ಯಾದಗಿರಿ: ತಾಲೂಕಿನ ನಾಸಲವಾಯಿ ಗ್ರಾಮದ ಅಂಜಪ್ಪ ಕಲಾಲ ಎಂಬುವರ ಮನೆ ಮೇಲೆ ಅಬಕಾರಿ ನಿರೀಕ್ಷಕ ವಿಠಲರಾವ್ ಎಂ. ವಾಲಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 3000 ಮೌಲ್ಯದ 30 ಲೀ. ಕಲಬೆರಿಕೆ ಸೇಂದಿ ಜಪ್ತಿ ಮಾಡಲಾಗಿದೆ. ಅಂಜಪ್ಪ ಕಲಾಲ ಎಂಬುವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಶಾಂತೇಶ ಕಮತಾರ, ನೂರ ಮಹ್ಮದ್, ಸಿಬ್ಬಂದಿಗಳಾದ ಎನ್. ಸಾಯಪ್ಪ, ಪಾಂಡುರಂಗ, ನಾರಾಯಣ ರಾಠೋಡ, ಪ್ರವೀಣಕುಮಾರ, ಮೆಹಬೂಬ ಅಲಿ, ವಾಹನ ಚಾಲಕರಾದ ಶರಣಪ್ಪ ದೇಸಾಯಿ, ಶ್ರೀಶೈಲ ಭಾಗವಹಿಸಿದ್ದರು.