ಆಲೂರು: ತಾಲೂಕಿನ ಗಂಜಿಗೆರೆ ವೆಂಕಟರಮಣಸ್ವಾಮಿ ಪ್ರೌಢಶಾಲೆ ವಾರ್ಷಿಕೋತ್ಸವ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಅನುದಾನ ರಹಿತ ತಾಲೂಕು ಒಕ್ಕೂಟ ಅಧ್ಯಕ್ಷ ಮಂಗಲ ನಾಗರಾಜ್ ಮಾತನಾಡಿ, ವಿದ್ಯೆಗೆ ವಿನಯವೇ ಭೂಷಣ, ವಿದ್ಯೆಯೇ ಬಾಳಿನ ಬೆಳಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಬಿ.ಸಿ.ರಾಮೇಗೌಡ ಮಾತನಾಡಿ, ಸಮಾಜದ ಉನ್ನತಿಗೆ ನಾವೆಲ್ಲರೂ ಕೈ ಜೋಡಿಸಿ ದುಡಿಯಬೇಕು ಎಂದರು. ತಾಪಂ ಸದಸ್ಯ ಜಿ.ಆರ್. ರಂಗನಾಥ್ ಮಾತನಾಡಿ, ಅಧ್ಯಾಪಕರು ಸಮರ್ಥವಾಗಿ ದುಡಿದು ಸಮಾಜದ ಕೀರ್ತಿ ಪ್ರಜ್ವಲಿಸಬೇಕು ಎಂದು ತಿಳಿಸಿದರು. ಸಮಾರೋಪ ಭಾಷಣದಲ್ಲಿ ರಾಜ್ಯ ಅನುದಾನರಹಿತ ಶಾಲಾ ಒಕ್ಕೂಟದ ಕಾರ್ಯದರ್ಶಿ ಪ್ರೊ.ಚಂದ್ರಪ್ಪ ಮಾತನಾಡಿ, ಸಮಾಜದಲ್ಲಿನ ಮೌಢ್ಯತೆಯನ್ನು ಹೋಗಲಾಡಿಸಿ ಸಾರ್ವಜನಿಕ ಚಿಂತನಾ ಪ್ರವೃತ್ತರಾಗಿ ಎಂದರು. ಜಿಲ್ಲಾ ಅನುದಾನರಹಿತ ಶಾಲಾ ಒಕ್ಕೂಟದ ಕಾರ್ಯದರ್ಶಿ ಶಿವಸ್ವಾಮಿ, ಖಜಾಂಚಟಿ ಹೇಮಂತ್, ಮುಖ್ಯೋಪಾಧ್ಯಾಯಿನಿ ಭವಾನಿ, ಸಂಸ್ಥೆಯ ನಾಗಮ್ಮ ರಾಮೇಗೌಡ ಇತರರು ಇದ್ದರು.