ಗುಲ್ಬರ್ಗಾ

ಅತ್ಯಾಚಾರ, ದೌರ್ಜನ್ಯ ವಿರುದ್ಧ ಬಂಡೇಳಿ

ಆಳಂದ: ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಮತ್ತು ಮಕ್ಕಳ ಪರ ಎಲ್ಲರು ಧ್ವನಿಯಾಗಿ ನಿಂತು ಪೊಲೀಸರಿಗೆ ದೂರು ನೀಡಿದರೆ ಮಾತ್ರ ಅಪರಾಧಿಗಳಿಗೆ ತಕ್ಕ ಶಾಸ್ತಿ ನೀಡಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದು ಸಿಪಿಐ ಕೆ.ಎಚ್. ಹಟ್ಟಿ ಹೇಳಿದರು. ಪಟ್ಟಣದ ಗುರುಭವನದಲ್ಲಿ ಪೊಲೀಸ್ ಇಲಾಖೆ ಸೋಮವಾರ ಏರ್ಪಡಿಸಿದ್ದ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1098 ಉಚಿತ ಕರೆ: ಸಾರ್ವಜನಿಕ ಸ್ಥಳ, ಶಾಲಾ, ಕಾಲೇಜುಗಳಲ್ಲಿ ಹೆಣ್ಮಕ್ಕಳಿಗೆ ಚುಡಾಯಿಸಿದರೆ, ಕಿರುಕುಳ ಇನ್ನಿತರ ಹಿಂಸೆ ಅಲ್ಲದೆ, ನೆರೆ, ಹೊರೆಯವರು ಅಸಭ್ಯವಾಗಿ ವರ್ತಿಸಿದರೆ 1098 ಉಚಿತ ಕರೆಗೆ ದೂರು ಕೊಡಬೇಕೆಂದರು. ಮಹಿಳಾ ಸಂಘದ ಸದಸ್ಯೆಯರು, ಮುಖಂಡರು ಇಂಥ ಅನೈತಿಕ ಚಟುವಟಿಕೆ ಗೊತ್ತಿದ್ದರು ನಿರ್ಲಕ್ಷ್ಯ ವಹಿಸದೆ ದೂರು ಕೊಡಬೇಕು. ತಪ್ಪಿತಸ್ಥರಿಗೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು. ಅನ್ಯಾಯ ಸಹಿಸಿಕೊಳ್ಳದೆ ಧೈರ್ಯದಿಂದ ಬದುಕಬೇಕೆಂದು ಮಹಿಳೆಯರಿಗೆ ಕರೆ ನೀಡಿದರು. ಪುರಸಭೆ ಸಮುದಾಯ ಸಂಘಟನೆ ಅಧಿಕಾರಿ ನಾಗರತ್ನ ದೇಶಮಾನೆ ಹಾಗೂ ಸಿಡಿಪಿ ರಾಮಣ್ಣಾ ಮಾತನಾಡಿದರು. ಪಿಎಸ್‌ಐ ಮಹಾದೇವ ಪಂಚಮುಖಿ ಅವರು ಪ್ರಾಸ್ತಾವಿಕ ಮಾತನಾಡಿದರು. ಪುಷ್ಪಾವತಿ ಚಟ್ಟಿ ಮತ್ತು ಶಾಂತಾಬಾಯಿ ತಟ್ಟಿ ಪ್ರಾರ್ಥನೆ ಗೀತೆ ಹಾಡಿದರು. ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸಂಘದವರಿದ್ದರು.




ಬಿಸಿಲು ಬೆಳದಿಂಗಳ ವೇದಿಕೆ
ಅತ್ಯಾಚಾರಿಗಳಿಗೆ ಕ್ರೂರ ಶಿಕ್ಷೆ ವಿಧಿಸಬೇಕು, ಅವರ ವಿರುದ್ಧ ಚಾರ್ಜ್ ಶೀಟ್ ದಾಖಲಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ. ಇದು ನಿಲ್ಲಬೇಕು, ಪೊಲೀಸರಿಗೆ ಈ ವಿಚಾರದಲ್ಲಿ ಸಂವೇದನಾಶೀಲರಾಗಿರುವಂತೆ ಮಾಡಬೇಕೆಂದು ಆಗ್ರಹಿಸಿ ಬಿಸಿಲು- ಬೆಳದಿಂಗಳು ವೇದಿಕೆಯ ಕಾರ್ಯಕರ್ತೆಯರು ನಗರದಲ್ಲಿ ಹೋರಾಟ ನಡೆಸಿದರು. ಇದೇ ಸಂದರ್ಭದಲ್ಲಿ ಅತ್ಯಾಚಾರಿ ಪ್ರತಿಕೃತಿ ಮಾಡಿ ಜಿಲ್ಲಾದಿಕಾರಿ ಕಚೇರಿ ಮುಂದೆ ನೇಣು ಹಾಕುವ ಮೂಲಕ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಗುಲ್ಬರ್ಗದಲ್ಲಂತೂ ಕೆಲ ಕಾಮುಕರು ಮನೋರೋಗಿಗಳಂತೆ ವರ್ತಿಸುತ್ತಿದ್ದಾರೆ. ಇಂತಹ ಘಟನೆಗಳು ಬೆಳಕಿಗೆ ಬಂದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ತಮ್ಮ ಪಾಡಿಗೆ ತಾವಿದ್ದಾರೆ. ಇದರಿಂದಾಗಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಹೋರಾಟಗಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ದೂರಿದ್ದಾರೆ.


ವಜಾಕ್ಕೆ ಆಗ್ರಹ


ಅತ್ಯಾಚಾರದ ದೂರು ಪಡೆದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಬದಲು ನೌಕರಿಯಿಂದಲೇ ವಜಾ ಮಾಡಬೇಕು ಎಂದೂ ಸಂಘಟನೆಯವರು ಆಗ್ರಹಿಸಿದ್ದಾರೆ. ಜನವಾದಿ ಮಹಿಳಾ ಸಂಘದ ಅಮೀನಾ ಬೇಗಂ, ಚಂದಮ್ಮ ಗೋಳಾ, ಜಗದೇವಿ ನೂಲಕರ್, ವಿಶಲ ಕುಲ್ಕರ್ಣಿ, ಪ್ರಿಯಾಂಕಾ, ಶಾಂತೇಶ, ರಾಹುಲ್, ಸಂಗೀತಾ, ಪೂಜಾ, ಕಪೀಲ, ಮಿಥುನ, ಕೈಲಾಸ, ರೇಣುಕಾ, ಇಂದುಮತಿ, ಮಹೇಶ ಸೇರಿದಂತೆ ಅನೇಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!