ಹಾಸನ: ನಗರದ ಎ.ವಿ. ಕಾಂತಮ್ಮ ಮಹಿಳಾ ಪಪೂ ಕಾಲೇಜ್, ಹಾರನಹಳ್ಳಿ ರಾಮಸ್ವಾಮಿ ಸುಶೀಲ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ, 2012-13ನೇ ಸಾಲಿನ ಕ್ರೀಡಾ ದಿನಾಚರಣೆ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಸದಸ್ಯ ಎಂ.ಎಸ್. ತಮ್ಮಣ್ಣಗೌಡ ಉದ್ಘಾಟಿಸಿದರು. ಕ್ರೀಡಾ ಹಾಗೂ ಕಾಲೇಜು ವರದಿ ಓದಲಾಯಿತು. ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಕಾಲೇಜು ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ.ಬಿ. ಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರತ್ನ ಕಾಳೇಗೌಡ, ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಖಜಾಂಚಿ ಆರ್. ಶೇಚಗಿರಿ, ಜಿ.ಟಿ. ಕುಮಾರ್, ಸಿ.ಎಸ್. ಕಂಠ, ಸದಸ್ಯರಾದ ಚೌಡಳ್ಳಿ ಪುಟ್ಟರಾಜ್, ಕಾಲೇಜಿನ ಪ್ರಾಂಶುಪಾಲರಾದ ಜೆ. ಶೈಲಜಕುಮಾರಿ, ಶಶಿಕಲಾ, ಉಪ ಪ್ರಾಂಶುಪಾಲ ಯೋಗೀಶ್ವರ್ ಇತರರು ಇದ್ದರು.