ಯಾದಗಿರಿ: ಶ್ರಾವಣ ಮಾಸದ ಅಂಗವಾಗಿ ರಾಮಕಥಾ ಸೇವಾ ಸಮಿತಿ ವತಿಯಿಂದ ರಾಮಕಥಾ ಪ್ರವಚನವನ್ನು ಜು.27ರಿಂದ ಆ.4ರವರೆಗೆ ಇಲ್ಲಿನ ಶಂಕರ್ ಮಿಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜು.27ರಂದು ಬೆಳಗ್ಗೆ 9.30ಕ್ಕೆ ವೀರಭದ್ರೇಶ್ವರ ದೇವಸ್ಥಾನದಿಂದ ಹನುಮಾನ ಮಂದಿರ ಮೈಲಾಪುರ ಬೇಸ್‌ವರೆಗೂ ಮಂಗಳ ಕಳಸ ಯಾತ್ರೆ ನಡೆಯಲಿದೆ. ಗೋವರ್ಧನ ಧಾಮ ವ್ಯಾಸ ಪೀಠದ ಪಂ. ಮದನಮೋಹನಜೀ ಮಹಾರಾಜ ಹಾಗೂ ಸಂಗಡಿಗರಿಂದ ನಿತ್ಯ ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಚನ ನಡೆಯಲಿದೆ ಎಂದು ಹುಮಾನದಾಸ ಮುಂದಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.