ಗುಲ್ಬರ್ಗಾ

ಬೀದಿಗಿಳಿದ ಎಪಿಎಂಸಿ ವರ್ತಕರು

ಕ.ಪ್ರ. ವಾರ್ತೆ ಗುಲ್ಬರ್ಗ ಜು. 15
ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಾರಾಟ ಹೊಸ ನೀತಿ-2014 ವಿರೋಧಿಸಿ ಕಳೆದೊಂದು ವಾರದಿಂದ ಮಾರುಕಟ್ಟೆ ಬಂದ್ ಮಾಡಿ ಹೋರಾಟ ನಡೆಸುತ್ತಿರುವ ಇಲ್ಲಿನ ಎಪಿಎಂಸಿ ವರ್ತಕರು ಹಾಗೂ ಕಾರ್ಮಿಕರು ಮಂಗಳವಾರ ಬೀದಿಗೆ ಬಂದರು.ತಾವು ವಾರದಿಂದ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದನೆ ದೊರಕುತ್ತಿಲ್ಲ. ಸರ್ಕಾರ, ಜಿಲ್ಲಾಡಳಿತ ಮೌನವಾಗಿವೆ ಎಂದು ಆವೇಶಭರಿತರಾಗಿ ಬೀದಿಗಿಳಿದ ವರ್ತಕರು ಹಾಗೂ ಕಾರ್ಮಿಕರು, ಗಂಜ್ ಹಾಗೂ ರಿಂಗ್ ರಸ್ತೆಗಳಲ್ಲಿ 2 ಗಂಟೆಗೂ ಹೆಚ್ಚುಕಾಲ ಧರಣಿ ನಡೆಸಿದರು. ನಗರದ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬೆಳಗ್ಗೆ 11 ಗಂಟೆಯಿಂದ ಶುರುವಾದ ಧರಣಿ, ರಸ್ತೆತಡೆ ಮುಂದುವರಿದಾಗ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಇಣುಕಿತ್ತು. ಹೋರಾಟಗಾರರು ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಭೇಟಿ ನೀಡಬೇಕು ಎಂದು ಪಟ್ಟುಹಿಡಿದರು. ಹೋರಾಟಗಾರರ ಬೇಡಿಕೆಗೆ ಮಣಿದು ಜಿಲ್ಲಾಧಿಕಾರಿ ಡಾ. ಪ್ರಸಾದ್, ಎಸ್ಪಿ ಅಮಿತ್ ಸಿಂಗ್ ಸ್ಥಳಕ್ಕೆ ಬಂದು ರೈತರು, ವರ್ತಕರು, ಕಾರ್ಮಿಕರ ಮಾತು ಆಲಿಸಿದರು.
ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮಾತನಾಡಿದ ಆಹಾರ ಧಾನ್ಯ- ಬೀಜ ವರ್ತಕರ ಸಂಘದ ಸದಸ್ಯರು, ಹೊಸ ಮಾರಾಟ ನೀತಿಗೆ ತಮ್ಮ ಉಗ್ರ ವಿರೋಧವಿದೆ. ಸರ್ಕಾರ ಈ ನೀತಿ ಕೈಬಿಡುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಘೋಷಿಸಿದರು.
ಮುಖ್ಯಮಂತ್ರಿಗೂ ಮನವಿ ಸಲ್ಲಿಸಲಾಗಿದೆ. ಹೋರಾಟ ಶುರುವಾಗಿದೆ, ನೀತಿ ಕೈಬಿಡುವವರೆಗೂ ಹೋರಾಟ ನಿಲ್ಲದು ಎಂದು ಸರ್ಕಾರಕ್ಕೆ ಹೇಳಿದ್ದೇವೆ ಎನ್ನುವ ಮುಖಂಡರೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಟೆಂಟ್ ಮುಂದುವರಿಸಿದ್ದಾರೆ. ಇತ್ತ ಬೀದಿಗೂ ಇಳಿದು ಹೋರಾಟಕ್ಕೆ ಉಗ್ರ ರೂಪ ನೀಡುತ್ತಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಿಎಂಗೆ ಮನವಿ
ಶಹಾಬಾದ್: ರಾಜ್ಯದ 10 ಜಿಲ್ಲೆಗಳಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ರದ್ದುಪಡಿಸಲು ಆಗ್ರಹಿಸಿ ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಹೈದ್ರಾಬಾದ್ ಕರ್ನಾಟಕದ ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ವಾಣಿಜ್ಯ ಮಂಡಳಿಯ ಪದಾಧಿಕಾರಿಗಳಾದ ಉಮಕಾಂತ ನಿಗ್ಗುಡಗಿ, ಅಮರನಾಥ ಪಾಟೀಲ ನೇತೃತ್ವದಲ್ಲಿ ನಿಯೋಗವು ಸಚಿವ ಖಮುರುಲ್ ಇಸ್ಲಾಂ, ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ, ಗುರುಪಾಟೀಲ್, ಅಲ್ಲಂಪ್ರಭು ಪಾಟೀಲ್, ಅಮರನಾಥ ಪಾಟೀಲ, ದತ್ತಾತ್ರೇಯ ಪಾಟೀಲ್, ಬಿ.ಆರ್. ಪಾಟೀಲ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಭೇಟಿ ಮಾಡಿ 1966ರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿಚಾರವನ್ನು ಕೈಬಿಡಬೇಕೆಂದು ಮನವಿ ಮಾಡಿದರು. ಶ್ರೀಮಂತ ಉದ್ನೂರ, ಪಂಪಣ್ಣಗೌಡ ಇಟಗಿ, ಅಣವೀರ ಇಂಗಿನಶೆಟ್ಟಿ, ಮೋಹನ ಪಂಡಿತ, ಸೇರಿದಂತೆ ಗುಲ್ಬರ್ಗ, ಬೀದರ್, ಯಾದಗಿರಿ, ರಾಯಚೂರು ಭಾಗದ ವ್ಯಾಪಾರಸ್ಥರು ಇದ್ದರು.

ಅಡತ ವ್ಯಾಪಾರ ಸ್ಥಗಿತ: ರೈತರ ಪರದಾಟ
ಶಹಾಬಾದ್: ಕಳೆದ ಒಂದು ವಾರದಿಂದ ರಾಜ್ಯ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಲಕ್ಷ್ಮೀ ಗಂಜ ಪ್ರದೇಶದಲ್ಲಿರುವ ಅಡತ ವ್ಯಾಪಾರಸ್ಥರು ಅನಿರ್ದಿಷ್ಟಾವಧಿ ಬಂದ್ ಆಚರಿಸಿದ್ದರಿಂದ ಅಡತ ವ್ಯಾಪಾರ ಸ್ಥಗಿತಗೊಂಡಿವೆ. ಬಿತ್ತನೆ ಕಾಲವಾಗಿರುವುದರಿಂದ ರೈತರು ಬಿತ್ತನೆ ಬೀಜ, ರಸಗೊಬ್ಬರಗಳಿಗಾಗಿ ಅಡತನ ವ್ಯಾಪಾರಸ್ಥರ ಮೇಲೆ ಅವಲಂಬಿಸಿದ್ದಾರೆ. ಅಡತ ಅಂಗಡಿಗಳು, ರಸಗೊಬ್ಬರ ಅಂಗಡಿಗಳು ವಾರದಿಂದ ಮುಚ್ಚಲ್ಪಟ್ಟಿರುವುದರಿಂದ ರೈತರು ಪರದಾಡುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ