ಗುಲ್ಬರ್ಗಾ

ಆಳಂದ: ಪಲ್ಸ್ ಪೋಲಿಯೋಗೆ ಚಾಲನೆ

ಆಳಂದ: ಸಮಾಜವನ್ನು ಪೋಲಿಯೋ ಮುಕ್ತಗೊಳಿಸಲು ಸರ್ಕಾರದೊಂದಿಗೆ ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಚಿತ್ರಾ ಬಿಲಗುಂದಿ ನಾಗರಿಕರಿಗೆ ಮನವಿ ಮಾಡಿದರು.
ಪಟ್ಟಣದ ಸುಲ್ತಾನ ಬಡಾವಣೆಯ ಮಹಾದೇವ ಮಂದಿರದಲ್ಲಿ ಮಕ್ಕಳಿಗೆ ಭಾನುವಾರ ಪೋಲಿಯೋ ಹನಿ ಹಾಕುವ ಮೂಲಕ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಫೆ.24ರಿಂದ 27ರವರೆಗೆ ಪೋಲಿಯೋ ಅಭಿಯಾನ ಆರಂಭಗೊಂಡಿದ್ದು, ಸಾರ್ವಜನಿಕರು ತಮ್ಮ ಮಕ್ಕಳನ್ನು ಸ್ವಯಂ ಪ್ರೇರಣೆಯಿಂದ ಕರೆ ತಂದು ಪೋಲಿಯೋ ಹನಿ ಹಾಕಿಸಿಕೊಳ್ಳಬೇಕು ಎಂದರು.
ತಾಲೂಕಿನಲ್ಲಿ  43,130 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಫೆ.24ರಂದು ಬೂತ್‌ಗಳಲ್ಲಿ ಎಲ್ಲ ಮಕ್ಕಳಿಗೆ ಹನಿ ಹಾಕಲಾಗುವುದು. 25ರಿಂದ 27ರವರೆಗೆ ಪೋಲಿಯೋ ಹನಿಯಿಂದ ವಂಚಿತರಾದ ಮಕ್ಕಳಿಗೆ ಮನೆ ಮನೆಗೆ ಭೇಟಿ ಲಸಿಕೆ ಹಾಕಲಾಗುವುದು ಎಂದರು.
ಒಟ್ಟು 193 ಬೂತಗಳು, 15 ಟ್ರಾನ್ಸಿಸ್ಟ್ ಬೂತ್‌ಗಳು, 2 ಮೊಬೈಲ್ ಬೂತ್‌ಗಳು ಸೇರಿ ಒಟ್ಟು 210 ಬೂತ್‌ಗಳ ಮೂಲಕ ಲಸಿಕೆ ಹಾಕಲಾಗುವುದು. 420 ಜನರು ಪೋಲಿಯೋ ತಂದಡ ಸದಸ್ಯರು, 40 ಜನ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.
ನೋಡಲ್ ಅಧಿಕಾರಿ ಅಮರೇಶ ಕೊಳ್ಳುರ, ವೈದ್ಯಾದಿಕಾರಿ ಎ.ಎಂ. ಬುಜುರ್ಕೆ, ಸೋಮು ರಾಠೋಡ, ಎನ್.ಡಿ. ಹಳ್ಳಿ, ಸಿಬ್ಬಂದಿ ದಸ್ತಗೀರ ತಡಕಲ್, ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ಚಟ್ಟಿ ಮತ್ತು ಬಡಾವಣೆಯ ನಾಗರಿಕರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!