ಕ.ಪ್ರ. ವಾರ್ತೆ ್ಣ ಆಳಂದ ್ಣ ಆ.5
ಪಟ್ಟಣದ ವಾರ್ಡ್‌ಗಳಲ್ಲಿ ರಸ್ತೆ, ಕುಡಿವ ನೀರು, ಶೌಚಾಲಯ, ಬೀದಿಗಳ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಹಣ ನೀಡಿದಾಗಲೂ ಯಾವುದೇ ಸಮಸ್ಯೆ ಪರಿಹಾರ ಕಾಣದಿರುವುದನ್ನು ಕಂಡು ದಂಗಾದ ಶಾಸಕ ಬಿ.ಆರ್. ಪಾಟೀಲ್ ಪುರಸಭೆ ವಿರುದ್ಧ ಕಿಡಿಕಾರಿದರು.
ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಿಗೆ ಮಂಗಳವಾರ ಅಧಿಕಾರಿಗಳ ಮತ್ತು ಬೆಂಬಲಿತ ಸದಸ್ಯರೊಂದಿಗೆ ಹಠಾತ್ ಭೇಟಿ ನೀಡಿ ದಿನವಿಡೀ ವೀಕ್ಷಿಸಿ ಸಮಸ್ಯೆಗಳನ್ನು ಆಲಿಸಿದ ಶಾಸಕರು, ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಅಲ್ಲದೆ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ. ಉತ್ತಮ ಕಾಮಗಾರಿ ಕೈಗೊಂಡು ಜನತೆಗೆ ನ್ಯಾಯ ಒದಗಿಸಬೇಕೆಂದು ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲಗೆ ಸೂಚನೆ ನೀಡಿದರು.
ಮಾಂಗವಾಡ ಬಡಾವಣೆಗೆ ಭೇಟಿ ನೀಡಿದ ಶಾಸಕರ ತಂಡದ ಎದುರಿಗೆ ಅವಲತ್ತುಕೊಂಡು ಬಾಬು ಮೇತ್ರೆ ಇನ್ನಿತರ ನಿವಾಸಿಗಳು, ನಿವೇಶನ ಒದಗಿಸುವ ಸಲುವಾಗಿ ಡಾ. ಬಾಬೂಜೀ ಹೆಸರಿನಲ್ಲಿ ಪುರಸಭೆಯಿಂದ 2 ಎಕರೆ ಜಮೀನು ಖರೀದಿಸಿ 10 ಲಕ್ಷ ಪಾವತಿಸಲಾಗಿದೆ. ಆದರೆ ಜಮೀನೂ ಇಲ್ಲ, ಇತ್ತ ಹಣವೂ ಇಲ್ಲದಂತಾಗಿದೆ ಎಂದಾಗ, ಈ ಕುರಿತು ಗಮನಹರಿಸುವಂತೆ ಮುಖ್ಯಾಧಿಕಾರಿಗೆ ತಿಳಿಸಿದರು.
ಶೇರಿಕಾರ ಕಾಲೋನಿ ರಸ್ತೆಯ ಮೇಲೆ ಚಂಡಿ ನೀರು ಹರಿಯುತ್ತಿದ್ದು, ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿ ಆಗದೆ ಇರುವುದು ಕ್ರಿಯಾಯೋಜನೆಯಲ್ಲಿ ಇಟ್ಟುಕೊಳ್ಳಿ ಎಂದರು.
ವೃದ್ಧೆ ಅಳಲು: ಧನಗರ ಮತ್ತು ವಡ್ಡರ್ ಬಡಾವಣೆಗಳಿಗೆ ತೆರಳಿದ ಮೇಲೆ ತಿಮ್ಮವ್ವ ಕುಶಳಕರ್ ಎಂಬ ವೃದ್ಧೆ ಬಡಾವಣೆಯಲ್ಲಿ ಮಾಡಿದ ಸಿಮೆಂಟ್ ರಸ್ತೆ ಕೆದರಿ ಹಾಳು ಮಾಡಿದ್ದಾರೆ. ಇಲ್ಲಿ ಬಡವರಿಗೆ ಯಾರೂ ಕೇಳುತ್ತಿಲ್ಲ ಎಂದು ಶಾಸಕರ ಮುಂದೆ ಕಣ್ಣೀರು ಹಾಕಿದಳು. ತಿಂಗಳಿಗೆ ಬರುವ 500 ಯಾತಕ್ಕೂ ಸಾಲದು. ನಾನು ಹೃದಯ ರೋಗಿಯಾಗಿದ್ದು, ಸಹಾಯ ಮಾಡಬೇಕು ಎಂದಾಗ ಹೃದ್ರೋಗದ ರೋಗದ ಕುರಿತು ಸರ್ಕಾರದ ಚಿಕಿತ್ಸೆ ಸಹಕರಿಸುವಂತೆ ತಮ್ಮ ಬೆಂಬಲಿತ ಮುಖಂಡರಿಗೆ ಶಾಸಕರು ಹೇಳಿದರು.
ಪುರಸಭೆ ಬೆಂಬಲಿತ ಸದಸ್ಯರು ಮತ್ತು ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಗುರುನಾಥ ಷಣ್ಮುಖ, ಪಿಎಸ್‌ಐ ಮಹಾದೇವ ಪಂಚಮುಖಿ, ಪುರಸಭೆ ಸಿಬ್ಬಂದಿ, ಎಂಜಿನಿಯರಗಳು ಇದ್ದರು.