ಗುಲ್ಬರ್ಗಾ

ಚಿತ್ರಕಲೆಯಲ್ಲಿ ರೂಪಕೊಡುವ ಶಕ್ತಿ: ತಹಸೀಲ್ದಾರ್

ಚಿತ್ತಾಪುರ: ಕಲ್ಪನೆಗಳ ಮೂಲಕ ರೂಪ ಕೊಡುವ ಶಕ್ತಿ ಚಿತ್ರಕಲೆಯಲ್ಲಿ ಅಡಗಿದೆ ಎಂದು ತಹಸೀಲ್ದಾರ್ ಬಾಲರಾಜ ದೇವರಖದ್ರಾ ಹೇಳಿದರು. ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಸಾಶಿ ಇಲಾಖೆ ಆಯುಕ್ತರ ಕಚೇರಿ  2012- 13 ನೇ ಸಾಲಿನ ಚಿತ್ತಾಪುರ, ಸೇಡಂ, ಚಿಂಚೋಳಿ ತಾಲೂಕುಗಳ ಚಿತ್ರಕಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಚಿತ್ರಕಲೆಗಳ ಪ್ರದರ್ಶನ ಹಾಗೂ ಪ್ರಗತಿ ಪರೀಶಿಲನೆ ಸಭೆ ಮತ್ತು ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಲೆ ಎಲ್ಲರಲ್ಲಿ ಅಡಗಿರುತ್ತದೆ. ಜೀವನದಲ್ಲಿ ಆಳವಡಿಸಿಕೊಂಡು ಚಿತ್ರ ಕಲೆಯ ಪ್ರತಿಭೆ ಹೊರ ತರುವ ಪ್ರಯತ್ನ ಮಾಡಬೇಕು ಎಂದರು. ಪ್ರೌಢಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಹೊಸ್ಮನಿ ಮಾತನಾಡಿ, ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ದೃಶ್ಯ ಮಾಧ್ಯಮ ಚಿತ್ರಕಲೆಯು ಅನಕ್ಷರಸ್ಥರು ಶಿಕ್ಷಣ ಕಲಿಯುವ ಸರಳ ವಿಧಾನ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಕೊಪ್ಪದ, ಆಯುಕ್ತರ ಕಚೇರಿಯ ಚಿತ್ರಕಲಾ ವಿಷಯದ ಪರೀವೀಕ್ಷಕ ಟಿ. ದೇವಿಂದ್ರಪ್ಪ ಮಾತನಾಡಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ಲೊಡ್ಡೆನೋರ, ನಿರುದ್ಯೋಗ ಚಿತ್ರಕಲಾ ಶಿಕ್ಷಕರ ಸಂಘದ ರಾಜ್ಯ ಪ್ರ. ಕಾರ್ಯದರ್ಶಿ ಬಾಬುರಾವ ಟಿ. ಚವ್ಹಾಣ, ಶಾಲೆ ಮುಖ್ಯಗುರು ಲಿಂಗಪ್ಪ ಮಲ್ಕನ ವೇದಿಕೆಯಲ್ಲಿದ್ದರು. ಧರ್ಮಾನಂದ, ಕಿಶೋರ ನಾಗಿನೆ, ರಾಜಶೇಖರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. ನಿಧನರಾದ ಭಂಕೂರ ಚಿತ್ರಕಲಾ ಶಿಕ್ಷಕಿ ಜ್ಯೋತಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಆಚರಿಸಿದರು. ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಶಾಂತಮಲ್ಲ ಶಿವಮೊ ನಿರೂಪಿಸಿದರು. ಪ್ರಭು ಜಾಣ ಸ್ವಾಗತಿಸಿದರು. ನರಸಿಂಗ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ