ ಜತೆ ಮಹಿಳೆಯರ, ಪುರುಷರ ಶೌಚಾಲಯಗಳ ಕಾಮಗಾರಿ ನಡೆದಿದೆ. ಆದಷ್ಟು ಬೇಗನೆ ಕಾಮಗಾರಿ ಮುಗಿಸಿ ಸೇವೆಗೆ ನೀಡುವುದಾಗಿ ಗುತ್ತಿಗೆದಾರರು ತಿಳಿಸಿದರು.

ದುರ್ಗಮ ಹಾದಿ  
ಗಜೇಂದ್ರಗಡದಿಂದ ಕಾಲಕಾಲೇಶ್ವರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ರಸ್ತೆಯಿಂದ ಒಳದಾರಿ ಮಣ್ಣಿನಿಂದ ಕೂಡಿರುವ ಎರಡುವರೆ ಕಿಲೋ ಮೀಟರ್ ದೂರದಲ್ಲಿ ಎರಡು ಗುಡ್ಡಗಳ ಮಧ್ಯೆ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ತಲೆ ಎತ್ತಿದ್ದು, ಈ ರಸ್ತೆ ಡಾಂಬರೀಕರಣ ಆಗಬೇಕಾಗಿದೆ.

ಮೇಲಂತಸ್ತು
ಮೇಲಂತಸ್ತಿನಲ್ಲಿ 4 ತರಗತಿ ಕೊಠಡಿ, ವಾರ್ಡನ್ ಕೋಣೆ, ನೌಕರ ಸಿಬ್ಬಂದಿ ಕೋಣೆ, ಉಗ್ರಾಣ ನಿರ್ಮಾಣವಾಗಲಿವೆ. ಕಟ್ಟಡ ಕೊರತೆಯಿಂದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಕಾಲಕಾಲೇಶ್ವರ ಗ್ರಾಮ ಬಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆಯುತ್ತಿದೆ. ಕಟ್ಟಡ ಪೂರ್ಣಗೊಂಡ ಬಳಿಕ ಈ ಕೊರತೆ ನೀಗಲಿದೆ ಎಂದು ರಾಜೂರ ಗ್ರಾಪಂ ಅಧ್ಯಕ್ಷ ಕಳಕಪ್ಪ ಕಂಬಳಿ ತಿಳಿಸಿದರು. ಆದಷ್ಟು ಬೇಗ ವಸತಿ ಶಾಲೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ವಿದ್ಯಾರ್ಥಿನಿಯರ ವಿದ್ಯಾರ್ಜನೆಗೆ ಲಭಿಸಲೆನ್ನುವುದು ಜನರ ಆಶಯವಾಗಿದೆ.

ಗಜೇಂದ್ರಗಡ ಭಾಗದಲ್ಲಿ ವೀರವನಿತೆ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ಆರಂಭಿಸಿರುವುದು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ. ಕಾಲಕಾಲೇಶ್ವರ ಮೊರಾರ್ಜಿ ವಸತಿ ಶಾಲೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಮಕ್ಕಳ ಶಿಕ್ಷಣ ನಡೆಯುತ್ತಿದೆ. ಈ ಕಟ್ಟಡ ಶೀಘ್ರದಲ್ಲಿ ಸೇವೆಗೆ ದೊರೆತರೆ ಕೊರತೆ ನೀಗಲಿದೆ. ಜತೆಗೆ ವಿದ್ಯಾರ್ಥಿಗಳು ನಿರಾಳವಾಗಿ ಅಭ್ಯಾಸ ಮಾಡಲು ಅನುಕೂಲವಾಗಲಿದೆ.
 - ಶಿವು ಚವ್ಹಾಣ,
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ