ಗುಲ್ಬರ್ಗಾ

ವಿವೇಕಾನಂದರ ಪುತ್ಥಳಿ ಅನಾವರಣ ಅನುಮಾನ

ಗುಲ್ಬರ್ಗ: ವಿವೇಕಾನಂದರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರ ಜ.23 ರಂದು ಹಮ್ಮಿಕೊಂಡಿರುವ ವಿವೇಕಾನಂದರ 11 ಅಡಿ ಎತ್ತರದ ಕಂಚಿನ ಪುತ್ಥಳಿ ಅನಾವರಣದ ಸುತ್ತ ಅನುಮಾನಗಳ ಹುತ್ತ ಕಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಹಾಗೂ ಜನ ಸಂಚಾರಕ್ಕೆ ಅಡ್ಡಿಯನ್ನು ಉಂಟು ಮಾಡುವ ಯಾವುದೇ ಮೂರ್ತಿ, ಪುತ್ಥಳಿ, ಪ್ರತಿಮೆಗಳ ಅನಾವರಣ, ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಸರ್ವೋಚ್ಚ ನ್ಯಾಯಾಲಯದಿಂದ ಜ.18 ರಂದೇ ಹೊರಬಿದ್ದಿರುವ ತೀರ್ಪು ಈಗ ಗುಲ್ಬರ್ಗದಲ್ಲಿ ಆಯೋಜಿಸಲಾಗಿರುವ ಮೂರ್ತಿ ಪ್ರತಿಷ್ಠಾಪನೆಯ ಸಮಾರಂಭದ ಸುತ್ತ ಅತಂತ್ರ ಪರಿಸ್ಥಿತಿಗೆ ಕಾರಣವಾಗಿದೆ.
ಕೇರಳ ರಾಜ್ಯದ ಪ್ರಕರಣ ಒಂದರ ವಿಚಾರಣೆ ನಡೆಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಲೋಧಾ ಹಾಗೂ ಮುಖ್ಯೋಪಾಧ್ಯಾಯ ಇವರಿದ್ದ ಪೀಠ ಈ ತೀರ್ಪು ಕೇವಲ ಕೇರಳ ರಾಜ್ಯಕ್ಕಷ್ಟೇ ಸೀಮಿತವಾಗಿರದೆ ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದೆ.
ಇದು ಚೊಚ್ಚಲ ಸಮಾರಂಭ: ಈ ತೀರ್ಪು ಹೊರಬಿದ್ದ ನಂತರದ ಪುತ್ಥಳಿ ಅನಾವರಣದ ಮೊದಲ ಕಾರ್ಯಕ್ರಮ. ಈ ಕಾರ್ಯಕ್ರಮದ ಸುತ್ತಮುತ್ತ ಅನೇಕ ಶಂಕೆಗಳು ಮೂಡಿವೆ. ಏಕೆಂದರೆ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರ ಲಕ್ಷಾಂತರ ರುಪಾಯಿ ವೆಚ್ಚ ಮಾಡುವ ಮೂಲಕ ಈ ಸಮಾರಂಭ ಆಯೋಜಿಸಿತ್ತು.
ವಿವೇಕಾನಂದರ 11 ಅಡಿ ಎತ್ತರದ ಪುತ್ಥಳಿಗೇ 13 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಲಾಗಿತ್ತಲ್ಲದೆ ಈ ಸಮಾರಂಭಕ್ಕೆ ಮುಖ್ಯಮಂತ್ರಿ ಶೆಟ್ಟರ್ ಅವರನ್ನೇ ಆಹ್ವಾನಿಸಲಾಗಿತ್ತು. ಸಿಎಂ ಗುಲ್ಬರ್ಗ ಸಮಾರಂಭ ನಿಗದಿಯಾಗಿದ್ದರೂ ಅವರ ಪ್ರವಾಸ ಪಟ್ಟಿಯಲ್ಲಿ ವಿವೇಕಾನಂದರ ಪುತ್ಥಳಿ ಅನಾವರಣದ ಸಮಾರಂಭ ಹೊರತುಪಡಿಸಿ ಉಳಿದೆಲ್ಲ ಸಮಾರಂಭಗಳು ನಮೂದಾಗಿವೆ. ಈ ಬೆಳವಣಿಗೆಯೇ ವಿವೇಕರ ಪುತ್ಥಳಿ ಅನಾವರಣದ ಬಗ್ಗೆ ಅನುಮಾನಗಳು ಹೆಚ್ಚಲು ಕಾರಣವಾಗಿದೆ.
ಮುಂಚೆ ಸಿಎಂ ಈ ಸಮಾರಂಭದಲ್ಲಿ ಭಾಗವಹಿಸಲು ಒಪ್ಪಿದ್ದರು. ಆದರೆ ಪ್ರತಿಮೆ ಸ್ಥಾಪನೆ ವಿಷಯವಾಗಿ 2 ದಿನಗಳ ಹಿಂದಷ್ಟೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗಮನದಲ್ಲಿಟ್ಟುಕೊಂಡೇ ಈ ಸಮಾರಂಭದಿಂದ ದೂರ ಉಳಿಯುವ ನಿರ್ಧಾರ ಸಿಎಂ ಕೈಗೊಂಡಿರಬಹುದೆ ಅದಕ್ಕೇ ತಮ್ಮ ಗುಲ್ಬರ್ಗ ಭೇಟಿ ವೇಳಾಪಟ್ಟಿಯಲ್ಲಿ ಈ ಸಮಾರಂಭವನ್ನೇ ನಮೂದಿಸದೆ ಮೌನವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
 ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರ ವಿವೇಕರ ಪುತ್ಥಳಿ ಅನಾವರಣದ ಜೊತೆಗೆ ಎಂಎಸ್ಕೆ ಮಿಲ್ ಪ್ರದೇಶದಲ್ಲಿರುವ ತನ್ನ ಭೂಮಿಯಲ್ಲಿ ಪಂಡಿತ ದೀನ ದಯಾಳ ಉಪಾಧ್ಯಾಯ ವಾಣಿಜ್ಯ ಮಳಿಗೆ ಯೋಜನೆ ಹಾಗೂ ವಾಜಪೇಯಿ ವಸತಿ ಯೋಜನೆಗಳ ಶಂಕುಸ್ಥಾಪನೆ, ಭೂಮಿ ಪೂಜೆ ಸಮಾರಂಭಗಳನ್ನು ಆಯೋಜಿಸಿದ್ದು ಈ ಸಮಾರಂಭಗಳಲ್ಲಿ ಶೆಟ್ಟರ್ ಭಾಗವಹಿಸಲಿದ್ದಾರೆ.
ಭರದ ಸಿದ್ಧತೆ: ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪುತ್ಥಳಿ ಅನಾವರಣವೇ ಅನುಮಾನಸ್ಪಾದವಾಗಿದ್ದರೂ ನಗರದ ಜೇವರ್ಗಿ ರಸ್ತೆಯಲ್ಲಿರುವ ರಾಷ್ಟ್ರಪತಿ ವೃತ್ತದಲ್ಲಿರುವ ಮೂಲೆಯೊಂದರಲ್ಲಿ ಸ್ವಾಮಿ ವಿವೇಕಾನಂದರ 11 ಅಡಿ ಎತ್ತರದ ಪುತ್ಥಳಿ ಸ್ಥಾಪನೆಗೆ ಸಿದ್ಧತೆಗಳು ಸಾಗಿವೆ.
ಜಿಡಿಎ ಇಲ್ಲೆಲ್ಲಾ ಭವ್ಯ ಪೆಂಡಾಲ್ ಹಾಕಿಸಿದೆಯಲ್ಲದೆ ರಸ್ತೆಯ ನಾಲ್ಕು ದಿಕ್ಕಿನಲ್ಲಿ ಸ್ವಾಗತ ಕಮಾನುಗಳನ್ನು ಹಾಕಿ ವಿವೇಕರ ಪುತ್ಥಳಿ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳತೊಡಗಿದೆ.
ಚರಂಡಿ ಅತಿಕ್ರಮಣ: ರಾಷ್ಟ್ರಪತಿ ವೃತ್ತದ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಯ ಆವರಣ ಗೋಡೆಗೆ ಹತ್ತಿಕೊಂಡಂತೆ ಇರುವ ಬೃಹತ್ ಗಾತ್ರದ ಚರಂಡಿ ಮೇಲೆಯೇ ಪ್ರತಿಮೆ ಸ್ಥಾಪನೆಗೆ ಪೀಠ ನಿರ್ಮಾಣ ಸಾಗಿದೆ.
 “OÚ«Ú­sÚ®Úúڒ ಈ ಸ್ಥಳಕ್ಕೆ ಭೇಟಿ ನೀಡಿದಾಗ ಬಹುದೊಡ್ಡ ತೆರೆದ ಚರಂಡಿ ರಾಷ್ಟ್ರಪತಿ ವೃತ್ತದವರೆಗೂ ಹರಿದು ಬಂದು ಡಿಐಸಿ ಕಚೇರಿ ಆವರಣ ಗೋಡೆಗಂಟ ಸಾಗಿದ್ದು ಕಂಡು ಬಂತು. ಇಲ್ಲಿ ಚರಂಡಿ ಮೇಲೆ ಹೊದಿಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಸ್ಥಳವನ್ನೇ ಜಿಡಿಎ ತನ್ನ ಪುತ್ಥಳಿ ಸ್ಥಾಪನೆ ಯೋಜನೆಗೆ ಬಳಸಿಕೊಳ್ಳುತ್ತಿದೆ.
ಪಾಲಿಕೆಗೆ ಗೊತ್ತೇ ಇಲ್ಲ: ಪಾಲಿಕೆ ಆಯುಕ್ತ ನಾಗೇಂದ್ರರನ್ನು ಈ ಬಗ್ಗೆ ವಿಚಾರಿಸಿದಾಗ ಅವರು ಪ್ರತಿಮೆ ಸ್ಥಾಪಿಸಲ್ಪಡುತ್ತಿರುವ ಸ್ಥಳ ತಾವು ನೋಡಿಲ್ಲ ಎಂದರಲ್ಲದೆ. ಚರಂಡಿ ಮೇಲೆಯೇ ಪ್ರತಿಮೆ ಸ್ಥಾಪನೆ ಸರಿಯಾದ ಕ್ರಮವಲ್ಲ. ಈ ಬಗ್ಗೆ ತಾವು ತಕ್ಷಣವೇ ಎಂಜಿನಿಯರ್‌ಗಳನ್ನು ಕಳುಹಿಸಿ ಪರಿಶೀಲನೆ ಮಾಡಿಸುವುದಾಗಿಯೂ ಹೇಳಿದರು. ಪಾಲಿಕೆ ಸರ್ವ ಸದಸ್ಯರ ಸಭೆಯಲ್ಲಿ ಪುತ್ಥಳಿ ರಾಷ್ಟ್ರಪತಿ ವೃತ್ತದಲ್ಲಿ ಸ್ಥಾಪಿಸುವ ಬಗ್ಗೆ ನಿರ್ಣಯ ಅಂಗೀಕಾರವಾಗಿದೆ. ಆದರೆ, ಈ ಪುತ್ಥಳಿ ಆ ವೃತ್ತದಲ್ಲಿ ಎಲ್ಲಿ ಸ್ಥಾಪಿಸಬೇಕೆಂಬುದು ನಿರ್ಣಯದಲ್ಲಿ ನಮೂದಾಗಿಲ್ಲ. ಈ ಬಗ್ಗೆಯೂ ಪಾಲಿಕೆ ಗಮನಹರಿಸುತ್ತದೆ ಎಂದು ನಾಗೇಂದ್ರ ಹೇಳಿದ್ದಾರೆ.
ಜಿಡಿಎ ತರಾತುರಿ: ವಿವೇಕಾನಂದರ ಪುತ್ಥಳಿ ಸ್ಥಾಪನೆ ವಿಷಯವಾಗಿ ಜಿಡಿಎ ತರಾತುರಿ ಮಾಡಿತೆ ಏಕೆಂದರೆ ಸರ್ವೋಚ್ಚ ನ್ಯಾಯಾಲಯ ತೀರ್ಪು ಹೊರಬಿದ್ದ ನಂತರವಾದರೂ ಪುತ್ಥಳಿ ಸ್ಥಾಪನೆಯ ದಿಕ್ಕುದೆಸೆ ಬದಲಾವಣೆಗೆ ಚಿಂತನೆ ನಡೆಸಲು ಅವಕಾಶವಿತ್ತು. ಆದಾಗ್ಯೂ ಜಿಡಿಎ ಇದ್ಯಾವುದನ್ನೂ ಗಮನಿಸದೆ ಹೋಗಿದ್ದರಿಂದ, ತನ್ನ ಏಕಮುಖಿ ಚಿಂತನೆಯಿಂದ ಇಂತಹ ಬೆಳವಣಿಗೆಗೆ ತನೇ ಕಾರಣವಾದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!