ಹಾಸನ

'ಸಕಾಲ'ದಲ್ಲಿ ಗ್ರಾಪಂ ಸೇವೆ

ಹಾಸನ: ಕುಡಿಯುವ ನೀರು ಪೂರೈಕೆ ಸೇರಿದಂತೆ ಆನೇಕ ಸೇವೆಗಳನ್ನು ನಿರ್ದಿಷ್ಟ ವೇಳೆಗೆ ಗ್ರಾಮ ಪಂಚಾಯ್ತಿಗಳು ಒದಗಿಸಬೇಕೆಂದು ರಾಜ್ಯ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. ಆ ಪ್ರಕಾರ 11 ಸೇವೆಗಳನ್ನು ರಾಜ್ಯದ 5627 ಗ್ರಾಮ ಪಂಚಾಯ್ತಿಗಳು ಸಕಾಲದಲ್ಲಿ ಒದಗಿಸಲೇಬೇಕಾಗಿದ್ದು, ಇಲ್ಲದಿದ್ದರೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಈ ಆದೇಶದ ಪ್ರಕಾರ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಕಾರ್ಯ ನಿರ್ವಹಿಸಲು ಬಯಸಿ ಅರ್ಜಿ ಸಲ್ಲಿಸಿದ ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ನೀಡುವುದು ಮತ್ತು ಬೋರ್‌ವೆಲ್ ಕೆಟ್ಟರೆ 30 ದಿನಗಳಲ್ಲಿ ದುರಸ್ತಿ ಮಾಡುವುದು ಸೇರಿದಂತೆ 11 ಸೇವೆಗಳನ್ನು ತುರ್ತಾಗಿ ಒದಗಿಸಬೇಕಾಗಿದೆ. ನಿಗದಿಗೊಳಿಸಿದ ದಿನದೊಳಗೆ ಕಾರ್ಯ ಮುಗಿಸದಿದ್ದಲ್ಲಿ ಪ್ರತಿ ದಿನ ಸಂಬಂಧಪಟ್ಟ ಅಧಿಕಾರಿ ವೇತನದಲ್ಲಿ 50 ಕಡಿತಗೊಳಿಸಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಹೊರಡಿಸಿರುವ ಆದೇಶದಂತೆ ಸಕಾಲದಲ್ಲಿ ಗುರುತಿಸಿರುವ ಸೇವೆಗಳನ್ನು ಗ್ರಾಪಂಗಳು ನಿಗದಿತ ಕಾಲಮಿತಿಯಲ್ಲಿ ಒದಗಿಸುತ್ತಿರುವ ಬಗ್ಗೆ ತಾಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಉಸ್ತುವಾರಿ ವಹಿಸಬೇಕು. ಸೇವೆ ಒದಗಿಸುವಲ್ಲಿ ವಿಫಲರಾದರೆ ಜಿಪಂ ಸಿಇಒ ಜವಾಬ್ದಾರರಾಗುತ್ತಾರೆ.
ಎಲ್ಲ ಗ್ರಾಮ ಸಭೆಗಳಲ್ಲಿ ಸಕಾಲ ಸೇವೆಯಲ್ಲಿ ನಾಗರಿಕರಿಗೆ ನೀಡುವ ಸೌಲಭ್ಯಗಳ ಬಗ್ಗೆ ಪ್ರಚಾರ ಮಾಡಲೇಬೇಕು. ಯಾವುದೇ ಕಾರಣಕ್ಕೂ ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ ಸಕಾಲ ಸೇವೆಗಳನ್ನು ನೀಡುವಲ್ಲಿ ಒಂದು ದಿನಕ್ಕಿಂತ ಹೆಚ್ಚಾಗಿ ವಿಳಂಬವಾಗಬಾರದು.

   ಯಾವ ಸೇವೆಗಳು?
  ಬೋರ್‌ವೆಲ್‌ಗಳನ್ನು 30 ದಿನಗಳಲ್ಲಿ ದುರಸ್ತಿ ಮಾಡಿಸಿ, ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು.
  ಜನಗಣತಿ, ಬೆಳೆ ಗಣತಿ ಮತ್ತು ಜಾನುವಾರು ಗಣತಿಯನ್ನು ಪರಿಸ್ಥಿತಿಗನುಗುಣವಾಗಿ ಮಾಡಿ, ನಾಮಫಲಕಗಳಲ್ಲಿ ಪ್ರದರ್ಶಿಸಬೇಕು.
  ವಿದ್ಯುತ್ ಇಲಾಖೆಗೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ವಾರದಲ್ಲಿ ನೀಡಬೇಕು.
  ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿ ಸಲ್ಲಿಸಿದ 5 ದಿನಗಳಲ್ಲಿ ನೀಡಬೇಕು.
  ಅಕುಶಲ ಕಾರ್ಮಿಕರಿಗೆ ಖಾತ್ರಿ ಯೋಜನೆ ಸೇರಿದಂತೆ ನಾನಾ ಯೋಜನೆಗಳಲ್ಲಿ ಉದ್ಯೋಗ ಒದಗಿಸಬೇಕು.
  ಮನೆಕಂದಾಯ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಎಲ್ಲ ತೆರಿಗೆ ನಿರ್ಧಾರಣಾ ಪಟ್ಟಿಯನ್ನು ಕಾಲ ಕಾಲಕ್ಕೆ ಜನರಿಗೆ ಹೊರೆಯಾಗದಂತೆ ಬದಲಾಯಿಸಬೇಕು.
  ಕಟ್ಟಡ, ವಾಣಿಜ್ಯ ಲೈಸೆನ್ಸ್‌ಗಳನ್ನು 8 ದಿನಗಳಲ್ಲಿ ನೀಡಬೇಕು.
  ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಗ್ರಾಮ ನೈರ್ಮಲ್ಯ ನಿರ್ವಹಣೆ ಕಾರ್ಯ ವೈಖರಿ ಪಾರದರ್ಶಕವಾಗಿರಬೇಕು. ಸಂಬಂಧಪಟ್ಟಂತೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಸಾರ್ವಜನಿಕರಿಗೆ ತಿಳಿಸಲೇಬೇಕು.
  ಅಭಿವೃದ್ಧಿ ಯೋಜನೆಗಳಡಿ ಕಾರ್ಯ ನಿರ್ವಹಿಸಿದ್ದಕ್ಕೆ ಪಾವತಿಸಿದ ಹಣದ ವಿವರಗಳನ್ನು ನಾಗರಿಕರಿಗೆ ತಿಳಿಸಬೇಕು.

-ದಯಾಶಂಕರ ಮೈಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ