ಗುಲ್ಬರ್ಗಾ

ಹಗಲುಗಳ್ಳನ ಬಂಧನ

ಗುಲ್ಬರ್ಗ: ಗುಲ್ಬರ್ಗ ನಗರದಲ್ಲಿ ಬೀಗ ಹಾಕಲ್ಪಟ್ಟಂತಹ ಮನೆಗಳನ್ನು ಹುಡುಕಿ, ಹಾಡುಹಗಲೇ ಚಾಣಾಕ್ಷತನದಿಂದ ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ಖದೀಮ ಕಳ್ಳನನ್ನು ಗುಲ್ಬರ್ಗ ಪೊಲೀಸರು ಬೆಂಗಳೂರಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಬಾಬು ಉರ್ಫ್ ಮಸ್ತಾನ್ ನಾಗವಾರ ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ನಿವಾಸಿ ಎಂಬುದು ವಿಚಾರಣೆ ಕಾಲಕ್ಕೆ ತಿಳಿದು ಬಂದಿದೆ.
ಗುಲ್ಬರ್ಗ ನಗರದ ವಿವಿಧ ಬಡಾವಣೆಗಳಲ್ಲಿ 2007 ರಿಂದ 2012ರ ಅವಧಿಯಲ್ಲಿ ನಡೆದಂತಹ ಬೀಗ ಜಡಿದ ಮನೆಗಳನ್ನು ಹೊಕ್ಕು ಮಾಡಲ್ಪಟ್ಟಂತಹ ಕಳವಿನ ಪ್ರಕರಣಗಳಲ್ಲಿ ಸಿಂಹಪಾಲು ಈತನ ಕೈ ಚಳಕದ್ದೇ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಗಲು ಕಳ್ಳತನ: ಗುಲ್ಬರ್ಗ ನಗರದಲ್ಲಿ 2007 ನೇ ಸಾಲಿನಿಂದ 2012ನೇ ಸಾಲಿನವರೆಗೆ ನಗರದ ವಿವಿಧ ಪೊಲೀಸ್ ಠಾಣೆಗಳ ಸರಹದ್ದುಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗುತ್ತಿರುವ ಯಜಮಾನರಿರುವ ಒಂಟಿ ಮನೆಗಳನ್ನು ಗುರುತಿಸಿ ಹೊಂಚು ಹಾಕಿ ಬಾಬು ಹಗಲು ಕಳ್ಳತನ ಮಾಡುವಲ್ಲಿ ಕುಖ್ಯಾತಿ ಪಡೆದಿದ್ದ.
   ಗುಲ್ಬರ್ಗದಲ್ಲಿ ಹಗಲು ಕಳ್ಳತನ ಮಾಡಿದ ಕೆಲವು ಮನೆಗಳಲ್ಲಿ ದೊರೆತ ಬೆರಳು ಮುದ್ರೆಯ ಆಧಾರದ ಮೇಲೆ ಗುರ್ತಿಸಿ ಗುಲ್ಬರ್ಗ ಜಿಲ್ಲಾ ಪೊಲೀಸರು ಮತ್ತು ಬೆಂಗಳೂರು ನಗರ ಪೊಲೀಸರ ಸಹಕಾರದೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ಕೈಕೊಂಡು ಖದೀಮ ಕಳ್ಳ ಬಾಬು ಉರ್ಫ್ ಮಸ್ತಾನ್‌ನನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವಿವಿಧೆಡೆ ಕಳ್ಳತನ: ಗುಲ್ಬರ್ಗ ನಗರದ ಸ್ಟೇಷನ್ ಬಜಾರ್ ಠಾಣಾ ವ್ಯಾಪ್ತಿಯ ಪಿಟಿ ಕಾಲೋನಿ, ರಹಿಮತ್ ನಗರ, ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಹತ್ತಿರದ ಬ್ಯಾಂಕ್ ಕಾಲೋನಿ, ಗಾಬರೆ ಲೇಔಟ್, ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಾಲಿಬಬ್ಕಾಲೋನಿ, ಏಕ್ಬಾಲ ಕಾಲೋನಿ. ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯ ಎಂ.ಕೆ.ನಗರ ಹಾಗರಗಾ ರೋಡ, ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಹಮನಿ ಚೌಕ, ಗಣೇಶ ನಗರ, ಠಾಣಾ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡಿದ 10 ಗುನ್ನೆಗಳಲ್ಲಿಯ 600 ಗ್ರಾಂ ಬಂಗಾರ ಮತ್ತು 1135 ಗ್ರಾಂ ಬೆಳ್ಳಿ ಇವುಗಳ ಒಟ್ಟು ಅಂದಾಜು ಮೌಲ್ಯ ರು. 19,30,000 (ಹತ್ತೊಂಬತ್ತು ಲಕ್ಷ ಮೂವತ್ತು ಸಾವಿರ ರುಪಾಯಿ) ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಆಭರಗಣಗಳನ್ನು ಆರೋಪಿತನಾದ ಬಾಬು ಅಲಿಯಾಸ್ ಮಸ್ತಾನ ಈತನಿಂದ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಎಸ್ಪಿ ಎನ್. ಸತೀಷಕುಮಾರ, ಹೆಚ್ಚುವರಿ ಎಸ್ಪಿ ಕಾಶಿನಾಥ ತಳಕೇರಿ ಮಾರ್ಗದರ್ಶನದಲ್ಲಿ ಹಿರಿಯ ಸಹಾಯಕ ಎಸ್ಪಿ ಎ ಉಪ ವಿಭಾಗ ಭೂಷಣ ಭೊರ್ಸೆ, ಡಿಎಸ್ಪಿ ಬಿ ಉಪ ವಿಭಾಗ ಎ.ಡಿ. ಬಸವಣ್ಣನವರ್, ಡಿಎಸ್ಪಿ ಗ್ರಾಮೀಣ ಎಚ್. ತಿಮ್ಮಪ್ಪಾ  ಹಾಗೂ ಸಿಬ್ಬಂದಿಯಿರುವ ತಂಡ ಈ ಖದೀಮನ ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದೆ.
ತನಿಖಾ ದಳ: ಎಸ್.ಎಸ್.ಹುಲ್ಲೂರ ಪೊಲೀಸ್ ಇನ್ಸ್‌ಪೆಕ್ಟರ್ ಡಿಸಿಐಬಿ ಘಟಕ ಗುಲ್ಬರ್ಗ, ಸ್ಟೆಷನ್ ಬಜಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೆ.ಎಚ್. ಇನಾಮದಾರ, ಪಿಎಸ್‌ಐ ವಿಜಯ, ಪಿಎಸ್‌ಐ ಮುರಳಿ ಹಾಗೂ ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎಎಸ್‌ಐ, ಬಸವರಾಜ, ದತ್ತಾತ್ರೇಯ, ಎಚ್‌ಸಿಗಳಾದ ಅಣ್ಣರಾವ್, ವಿಜಯಕುಮಾರ, ಲಕ್ಕಪ್ಪಾ, ಪ್ರಕಾಶ, ಶಿವಯೋಗಿ, ಅಣ್ಣಪ್ಪಾ, ಅಶೋಕ, ವೀರಣ್ಣಾ ಪಿಸಿ ರವರು ಹಾಗೂ ಸ್ಟೇಶನ ಬಜಾರ ಠಾಣೆಯ ಸಿಬ್ಬಂದಿ ಅಖಂಡಪ್ಪಾ ಎಎಸ್‌ಐ, ಹುಸೇನಸಾಬ ಎಚ್.ಸಿ ಹುಣಚಪ್ಪಾ ಪಿಸಿರವರ ತಂಡವು ಈ  ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಗುಲ್ಬರ್ಗ ಎಸ್ಪಿ ಈ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!