ಸಕಲೇಶಪುರ: ಕುಡಿಯುವ ನೀರಿನ ಬವಣೆ ಎದುರಿಸುತ್ತಿದ್ದ ಹೆನ್ನಾಲಿ ಕೃಷ್ಣಪುರ ಗ್ರಾಮಸ್ಥರಿಗೆ ಕೊನೆಗೂ ಪರಿಹಾರ ದೊರಕಿದ್ದು ಶುಕ್ರವಾರ ಗ್ರಾಮದಲ್ಲಿ ಕುಡಿಯುವ ನೀರಿನ ತೆರೆದ ಬಾವಿ ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಗ್ರಾಮದ ಸುಮಾರು 40 ಕುಟುಂಬಗಳು ಪರಿತಪಿಸುತ್ತಿದ್ದವು. ಈ ಸಂಬಂಧ ಹಲವು ಬಾರಿ ತಾಪಂಗೆ ಮನವಿ ಮಾಡಿದ್ದರ ಪರಿಣಾಮ ಹೆಬ್ಬಸಾಲೆ ಗ್ರಾಪಂ ವತಿಯಿಂದ ಕುಡಿಯುವ ನೀರಿಗಾಗಿ 1.20 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು ಶುಕ್ರವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ
ಎನ್.ಪಿ ಮಲ್ಲೇಶ್, ರೇವಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ಮಲ್ಲೇಶ್, ನಾಗೇಶ್ಕುಮಾರ್ ಗ್ರಾಮಸ್ಥರು ಇದ್ದರು.