ಗುಲ್ಬರ್ಗಾ

ಮತ್ತೆರಡು ಅತ್ಯಾಚಾರ

ಕೆಜಿಎಫ್/ಗುಲ್ಬರ್ಗ: ಚೆನ್ನಪಟ್ಟಣ, ಮಾಲೂರು ಅತ್ಯಾಚಾರ ಪ್ರಕರಣಗಳ ಬೆನ್ನಲ್ಲೇ ರಾಜ್ಯದಲ್ಲಿ ಗುರುವಾರ ಮತ್ತೆರಡು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜ್ಯ ಉತ್ತರ ಪ್ರದೇಶದ ನಕಲುಪ್ರತಿಯಾಗಿ ಹೊರಹೊಮ್ಮುವ ಭೀತಿ ಎದುರಾಗಿದೆ. ಕೆಜಿಎಫ್ನಲ್ಲಿ 7ನೇ ತರಗತಿ ಬಾಲಕಿಯೊಬ್ಬಳ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರೆ, ಗುಲ್ಬರ್ಗದಲ್ಲಿ ಶಿಕ್ಷಕನೊಬ್ಬ ತನ್ನ ಪ್ರೇಯಸಿ ಮೇಲೆಯೇ ಅತ್ಯಾಚಾರವೆಸಗಿದ ಪ್ರಕರಣಗಳು ದಾಖಲಾಗಿವೆ. ಕೆಜಿಎಫ್ನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಎ. ಮೋತಕಪಲ್ಲಿ ಗ್ರಾಮದ ನಿವಾಸಿ ರತ್ನಪ್ಪ ಎಂಬುವರ ಮಗಳ ಮೇಲೆ ತಿಮ್ಮಾಪುರ ಗ್ರಾಮದ ನಿವಾಸಿಗಳಾದ ಸಂತೋಷ್ (26) ಮತ್ತು ಪ್ರಕಾಶ್ (27) ಅತ್ಯಾಚಾರವೆಸಗಿದ್ದಾರೆ. ವೃತ್ತಿಯಿಂದ ಪೇಂಟರ್ಗಳಾದ ಅವರು ಬಾಲಕಿಯ ಶಾಲೆ ಬಳಿಯಲ್ಲಿ ಕೆಲಸ ಮಾಡುತ್ತಿದ್ದರು. ಮೂರ್ನಾಲ್ಕು ದಿನಗಳಿಂದ ಆಕೆಯ ಚಲನವಲನ ಗಮನಿಸಿ, ಜು. 1ರಂದು ಶಾಲೆಯಿಂದ ಮರಳುತ್ತಿದ್ದಾಗ ಹೊತ್ತೊಯ್ದು, ಚಾಕು ತೋರಿಸಿ ಅತ್ಯಾಚಾರವೆಸಗಿದ್ದಾರೆ.
ಕಾಮುಕ ಶಿಕ್ಷಕ: ಸೇಡಂ ತಾಲೂಕಿನ ಹಂದರಕಿ ಗ್ರಾಮದ ಶಾಲಾ ಶಿಕ್ಷಕ ಶರಣಪ್ಪ ಮಲ್ಲಪ್ಪ ಮೇತ್ರಿ, ತಮ್ಮ ಪುತ್ರಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾಗಿ ಸೇಡಂ ಠಾಣೆಯಲ್ಲಿ ಬಸವರಾಜ ಗುರಪ್ಪ ಅಲ್ಲೂರ ಎಂಬುವರು ದೂರು ನೀಡಿದ್ದಾರೆ.  ಶಿಕ್ಷಕ ಮೇತ್ರಿ ಹಾಗೂ ಮಲ್ಲಪ್ಪ ಪುತ್ರಿ ಪರಸ್ಪರ ಪ್ರೇಮಿಸುತ್ತಿದ್ದರು. ಇದಕ್ಕೆ ಮನೆಯವರ ವಿರೋಧವಿತ್ತು. ಇದನ್ನು ಆಕೆ ಮೇತ್ರಿಗೂ ತಿಳಿಸಿದ್ದಳು. ಆದರೆ, ಜೂ. 28ರಂದು ಮಲ್ಲಪ್ಪ ಆಕೆಯನ್ನು ಅಪಹರಿಸಿ, ಸಿಕಿಂದ್ರಾಬಾದ್, ಮುಧೋಳ ಮುಂತಾದ ಕಡೆ ಕೊಂಡೊಯ್ದಿದ್ದಾನೆ. ಆನಂತರ, ತನ್ನ ಸಂಬಂಧಿಕರ ಮನೆಗೆ ಕರೆತಂದು ಅತ್ಯಾಚಾರವೆಸಗಿದ್ದಾನೆ. ಜು. 2ರಂದು ಮನೆಗೆ ಆಗಮಿಸಿದ ಯುವತಿ, ಕುಟುಂಬದವರಿಗೆ ನೀಡಿದ ಮಾಹಿತಿ ಮೇರೆಗೆ ಗುರಪ್ಪ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ