ಹಾಸನ

2 ಕ್ಷೇತ್ರಗಳಲ್ಲಿ ಜೆಡಿಎಸ್ ಅವಿರೋಧ ಆಯ್ಕೆ

ಹೊಳೆನರಸೀಪುರ: ಇಲ್ಲಿನ ಪುರಸಭಾ ಚುನಾವಣೆಗೆ 53 ಅಭ್ಯರ್ಥಿಗಳು ಬುಧವಾರ ನಾಮಪತ್ರ ಹಿಂಪಡೆದಿದ್ದು, ಜೆಡಿಎಸ್‌ನ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಂತಿಮವಾಗಿ 63 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು  ಚುನಾವಣಾಧಿಕಾರಿ ತಿಳಿಸಿದ್ದಾರೆ.
ಇತರೇ ಪಕ್ಷದವರು ತಮ್ಮ ನಾಮಪತ್ರ ಹಿಂಪಡೆದ ಕಾರಣದಿಂದಾಗಿ ಇಲ್ಲಿನ 9ನೇ ವಾರ್ಡ್‌ನಿಂದ ಜೆಡಿಎಸ್ ನ ಸುರೇಶ್ ಹಾಗೂ 4ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ಸುಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇದೀಗ ಎಲ್ಲ ಪಕ್ಷಗಳಿಂದ ಸೇರಿ ಒಟ್ಟು 63 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಪಟ್ಟಣದ ಎಲ್ಲಾ 23 ವಾರ್ಡ್‌ಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಕೇವಲ 18 ವಾರ್ಡ್‌ಗಳಲ್ಲಿ ಮಾತ್ರವೇ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 4, 9, 11, 12 ಮತ್ತು 13 ನೇ ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇದೇ ಮೊದಲ ಬಾರಿಗೆ ಬಿಜೆಪಿ ವತಿಯಿಂದ 5ವಾರ್ಡ್‌ಗಳಲ್ಲಿ, ಹಾಗೂ ಕೆಜೆಪಿಯಿಂದ 2ವಾರ್ಡ್‌ಗಳಲ್ಲಿ ಹಾಗೂ ಬಿಎಸ್‌ಆರ್ ಪಕ್ಷದ ವತಿಯಿಂದಲೂ 2ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಅಂತಿಮವಾಗಿ ಕಣದಲ್ಲುಳಿದವರ ವಿವರ: 1ನೇ ವಾರ್ಡ್-ಶೋಭ (ಕಾಂಗ್ರೆಸ್), ಎಂ.ಟಿ.ಶಿಲ್ಪ(ಜೆಡಿಎಸ್). 2ನೇ ವಾರ್ಡ್- ಎಚ್.ಆರ್.ಪ್ರಕಾಶ್ (ಕಾಂಗ್ರೆಸ್), ಎಚ್.ಎಸ್.ಸುದರ್ಶನ(ಜೆಡಿಎಸ್), ರಂಗನಾಥ(ಪಕ್ಷೇತರ). 3ನೇ ವಾರ್ಡ್- ಮುಜಾಹಿದ್ (ಕಾಂಗ್ರೆಸ್), ಜಿಕ್ರಿಯಾ ಅಹಮದ್ ಶರೀಫ್ (ಜೆಡಿಎಸ್). 4ನೇ ವಾರ್ಡ್- ಸುಮ(ಜೆಡಿಎಸ್) ಅವಿರೋಧ ಆಯ್ಕೆ. 5ನೇ ವಾರ್ಡ್- ಕೆ.ಎಚ್.ಜಲೇಂದ್ರ(ಕಾಂಗ್ರೆಸ್), ಫೈರೋಜ್‌ಖಾನ್ (ಜೆಡಿಎಸ್), ಪರ್ವೇಜ್ ಅಹಮದ್ (ಪಕ್ಷೇತರ). 6ನೇ ವಾರ್ಡ್- ಇರ್ಫಾನ್ ಶರೀಫ್ (ಕಾಂಗ್ರೆಸ್), ಮುಫೀದ್ ಆಲಿ(ಜೆಡಿಎಸ್), ಅಬ್ದುಲ್ ಮುನಾಫ್ (ಪಕ್ಷೇತರ), ಮಿರ್ಜಾ ಕಲ್ಬೇ ಹುಸೇನ್ (ಪಕ್ಷೇತರ), ಮೀರ್‌ಬಾಬರ ಆಲಿ(ಪಕ್ಷೇತರ).
7ನೇ ವಾರ್ಡ್- ಮಹಮ್ಮದ್ ಮುಜಾಹಿದ್ (ಕಾಂಗ್ರೆಸ್), ಸಲೀಂ(ಜೆಡಿಎಸ್), ಸಾದಿಕ್‌ಪಾಷ(ಪಕ್ಷೇತರ). 8ನೇ ವಾರ್ಡ್-ಎಂ.ವಿ.ರಮ್ಯಶ್ರೀ(ಕಾಂಗ್ರೆಸ್), ಎಚ್.ಆರ್.ಕಲಾವತಿ(ಜೆಡಿಎಸ್), ಪದ್ಮ(ಬಿಜೆಪಿ). 9ನೇ ವಾರ್ಡ್-ಸುರೇಶ್ (ಜೆಡಿಎಸ್) ಅವಿರೋಧ ಆಯ್ಕೆ. 10ನೇ ವಾರ್ಡ್- ಎ.ಎನ್.ರಾಧಾಕೃಷ್ಣಬಾಬು(ಕಾಂಗ್ರೆಸ್), ಎ.ಆರ್.ರವಿಕುಮಾರ್ ಜೆಡಿಎಸ್), ಎಚ್.ವಿ.ಸುರೇಶ್‌ಕುಮಾರ್ (ಪಕ್ಷೇತರ). 11ನೇ ವಾರ್ಡ್- ಬಿ.ಎಚ್.ಸುಲೋಚನ(ಜೆಡಿಎಸ್), ಸರಸ್ವತಿ(ಪಕ್ಷೇತರ). 12ನೇ ವಾರ್ಡ್- ಕೆ.ಆರ್.ಸುಬ್ರಹ್ಮಣ್ಯ(ಜೆಡಿಎಸ್), ಎಂ.ಎಸ್.ಶಾಂತರಾಜ್ ಪಕ್ಷೇತರ), ಕೆ.ಪ್ರಶಾಂತ್ ಪಕ್ಷೇತರ). 13ನೇ ವಾರ್ಡ್-ಎಚ್.ಎಸ್.ಸ್ವಾಮಿ(ಜೆಡಿಎಸ್), ಪರಮೇಶ(ಪಕ್ಷೇತರ). 14ನೇ ವಾರ್ಡ್-ಎಚ್.ಆರ್.ಕಿರಣ್ ಕುಮಾರ್ ಕಾಂಗ್ರೆಸ್), ಎಚ್.ಸಿ.ಬಸವರಾಜ್ ಜೆಡಿಎಸ್), ಎಚ್.ಡಿ.ಕೇಶವಮೂರ್ತಿ(ಪಕ್ಷೇತರ). 15ನೇ ವಾರ್ಡ್-ಶಶಿಕಲ(ಕಾಂಗ್ರೆಸ್), ಎನ್.ಲಕ್ಷ್ಮೀ(ಜೆಡಿಎಸ್). 16ನೇ ವಾರ್ಡ್- ಎಂ.ರೇಖ(ಕಾಂಗ್ರೆಸ್), ತುಳಸಿ(ಜೆಡಿಎಸ್), ಸರಸ್ವತಿ(ಬಿಜೆಪಿ).
17ನೇ ವಾರ್ಡ್- ಕೆ.ಆರ್.ಸುದರ್ಶನ(ಕಾಂಗ್ರೆಸ್), ಎಚ್.ವಿ.ಪುಟ್ಟರಾಜು(ಜೆಡಿಎಸ್), ಎನ್.ಯೋಗಾನರಸಿಂಹ(ಬಿಜೆಪಿ),ಪಿ.ಆರ್.ಮೋಹನ್ ಬಿಎಸ್‌ಆರ್). 18ನೇವಾರ್ಡ್- ಎಚ್.ಎಸ್.ಗಿರೀಶ್ ಕಾಂಗ್ರೆಸ್),ಎ.ಶ್ರೀಧರ(ಜೆಡಿಎಸ್). 19ನೇ ವಾರ್ಡ್- ಯು ಆರ್. ಚೈತ್ರ(ಕಾಂಗ್ರೆಸ್),ಹೇಮಶ್ರೀ(ಜೆಡಿಎಸ್), ಜ್ಯೋತಿ(ಬಿಜೆಪಿ).20ನೇ ವಾರ್ಡ್- ಸುಮಿತ್ರಾದೇವಿ (ಕಾಂಗ್ರೆಸ್), ಮಮತಾಕುಮಾರಿ(ಜೆಡಿಎಸ್), ಶಿವಮ್ಮ(ಬಿಜೆಪಿ), ಲಕ್ಷ್ಮೀಕುಮಾರಿ (ಕೆಜೆಪಿ),ನಾಗರತ್ನ(ಬಿಎಸ್‌ಆರ್), ಬಿ.ಎಸ್.ಆಶಾರಾಣಿ(ಪಕ್ಷೇತರ).21ನೇ ವಾರ್ಡ್-ಎಚ್.ಎನ್.ರಾಘವೇಂದ್ರ(ಕಾಂಗ್ರೆಸ್), ಲಕ್ಷ್ಮಣ(ಜೆಡಿಎಸ್), ಎಚ್.ಎಂ.ಕೇಶವಮೂರ್ತಿ(ಕೆಜೆಪಿ). 22ನೇ ವಾರ್ಡ್-ಜಯಶಾಂತಮ್ಮ(ಕಾಂಗ್ರೆಸ್),ಗೌರಮ್ಮ(ಜೆಡಿಎಸ್).  23ನೇ ವಾರ್ಡ್- ಎಚ್.ಆರ್.ಮಂಜುನಾಥ್ (ಕಾಂಗ್ರೆಸ್),ಎಚ್.ಕೆ.ರಘುರಾಮ್(ಜೆಡಿಎಸ್)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ