ಮಂಜುನಾಥ ಸ್ವಾಮಿ
ಯಾದಗಿರಿ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅನೇಕ ಪ್ರಮುಖ ಇಲಾಖೆಗಳಲ್ಲಿ ಅಧಿಕಾರಿಗಳ ಹುದ್ದೆಗಳು ಖಾಲಿಯಾಗಿದ್ದು, ಉಸ್ತುವಾರಿ ಹೊಣೆ ಹೊತ್ತಿರುವ ಬಾಬುರಾವ ಚಿಂಚನಸೂರ ಅವರ ನಿರ್ಲಕ್ಷ್ಯದಿಂದ ಪ್ರಭಾರಿಗಳ ಪಾರುಪತ್ಯ ಮುಂದುವರಿದಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಪಂ ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಸೇರಿದಂತೆ ಪ್ರಮುಖ ಹುದ್ದೆಗಳ ಪ್ರಭಾರವನ್ನು ಬೇರೆ ಅಧಿಕಾರಿಗಳಿಗೆ ನೀಡಲಾಗಿದೆ. ಹೀಗಾಗಿ ಅಭಿವೃದ್ಧಿ ಕಾರ್ಯಕ್ಕೆ ತೊಡಕು ಉಂಟಾಗುತ್ತಿದೆ.
2009ರ ಡಿಸೆಂಬರ್‌ನಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ 30ನೇ ನೂತನ ಜಿಲ್ಲೆಯಾಗಿ ಯಾದಗಿರಿಯನ್ನು ಘೋಷಣೆ ಮಾಡಿತು. ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ 163 ಅಧಿಕಾರಿಗಳು ಹಾಗೂ 1,015 ಸಿಬ್ಬಂದಿ ಸೇರಿದಂತೆ ಒಟ್ಟು 1,178 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಅದರಲ್ಲಿ ಇನ್ನೂ 800ಕ್ಕೂ ಹೆಚ್ಚು ಸಿಬ್ಬಂದಿ ಹುದ್ದೆಗಳು ಈಗಲೂ ಖಾಲಿಯಿವೆ. ಇದರಲ್ಲಿ ಜಿಪಂ ಅಧೀನದ ಇಲಾಖೆಗಳಲ್ಲಿಯೇ ಬಹುಪಾಲು ಅಧಿಕಾರಿಗಳು ಇಲ್ಲದಾಗಿದೆ. ಜಿಲ್ಲಾ ಮಟ್ಟದ 26 ಅಧಿಕಾರಿಗಳ ಹುದ್ದೆಗಳು ಖಾಲಿ ಉಳಿದಿದ್ದು, ಪ್ರಭಾರ ಅಧಿಕಾರಿಗಳೇ ಕರ್ತವ್ಯ ನಿರ್ವಹಿಸಬೇಕಾಗಿದೆ.
ಕಚೇರಿ ಬಂದಿವೆ ಸಿಬ್ಬಂದಿಯಿಲ್ಲ: ಜಿಲ್ಲೆಯಾಗಿ 4 ವರ್ಷ ಕಳೆದರೂ, ಪೂರ್ಣ ಪ್ರಮಾಣದ ಅಧಿಕಾರಿಗಳು, ಸಿಬ್ಬಂದಿ ನೇಮಕವಾಗಿಲ್ಲ. ಹೀಗಾಗಿ ಅಂದು ಜಿಲ್ಲೆ ಯಾವ ಸ್ಥಿತಿಯಲ್ಲಿತ್ತೋ, ಈಗಲೂ ಹಾಗೇ ಇದೆ. ಕಚೇರಿಗಳು ಬಂದಿವೆಯೇ ವಿನಃ ಕೆಲಸ ಮಾಡುವ ಅಧಿಕಾರಿಗಳು ಬಂದಿಲ್ಲ ಎಂದು ವಾಲ್ಮೀಕಿ ನಾಯಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಮರೆಪ್ಪ ನಾಯಕ ಮಗ್ದಂಪುರ ಹೇಳುತ್ತಾರೆ.
ಕೆಲಸದ ಒತ್ತಡ: ಜಿಲ್ಲೆಯ ಪ್ರಮುಖ ಹುದ್ದೆಗಳು ಖಾಲಿ ಇರುವುದರಿಂದ ಒಬ್ಬ ಅಧಿಕಾರಿ ಎರಡೆರಡು ಹುದ್ದೆಗಳ ಕೆಲಸ ಮಾಡುವಂತಾಗಿದೆ. ಕೆಲಸದ ಒತ್ತಡವೂ ಹೆಚ್ಚಾಗುತ್ತಿದೆ. ಹೀಗಾಗಿ ಸಮರ್ಪಕವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
“H«é ಮಾಡೋದ್ರಿ, ನಮ್ಮ ಕೆಲಸ ನಮಗ ಗೊತ್ತು. ಈ ಆಫೀಸ್‌ನ್ಯಾಗ ಮುಂಜಾನೆ ಕೆಲಸಾ ಮಾಡಬೇಕು. ಇನ್ನೊಂದ್ ಆಫೀಸ್‌ನ್ಯಾಗ ಮಧ್ಯಾಹ್ನದಾಗ ಕೆಲಸ ಮಾಡಬೇಕು. ಇಲ್ಲಿ ಕೆಲಸನೂ ಪೂರ್ಣ ಆಗೂದುಲ್ಲ. ಅಲ್ಲಿ ಕೆಲಸನೂ ಆಗವಲ್ದು. ನಾವರೇ ಏನ್ ಮಾಡೋದ್ರಿ, ಕೈಲಾದಷ್ಟ ಕೆಲಸಾ ÈÚáÛsÚ}æÞÉ’ ಎಂದು ಹೆಸರು ಹೇಳಲಿಚ್ಛಿಸದ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು “OÚ«ÚsÚ®Úúڒ¥æàM¦Væ ಅಳಲು ತೋಡಿಕೊಂಡರು.
ಹೆಚ್ಚುವರಿ ಕಾರ್ಯ: ಜಿಲ್ಲೆಯಲ್ಲಿ ಅಕ್ಷರ ದಾಸೋಹ ಅಧಿಕಾರಿಗಳಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹುದ್ದೆಯ ಪ್ರಭಾರ ನೀಡಲಾಗಿದೆ. ಜಿಪಂ ಉಪ ಕಾರ್ಯದರ್ಶಿಗಳೇ ಜಿಪಂ ಮುಖ್ಯ ಲೆಕ್ಕಾಧಿಕಾರಿಗಳ ಹುದ್ದೆ ನೋಡಿಕೊಳ್ಳುತ್ತಿದ್ದಾರೆ. ದೈಹಿಕ ಶಿಕ್ಷಣಾಧಿಕಾರಿಗಳಿಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರ ವಹಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ, ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಮೀನುಗಾರಿಕೆ ಇಲಾಖೆಯಲ್ಲಂತೂ ವಿಪರೀತ ಒತ್ತಡವಿದೆ. ಯಾದಗಿರಿ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ, ಜಿಲ್ಲೆಯ ಮೂರು ತಾಲೂಕುಗಳ ಸಹಾಯಕ ನಿರ್ದೇಶಕರ ಹುದ್ದೆಯ ಜೊತೆಗೆ, ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನೂ ನೀಡಲಾಗಿದೆ.
ಇದಿಷ್ಟು ಜಿಲ್ಲಾ ಮಟ್ಟದ ಇಲಾಖೆಯಲ್ಲಿರುವ ಪ್ರಭಾರಗಳಾದರೆ, ಇನ್ನು ತಾಲೂಕು ಮಟ್ಟದ ಇಲಾಖೆಗಳಲ್ಲಿ ಇನ್ನೂ ಹೆಚ್ಚಿನ ಅಧಿಕಾರಿಗಳ ಕೊರತೆಯಿದೆ. ಹೀಗಾಗಿ ವಿವಿಧ ಇಲಾಖೆಗಳಲ್ಲಿರುವ ಅಧಿಕಾರಿಗಳಿಗೆ, ಹೆಚ್ಚುವರಿ ಪ್ರಭಾರ ನೀಡಲಾಗಿದೆ.
ಜಿಲ್ಲೆಯಾಗಿ ನಾಲ್ಕು ವರ್ಷ ಕಳೆದರೂ, ಸರ್ಕಾರಗಳು ಮಾತ್ರ ಅಗತ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಹೀಗಾದರೆ, ಜಿಲ್ಲೆ ಅಭಿವೃದ್ಧಿ ಆಗುವುದಾದರೂ ಹೇಗೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಗಮನಹರಿಸಿ ಜಿಲ್ಲೆಗೆ ಅಗತ್ಯವಿರುವ ಅಧಿಕಾರಿಗಳನ್ನು ನೇಮಕ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕೆಂದು ಸ್ವಾಭಿಮಾನಿ ಕನ್ನಡ ಸೇನೆ ಅಧ್ಯಕ್ಷ ಭೀಮಾಶಂಕರ ಅಲ್ದಾಳ ಆಗ್ರಹಿಸಿದ್ದಾರೆ.