ಗುಲ್ಬರ್ಗಾ

'ಲೋಕಾ' ಬಲೆಗೆ ಬಿದ್ದ ಭ್ರಷ್ಟರು

ಗುಲ್ಬರ್ಗ: ಗುಲ್ಬರ್ಗ ಹಾಗೂ ಬೀದರ್ನಲ್ಲಿ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತರು ಇಬ್ಬರು ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ. ಗುಲ್ಬರ್ಗ ಪ್ರಾದೇಶಿಕ ಆಯುಕ್ತರ ಕಚೇರಿಯ ಪ್ರಥಮ ದರ್ಜೆ ಸಹಾಯಕ ನಿಸಾರ್ ಅಹ್ಮದ್ ಹಾಗೂ ಬೀದರ್ ಜಿಲ್ಲೆ ಔರಾದ್ನ ಪಂಚಾಯತ್ ರಾಜ್ ಎಂಜಿನಿಯರಿಂಗ್ನ ಎಇ ಹಾವಗಿರಾವ್ ಅವರೇ ದಾಳಿಗೊಳದಾವರು. ನಿಸಾರ್ ಅಹ್ಮದ್ ಇವರ ಗುಲ್ಬರ್ಗ ಮನೆ, ಕಚೇರಿ, ಖಾಸಗಿ ಶಾಲೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತರು, ಮುಖ್ಯ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಹಾವಗಿರಾವ್ ಅವರಿಗೆ ಸೇರಿದ್ದ ಗುಲ್ಬರ್ಗದಲ್ಲಿರುವ ಆಸ್ತಿ-ಪಾಸ್ತಿ, ಮನೆ, ಹೊಲ- ಗದ್ದೆಗಳ ಬಗ್ಗೆಯೂ ದಾಳಿ ಕಾಲದಲ್ಲಿ ಕಾಗದ ಪತ್ರ ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರು ಅಧಿಕಾರಿಗಳ ಬ್ಯಾಂಕ್ ಲಾಕರ್ ಸಹ ಪತ್ತೆ ಹಚ್ಚಿ ತಪಾಸಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.
8ನೇ ವರ್ಧಂತ್ಯುತ್ಸವ
ಗುಲ್ಬರ್ಗ: ಇಲ್ಲಿನ ಬಿದ್ದಾಪುರ ಬಡಾವಣೆಯಲ್ಲಿರುವ ನಂಜನಗೂಡು ಗುರುರಾಯರ ಮಠದ 8ನೇ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಮಳಖೇಡ ಜಯತೀರ್ಥರ ಆರಾಧನೆ ಬುಧವಾರ ಮಠದಲ್ಲಿ ವಿಶೇಷವಾದಂತಹ ಪೂಜಾದಿ ಕಾರ್ಯಕ್ರಮಗಳೊಂದಿಗೆ ನಡೆದವು. ಬೆಳಗ್ಗೆ ಅಷ್ಟೋತ್ತರದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರಕಿತು. ರಾಯರ ಬೃಂದಾವನಕ್ಕೆ ಮಾಡಿದ್ದ ಪುಷ್ಪಾಲಂಕಾರ ಭಕ್ತರನ್ನು ಸೆಳೆಯಿತು. ನೂರಾರು ಭಕ್ತರು ಈ ದಿನ ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬಾಗಲಕೋಟೆಯಿಂದ ಆಗಮಿಸಿದ್ದ ವಿಜಯೇಂದ್ರಾಚಾರ್ಯ ಅವರಿಂದ ಗುರುಯಾರು ಹಾಗೂ ಮಳಖೇಡ ಜಯರಾಯರ ಜೀವನ ಚರಿತ್ರೆ, ಅವರ ಗ್ರಂಥಗಳ ಕುರಿತಂತೆ ಉಪನ್ಯಾಸ ನಡೆದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ