ಕನ್ನಡಪ್ರಭ ವಾರ್ತೆ ್ಣ ಹಾಸನ ್ಣ ಮಾ. 13
ನಗರದ ಆರ್.ಸಿ. ರಸ್ತೆ, ಜೆಮ್ನಾಸ್ಟಿಕ್ ಆವರಣದಲ್ಲಿ ಮಂಗಳವಾರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ ಜಿಲ್ಲೆಯ ಕ್ರೀಡಾಪಟುಗಳ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿ, ಇಂಥ ಸಾಧನೆ ಮಾಡಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಕ್ರೀಡೆಗಳು ನಮ್ಮಲ್ಲಿ ಇನ್ನೂ ಬಲಿಷ್ಠವಾಗಬೇಕು. ದೇಶದಲ್ಲಿ ನಮ್ಮ ಕ್ರೀಡೆ ಪುರಾತನವಾಗಿದೆ. ಶಿಕ್ಷಣವು ಗುರುಕುಲ ಪದ್ಧತಿಯಿಂದ ಜಾತಿಗೆ ಬಂದಿದೆ. ಕೆಳ ಮಟ್ಟದಿಂದ ಈಗಿನ ಗುಣಮಟ್ಟದವರೆಗೂ ಶಿಕ್ಷಣ ಲಭ್ಯವಾಗುತ್ತಿದೆ ಎಂದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ ಜಿಲ್ಲೆಯ 70ಕ್ಕಿಂತ ಹೆಚ್ಚು ಕ್ರೀಡಾಪಟುಗಳನ್ನು ಅಭಿನಂದಿಸಿದರು. ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಶಿಕ್ಷಣ ಇಲಾಖೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಆರ್. ಬಸವರಾಜ್, ಕಾಲೇಜು ಉಪ ಪ್ರಾಂಶುಪಾಲ ಪಾರ್ಥ, ಶಿಕ್ಷಕರ ಸಂಘದ ವಿಜಯಕುಮಾರ್, ರಂಗಸ್ವಾಮಿ, ಅಣ್ಣೇಗೌಡ, ನಿರಂಜನ್ ಇದ್ದರು. ದೈಹಿಕ ಶಿಕ್ಷಣಾಧಿಕಾರಿ ಕೆ.ಜಿ. ಈಶ್ವರಪ್ಪ ಸ್ವಾಗತಿಸಿದರು.