ಗದಗ

ರೋಣ: ವಿನಾಕಾರಣಕುಸಿಯುವ ಮನೆಗಳು

ಗದಗ: ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿಯಲ್ಲಿ 15 ದಿನಗಳಿಂದ ವಿನಾಕಾರಣ ಮನೆಗಳು ಕುಸಿಯುತ್ತಿವೆ. ಮೊದ ಮೊದಲು ಇದನ್ನು ತಾತ್ಸಾರ ಮಾಡಿದ್ದ ಗ್ರಾಮಸ್ಥರು, 8ಕ್ಕೂ ಹೆಚ್ಚು ಮನೆಗಳು ಕುಸಿದ ಮೇಲೆ ಆತಂಕಕ್ಕೆ ಒಳಗಾಗಿದ್ದಾರೆ. ಸಮಸ್ಯೆಯಿಂದ ಅನಿವಾರ್ಯವಾಗಿ ಮನೆ ತೊರೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸುವುದೇ ಮಣ್ಣಿನಿಂದ. ಚಾವಣಿಗೆ ಸಹ ಮಣ್ಣನ್ನೇ ಹಾಕುತ್ತಾರೆ ಹಾಗಾಗಿ ಮನೆ ಗೋಡೆ ಬಿರುಕು ಬಿಡಲು ಪ್ರಾರಂಭಿಸಿದ ನಂತರವಂತೂ ವಾಸವಾಗಿರುವುದೇ ಜಕ್ಕಲಿ ಗ್ರಾಮಸ್ಥರಿಗೆ ಕಷ್ಟವಾಗಿದೆ. ಗ್ರಾಮದ ಸಂಗಪ್ಪ ಮೆಣಸಗಿ ಎನ್ನುವವರ ಮನೆಯಲ್ಲಿ ಮೊದಲು ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ದಿನ ಕಳೆದಂತೆ ಅದು ದೊಡ್ಡದಾಗಿ ಮನೆಯವರಲ್ಲಿ ಆತಂಕ ಸೃಷ್ಟಿಸಿತು. ಇದನ್ನು ಅವರು ಓಣಿ ಜನರ ಬಳಿ ಹೇಳಿಕೊಂಡಿದ್ದಾರೆ. ಬಳಿಕ ದಿನೇ ದಿನೆ ಗ್ರಾಮದಲ್ಲಿ ಬೇರೆ ಮನೆಗೂ ಇದು ವ್ಯಾಪಿಸುತ್ತಿದೆ.
ಕಾಂಕ್ರೀಟ್ ಮನೆಗೂ ಸಮಸ್ಯೆ: ಪ್ರಾರಂಭದಲ್ಲಿ ಮಣ್ಣಿನ ಮನೆಗೆ ಮಾತ್ರ ಸೀಮಿತವಾಗಿದ್ದ ಈ ಸಮಸ್ಯೆ ಈಗ ಕಾಂಕ್ರೀಟ್ ಮನೆಗೂ ವಿಸ್ತರಿಸಿದ್ದು, ಕಬ್ಬಿಣ ಮತ್ತು ಸಿಮೆಂಟ್‌ನಿಂದ ನಿರ್ಮಿಸಿದ ಹಲವಾರು ಮನೆಗಳಲ್ಲಿಯೂ ಬಿರುಕು ಕಾಣಿಸಿಕೊಂಡಿದೆ. ಲಕ್ಷಾಂತರ ಖರ್ಚು ಮಾಡಿ ಮನೆ ನಿರ್ಮಿಸಿದ ಗ್ರಾಮಸ್ಥರು, ಈ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಕುರಿತು ಗಮನ ನೀಡಬೇಕು ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.
ಗ್ರಾಮಸ್ಥರಲ್ಲಿ ಆತಂಕ: ಬೆಳಗಾಗುತ್ತಲೇ ಅಲ್ಲಿ ಬಿರುಕು ಬಿಟ್ಟಿದೆ, ಅವರ ಮನೆಯ ಕಂಬ ಬೀಳುತ್ತಲಿದೆ ಎನ್ನುವ ಮಾತುಗಳೆ ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಪ್ರತಿಯೊಬ್ಬರೂ ಆತಂಕದಲ್ಲಿಯೇ ಹಗಲು-ರಾತ್ರಿ ಕಳೆಯುವಂತಾಗಿದೆ. ಏಕಾಏಕಿ ಮನೆಗಳಲ್ಲಿ ಕಂಡು ಬರುತ್ತಿರುವ ಬಿರುಕು ಹಾಗೂ ಮನೆ ಕುಸಿತವನ್ನು ನೋಡಲು ಪಕ್ಕದ ಗ್ರಾಮಗಳಿಂದ ಸಾರ್ವಜನಿಕರು ಆಗಮಿಸುತ್ತಿದ್ದು, ಇದು ಗ್ರಾಮಸ್ಥರಲ್ಲಿ ಮತ್ತಷ್ಟು ಭಯ ಹುಟ್ಟಿಸುತ್ತಿದೆ.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್